ನಾ ಕವಿಯಾದೆ...........
ನನ್ನ ಬೋ ದಿನ್ದ ಕನಸು ಕವಿಯಾಗಬೇಕು ಅಂತಾ. ಅದಕ್ಕೆ ನನ್ನ ಸ್ನೇಹಿತರನ್ನೆಲ್ಲಾ ಕೇಳಿದೆ, ನಾನು ಕವಿಯಾಗಬೇಕು ಕನ್ರಲ್ಲಾ ಏನ್ ಮಾಡ್ಬೇಕು ಅಂತಾ, ಮೊದ್ಲು ಭಾಸೆ ಸುದ್ದವಾಗಿರಬೇಕು, ಆಮ್ಯಾಕೆ ಪ್ರಸಾಂತ ಜಾಗದಾಗೆ ಕುಂತು ತಲೆಗೆ ಬಂದಿದ್ದನ್ನ ಬರೀಬೇಕು ಲಾ ಅಂದ್ರು. ಒಂದ್ ಕೆಲ್ಸ ಮಾಡು ಯಾರಾದ್ರೂ ಪ್ರಸಿದ್ದ ಸಾಹಿತಿನಾ ಕಂಡು ಆಮ್ಯಾಕೆ ಬರೇಯೋದನ್ನ ಸುರು ಮಾಡ್ಲಾ ಅಂದ್ರು. ಅವರ್ ಹೇಳೋದ್ರಾಗು ಅರ್ಥ ಐತೆ ಅಂದು.
ಪ್ರಸಿದ್ದ ಸಾಹಿತಿ ಚಂಪಾರವರನ್ನು ಭೇಟಿಯಾದೆ. ಸರ್ ನಾನು ಕವಿಯಾಗಬೇಕು ಅಂತಾ ಇದೀನಿ ಏನ್ ಮಾಡ್ಬೇಕು ಸಾ. ನೋಡಪ್ಪಾ ಇರೋ ಕವಿಗಳಿಗೆ ಈಗ ಕನ್ನಡದಾಗೆ ಜಾಗ ಇಲ್ಲ. ಅದೂ ಅಲ್ಲದೆ ನೀನೂ ಮಾತಾಡೋ ರೀತಿ ನೋಡಿದ್ರೆ, ನೀನು ಒಂದಿನ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಆಗೋ ಹಂಗೆ ಕಾಣ್ತೀಯಾ ಅಂದ್ರು. ಸಾ ನನ್ಗೆ ಅಷ್ಟೆಲ್ಲಾ ಪದವಿ ಆಸೆ ಇಲ್ಲಾ, ಕವಿ ಅಂತ ಆದ್ರೆ ಸಾಕು ಸಾ. ನೋಡು ಮೂರು ತಿಂಗಳ ನಂತರ ಕಸಾಪದಾಗೆ "ಕವನ ವಾಚನ" ಕಾರ್ಯಕ್ರಮ ಇದೆ. ಅಲ್ಲಿಗೆ ನಿನಗೆ ತಿಳಿದಿದ್ದು ಬರ್ಕೊಂಡು ಬಂದು ಓದು. ಅದರ ರೇಟೀಂಗ್ ನೋಡಿಕೊಂಡು ನಿನ್ನನ್ನ ಸಿಸ್ಯನಾಗಿ ಮಾಡಿಕೊಳ್ಳುತ್ತೇನೆ ಅಂದ್ರು.
