ಈ-ಜೋನ್ ಅಂದರೆ ಇಂಗ್ಲಿಶ್-ಜೋನ್ ಅಂತಾನಾ?
ಇದೇ ತಿಂಗಳ 12 ಮತ್ತು 13ನೇ ತಾರೀಕಿನಂದು ಈ-ಝೋನ್‍ನವರು ಸೊನ್ನೆ ಮಾರ್ಜಿನ್ ವ್ಯಾಪಾರ ಇಟ್ಕೊಂಡಿದ್ರು.
ಕೊಳ್ಳುಗರಿಗೆ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಲಾಗುತ್ತದೆ ಅಂತ ಹೇಳ್ಕೊತಾ ಊರಲ್ಲೆಲ್ಲಾ ಹೋರ್ಡಿಂಗ್‍ಗಳನ್ನ ಹಾಕ್ಸಿದ್ರು.
ಆದ್ರೆ ಈ ಹೋರ್ಡಿಂಗ್‍ಗಳು ಇಂಗ್ಲಿಷ್‍ನಲ್ಲಿ ಮಾತ್ರಾ ಇದ್ದು, ಈ-ಝೋನ್‍ಗೆ ಕನ್ನಡದ ಬಗೆಗಿರೋ ಧೋರಣೆ ಎತ್ತಿ ತೋರುಸ್ತಿತ್ತು.
ಹೆಚ್ಚು ಜನರನ್ನ ತಲುಪಬೇಕು ಅಂದ್ರೆ ಕನ್ನಡ ಬಳಸ್ಬೇಕು
ಬೆಂಗಳೂಲ್ಲಿ 70% ಜನರು ಕನ್ನಡ ದಿನಪತ್ರಿಕೆಗಳನ್ನೇ ಓದುತ್ತಿರೋವಾಗ, ಹೆಚ್ಚು ಜನರನ್ನ ಆಕರ್ಷಿಸಬೇಕು ಅಂತಂದ್ರೆ, ಕನ್ನಡಲ್ಲೂ ಜಾಹೀರಾತು ನೀಡಬೇಕು.
ಬರೀ ಇಂಗ್ಲಿಷ್‍ನಲ್ಲಿ ಮಾತ್ರಾ ಜಾಹೀರಾತು ಹೋರ್ಡಿಂಗ್‍ಗಳ್ನ ಹಾಕ್ಸುದ್ರೆ, ಜಾಹೀರಾತಿನ ಉದ್ದೇಶನೇ ಈಡೇರ್ದಂಗಲ್ಲ.
ಬರೀ ಇಂಗ್ಲಿಶ್ ನಲ್ಲಿ ಮಾಹಿತಿ ಕೊಟ್ಟು, ತಮ್ಮ ಬಗ್ಗೆ ಹೇಳಿಕೊಳ್ಳಲು ಜಾಹಿರಾತಿನಲ್ಲಿ ಕನ್ನಡ ಬೇಡವೇ ಬೇಡವೆಂಬ ನಿಲುವು ಇವರದ್ದಾಗಿರುವಾಗ ನಮಗೆಲ್ಲಾ ಹೀಗೆ ಅನಿಸುವುದು ಸಹಜವಲ್ಲವೆ:
- ಇವರ ಅಂಗಡಿಗೆ ಇಂಗ್ಲಿಶ್ ಬಂದರೆ ಮಾತ್ರ ಸ್ವಾಗತ, ಕನ್ನಡ ಮಾತ್ರ ಬಂದರೆ ಪ್ರವೇಶ ಅಥವಾ ಆಫರ್ ಇಲ್ಲವೇ?
- "ಜಾಹೀರಾತಿನಲ್ಲಿ ಕನ್ನಡ ಬಳಸೋದು ಅವರ ವ್ಯಾಪಾರದ ದ್ರುಷ್ಟಿಯಿಂದಾ ಮುಖ್ಯ" ಅನ್ನೋದೇ ಗೊತ್ತಿಲ್ವಾ?
- "ಬೆಂಗಳೂರಿನಲ್ಲಿ ಕನ್ನಡಕ್ಕಿರೋ ತಲುಪುಶಕ್ತಿ ಬೇರೊಂದು ಭಾಷೆಗಿಲ್ಲ", ಆದರೂ ಇಲ್ಲಿ ಕನ್ನಡವನ್ನೇ ಬಿಟ್ಟಾಕಿರೋದು ಅವರ ವ್ಯಾಪಾರಕ್ಕೇ ಕುಂದು ಉಂಟು ಮಾಡಲಿದೆ.
ಇದೇ ಅನಿಸಿಕೆಗಳನ್ನು ನಾವು ಇವರಿಗೆ ಮಿಂಚೆಗಳಲ್ಲಿ ತಿಳಿಸಿಕೊಡಬಹುದು, ಸರಿಪಡೆಗೆ ಒತ್ತಾಯಿಸಬಹುದು.
ಇವರ ಮಿಂಚೆ: support@futurebazaar.com
Comments
ಉ: ಈ-ಜೋನ್ ಅಂದರೆ ಇಂಗ್ಲಿಶ್-ಜೋನ್ ಅಂತಾನಾ?