ನೊಣ ಕಾಫಿ ಎಷ್ಟು ಕುಡಿಯತ್ತೆ ಪಾಪ!

ನೊಣ ಕಾಫಿ ಎಷ್ಟು ಕುಡಿಯತ್ತೆ ಪಾಪ!

ಟೈಮ್ ಪಾಸ್

1

ನಿಮಗೆ ಗೊತ್ತಾ? ಚೀನಿಯರು ಒಂದು ವಸ್ತುವನ್ನು ಮೂರು ಸ್ತರದಲ್ಲಿ ಮಾಡ್ತಾರಂತೆ. ಮೊದಲನೆಯ ಸ್ತರದ ವಸ್ತುಗಳು ಅಮೇರಿಕಕ್ಕಾಗಿ. ಎರಡನೆಯ ಸ್ತರದವು ಭಾರತಕ್ಕಾಗಿ.
ಮೂರನೆಯ ಸ್ತರದವು?
ಸ್ವಂತ ಉಪಯೋಗಿಸುವದಕ್ಕಾಗಿ.

2

 

ಅಲ್ಲಾ ಎಮ್ಮೆ ಹುಲ್ಲು ತಿಂದು ಹಾಲು ಕೊಡುತ್ತದಲ್ಲಾ? ಅದಕ್ಕೆ ಹಾಲು ಕುಡಿದು ಹುಲ್ಲು ಕೊಡೊದಿಕಾಗುತ್ತಾ?

 

3

 

ಕಳ್ಳನಿಗೆ ಎಲ್ಲದಕ್ಕಿಂತ ಹೆಚ್ಚು ಯಾವದರ ಭಯವಿರುತ್ತೆ ಗೊತ್ತಾ?
ನೆಗಡಿಯಿಂದ ಅಂತೆ.

4


ಅದೇ ಹೆಂಗಸು ಯಾವುದಕ್ಕೆ ಹೆದರ್ತಾಳೆ ಗೊತ್ತಾ?
ವೃದ್ಧಾಪ್ಯಕ್ಕೆ.

 

 

5


ಎಲ್ಲಕ್ಕಿಂತ ಕಷ್ಟದ ಕೆಲಸ ಯಾವುದು ಗೊತ್ತಾ?
ಎಮ್ಮೆ ಸಾಕೋದು.
ಯಾಕೆ ಹೇಳಿ?
ಮೊದಲನೇದು ಅದು ಎಮ್ಮೆ.
ಎರಡನೇದು ಅದು ಹೆಣ್ಣು.


ಡ್ಯಾನ್ಸ್ ಮಾಡ್ತೀರಾ?

ಹೋಟೆಲಲ್ಲಿ ಗಿರಾಕಿ ಸರ್ವರಿಗೆ " ಏನಯ್ಯ ನೀನು ತಂದ ಕೋಳಿಯ ಒಂದು ಕಾಲು ಚಿಕ್ಕದಿದೇ?"
ಸರ್ವರ್ " ಯಾಕೆ ಸಾರ್? ನೀವೇನು ಅದ್ರ ಜತೆ ಡ್ಯಾನ್ಸ್ ಮಾಡ್ಬೇಕಾ?"

 

ಎಷ್ಟು ಕುಡಿಯತ್ತೆ ಪಾಪ!

ಗಿರಾಕಿ " ಏನಯ್ಯಾ ನೀನು ತಂದಿಟ್ಟಿರೋ ಈ ಕಾಫಿಯಲ್ಲಿ ನೊಣ ಬಿದ್ದಿದೇ?"
ಸರ್ವರ್" ಏನ್ಸಾರ್ ಯಾವಾಗ್ಲೂ ಮನಸ್ಸು ದೊಡ್ಡದಿರಬೇಕು, ಅಷ್ಟು ಚಿಕ್ಕ ನೊಣ ನಿಮ್ಮ ಎಷ್ಟು ಕಾಫಿ ಕುಡಿದೀತು ಹೇಳಿ?"

 




Rating
No votes yet

Comments