ಇಂತಹ ಸಮ್ಮಿಲನಗಳು ಅವಶ್ಯ ನಡೆಯುತ್ತಿರಬೇಕು ಆಗಾಗ!

ಇಂತಹ ಸಮ್ಮಿಲನಗಳು ಅವಶ್ಯ ನಡೆಯುತ್ತಿರಬೇಕು ಆಗಾಗ!

ಸಂಪದಕೆ ವರುಷ ತುಂಬುತಿರುವುದಂತೆ ಐದು
ಅದಕೆ ಅದರ ಹೆಸರು ಸಂಪದ ಸಮ್ಮಿಲನ ಐದು


ಸಂಪದದ ರೂವಾರಿ ನಾಡಿಗರೇ ಅಲ್ಲಿ ಗೈರು
ಬಂದಿರಲೇ ಇಲ್ಲ ಬರುತ್ತೇನೆಂದಿದ್ದ ಇತರರೂ


ನಿಜವಾಗಿಯೂ ನನಗಿರಲಿಲ್ಲ ಅತಿಯಾದ ನಿರೀಕ್ಷೆ
ಅಲ್ಲಿ ಸೇರಿದವರು ಬರೆಯ ಬಂದಂತಿತ್ತು ಪರೀಕ್ಷೆ


ಆದರೂ ಅಳೆದು ತಿದ್ದಿ ಅಂಕ ಕೊಡುವವರಿರಲಿಲ್ಲ
ಸದಭಿಪ್ರಾಯದ ಸಹೃದಯಿಗಳೇ ಅಲ್ಲಿ ಇದ್ದರಲ್ಲ


ಅಂಕೆ ಮೀರಿದ ಮಾತುಗಳೇ ಕೇಳಿಸಿರಲಿಲ್ಲ ಅಲ್ಲಿ
ನಕ್ಕು ನಗಿಸುವುದಕೇ ಸಮಯದ ಕೊರತೆ ಇತ್ತಲ್ಲಿ


ಶ್ರೀಮತಿ ಶಾಂತೀ ಗೋಪೀನಾಥರ ಗಣಪ ಭಜನೆ
ಆರಂಭದಲೇ ತುಂಬಿತ್ತು ನಮ್ಮಲ್ಲಿ ಒಳ್ಳೆಯ ಭಾವನೆ


ಹರೀಶ ಆತ್ರೇಯರು ಎಲ್ಲರನೂ ಮುತುವರ್ಜಿಯಿಂದ
ಪರಿಚಯ ಮಾಡಿಸಿದ ಶೈಲಿ ನೀಡಿತು ಆಶ್ಚರ್ಯಾನಂದ


ತೇಜಸ್ವಿಯವರು ಓದಿದ ಅವರ ಮೊದಲ ವಿರಹ ಕವನ
ಪ್ರೀತಿ ಪೂಜೆಯಲಿ ಸಮರ್ಪಿಸಿದಂತಿತ್ತು ಅವರು ಹವನ


ನಾಗರಾಜರಿಗೆ ಅದೇಕೋ ನಿನ್ನೆ ಸಮಯದ ಅಭಾವ
ಆದರೂ ನಿರಾಶೆಮಾಡಿ ಹೋಗಬಾರದೆಂಬ ಅವರ ಭಾವ


ಚೇತನ ಕೋಡುವಳ್ಳೀ ಕಣ್ಣಲ್ಲಿ ಜೀವಂತವಿದೆ ಹುಡುಗಾಟ
ಅವರ ಬರಹಗಳಲ್ಲಿ ನಿಜದಿ ಇದೆ ಅದೇನೋ ಹುಡುಕಾಟ


ಹೊಳೆನರಸೀಪುರ ಮಂಜುನಾಥರದು ರಾಜ ಗಾಂಭೀರ್ಯ
ಮಾತಿಗೆ ಇಳಿದರೆ ಮಾತ್ರ ನಿಜಕ್ಕೂ ಎಲ್ಲರಿಗೂ ಆಶ್ಚರ್ಯ


ಕಣ್ಣಿಗೆ ಬಿದ್ದ ದೃಶ್ಯಗಳನ್ನೆಲ್ಲಾ ಕತೆಗಿಳಿಸಬಲ್ಲ ಜಾಣ ಆತ
ಬೇಸರಪಡದೇ ಕೇಳುತ್ತಲೇ ಇರಬೇಕು ನಾವವರ ಮಾತ


ಬೆಳ್ಳಾಲ ಗೋಪೀನಾಥ ರಾವ್ ರದು ಬಹುಮುಖಿ ವ್ಯಕ್ತಿತ್ವ
ಕತೆಯಾದರೂ ಕವಿತೆಯಾದರೂ ಎರಡರಲೂ ಇದೆ ಸತ್ವ


ಶ್ಯಾಮಲಾ ಜನಾರ್ಧನನ್ ಕತೆ ಓದುವ ಶೈಲಿ ನನಗೆ ಇಷ್ಟ
ಅವರು ವಿಮರ್ಶೆ ಮಾಡುವ ಶೈಲಿಯನು ನಕಲಿಸಲು ಕಷ್ಟ


ನನಗೋ ಜೀವನದ ಮೊದಲ ಅವಕಾಶ ಮೈಮರೆತು ಹೋದೆ
ಐದರಲ್ಲಿ ನಾಲ್ಕನ್ನೇ ಓದಿ ಪುಟತಿರುವಲು ನಾ ಮರೆತೇ ಹೋದೆ


ಗೊತ್ತಲ್ವಾ ರೂಪಾರಾವ್ ಕತೆ ಹೆಣೆಯುವುದರಲ್ಲಿ ನಿಸ್ಸೀಮರು
ನಮ್ಮ ಮುಂದೆ ಕೂತಲ್ಲೇ ಒಂದು ಕತೆ ಹೆಣೆದು ಹೇಳಿಬಿಟ್ಟರು


ಅಂಜನ್ ಕುಮಾರರು ಶಾಂತ ಸ್ವಭಾವದ ಮೂರ್ತಿಯಂತೆ
ಅವರೊಳಗೆ ತುಂಬಿಕೊಂಡಿದೆ ಸಾಕಷ್ಟು ಅನುಭವಗಳ ಕಂತೆ


ಕವಿ ನಾಗರಾಜರು ದೂರದಿಂದ ಬಂದಿದ್ದೇ ನಮ್ಮೆಲ್ಲರ ಭಾಗ್ಯ
ನಮ್ಮ ಕಿವಿಗಳಿಗೆ ಅವರ ಹಿತವಚನಗಳನು ಕೇಳುವ ಸೌಭಾಗ್ಯ


ಇಂತಹ ಸಮ್ಮಿಲನಗಳು ಅವಶ್ಯ ನಡೆಯುತ್ತಿರಬೇಕು ಆಗಾಗ
ಮನಸ್ಸು ಹಗುರವಾಗುತ್ತದೆ ಭೇದ ಭಾವ ಮರೆತು ಬೆರೆತಾಗ


*****************************


ಆತ್ರಾಡಿ ಸುರೇಶ ಹೆಗ್ಡೆ


 ಚಿತ್ರಗಳು ಇಲ್ಲಿವೆ


http://sampada.net/image/26035


ಚಿತ್ರವರದಿಗಳು ಇಲ್ಲಿವೆ


http://sampada.net/article/26036 


http://sampada.net/article/26037 

Rating
No votes yet

Comments