ಯಾ ಕುಂದೇಂದು ತುಷಾರಹಾರ ಧವಳಾ ...

ಯಾ ಕುಂದೇಂದು ತುಷಾರಹಾರ ಧವಳಾ ...

ನೆನ್ನೆ ಮಹೇಶರು ಗಿಳಿಗೈಯೆ, ಶ್ರಿಂಗೇರಿ ಶಾರದೆಯ ಒಂದು ಸ್ತುತಿಯನ್ನು ಬಲು ಸೊಗಸಾಗಿ ಕನ್ನಡಯಿಸಿದ್ದರು.

ಅದರದ್ದೇ ಹುರುಪಿನಲ್ಲಿ, ನಾನು ಇನ್ನೊಂದು ಪ್ರಸಿದ್ಧ ಸರಸ್ವತಿಯ ಪ್ರಾರ್ಥನೆಯನ್ನು ಕನ್ನಡಕ್ಕೆ ತಂದಿದ್ದೇನೆ - ಬಹಳ ಪ್ರಖ್ಯಾತ ಸ್ತುತಿ ಇದು. ಎಲ್ಲರಿಗೂ ಪರಿಚಿತವಾದ್ದು.

ಸಂಸ್ಕೃತ ಮೂಲ:

ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ
ಕನ್ನಡಕ್ಕೆ, ನನ್ನ ಪ್ರಯತ್ನ:
ಕಾಯದಲಿ ನೀ ಬೆಳ್ಪು ಮಂಜುಮಲ್ಲಿಗೆತಿಂಗಳನಿತು; ಬಿಳಿಯುಟ್ಟು
ಕೈಯಲಿ ಪೊಳೆವ ವರವೀಣೆ ಪಿಡಿದು ನಿಂದೆ ನೀ ಬೆಳ್ದಾವರೆಯಲಿ
ತಾಯೆ! ಆ ಬೊಮ್ಮಹರಿಶಿವರಿಂದಲೂ ಸಲ್ಲುವುದು ಪೂಜೆ ನಿನಗೆ!
ಕಾಯೆ ಸರಸತಿಯೆ ಇಂದೆನ್ನ ಕೈಬಿಡದೆ ಉಳಿಸದೇ ಜಡತೆಯನ್ನು
(ಮೂಲದ third person ಅನ್ನು ನಾನು first person ಗೆ ಬದಲಿಸಿಬಿಟ್ಟಿದ್ದೇನೆ - ಮನ್ನಿಸಿರಿ)
ಆಗುವುದು ಪೂಜೆಯಿಂದಾದ ಅವಾಂತರಗಳ ನಂತರ, ಅದು ಸಲ್ಲುವುದು ಪೂಜೆಯಾಗಿ ಮಾರ್ಪಾಟಾಗಿದೆ :)
-ಹಂಸಾನಂದಿ
Rating
Average: 5 (1 vote)

Comments