ಖುಸಿಯಾಗಿ ಊರಿಗೆ ಬಂದೆ. ನನ್ನ ಸ್ನೇಹಿತರು ಹೇಳಿದ್ದು ನೆನಪಿಗೆ ಬಂತು. ಪ್ರಸಾಂತ ಜಾಗದಾಗೆ ಬರಿಬೇಕು ಅಂತಾ. ಪಕ್ಕದಾಗೆ ಒಂದು ದೊಡ್ಡ ಗುಡ್ಡ ಐತೆ. ಅದೇ ಸರಿ ಎಂದು ಬೆಳಗ್ಗೆ 6ಕ್ಕೆ ಊಟ ಕಟ್ಕೊಂಡು ಓಯ್ತಿದ್ದೆ. ಗುಡ್ಡದ ತುದಿ ತಲುಪಕ್ಕೆ ಮಧ್ಯಾಹ್ನ 12 ಆಯ್ತಿತ್ತು. ಹತ್ತಿದ್ದ ಸುಸ್ತು ಒಂದ್ಕಡೆ, ಹಸಿವು ಬೇರೆ, ಊಟ ಮಾಡಿ ಬರೆಯುವಾ ಅನ್ನೊಷ್ಟಿತ್ತಿಗೆ ನಿದ್ದೆ. 3ಗಂಟೆಗೆ ಎಚ್ಚರ ಆಯ್ತಿತ್ತು. ಒಂದೆರೆಡು ಲೈನ್ ಬರೆಯೊದರೊಳಗೆ 4ಗಂಟೆ. ಮತ್ತೆ ಗುಡ್ಡ ಇಳಿದು ಊರಿಗೆ ವಾಪಸ್ಸು ಹಿಂಗೆ ಎರಡು ತಿಂಗಳು ಹೋಗಿ ಬಂದು ಮಾಡಿದ್ದಕ್ಕೆ ಹತ್ತಾರು ಕವನ ಬರೆದಿದ್ದೆ. ಹಾಗೇ ಒಂದು 5ಕೆಜಿ ಡವನ್ ಆಗಿದ್ದೆ.
ಅವ್ವ ಕೇಳೋಳು ಬೆಳಗ್ಗೆ ಎದ್ದು ಗದ್ದೆ ಹೋಗಲಾ ಅಂದ್ರೆ ಎಲ್ಲಿಗಲಾ ಓಯಿತಿಯಾ. ನಾನ್ ಕವಿಯಾಗ್ಬೇಕು ಸುಮ್ಕಿರವ್ವಾ. ಕಾರ್ಯಕ್ರಮ ಬಂದೇ ಓಯ್ತು. ಸ್ಟೇಜಿನಾಗೆ ಚಂಪಾ, ಸೇರಿದಂತೆ ಹಲವು ಕವಿ ಮಹಾಷಯರು. ಎಲ್ಲರೂ ಅವರವರ ಕವನ ವಾಂಚಿಸ್ತಿದ್ರು. ನನ್ನ ಸರದಿ. ವೇದಿಕೆ ಓದೋನೆ ಚಂಪಾಗೆ ಒಂದು ಉದ್ದಂಡ ನಮಸ್ಕಾರ ಹಾಕಿ ಸುರುಹಚ್ಕೊಂಡೆ ನೋಡಿ ಎಲ್ಲಾ ಮೂರ್ಛೆ ಹೋಗಿದ್ದೆ.
ಗುರುವೇ ಸಿದ್ದೇಸ
ಕವನ "ಡಬ್ಬಿ"
ಡಬ್ಬಿ ಮೇಲೆ ಡಬ್ಬಿ
ಚಿಕ್ಕ ಡಬ್ಬಿ ಮೇಲೆ ದೊಡ್ಡ ಡಬ್ಬಿ
ಅದರ ಮೇಲೆ ಮತ್ತೊಂದು ಡಬ್ಬಿ
ಡಬ್ಬಿ ಮೇಲೆ ಡಬ್ಬಿ.
ಡಬ್ಬಿ ಒಳಗೆ ಒಂದು ಡಬ್ಬಿ
ಡಬ್ಬಿ ಹೊರಗೆ ಮತ್ತೊಂದು ಡಬ್ಬಿ
ಮತ್ತೆ ಡಬ್ಬಿ ಮೇಲೆ ಡಬ್ಬಿ ಅಂತಿದ್ದಾಗೆನೇ ಸ್ಟೇಜ್ ನಾಗೆ ಇದ್ದ ಕವಿ ಮಹಾಷಯರು ಒಬ್ಬರು "ಅವನು ಎಷ್ಟು ಡಬ್ಬಿ ತಂದ್ಯಾನೆ ಕೇಳ್ರಿ" ಅದಕ್ಕೆ ಚಂಪಾ ಎಷ್ಟು ಟಬ್ಬಿ ಮನೆ ಹಾಳಾಗ್ಲಿ. ಅವನ್ .......ನ್, ಆ ಡಬ್ಬಿ ಹೆಂಗೆ ಬ್ಯಾಲೆನ್ಸ್ ಮಾಡ್ತೀಯಲೇ ಅಂದ್ರು. ಸಾ ಈ ಕವನ ಬೇಡ ಇನ್ನೊಂದು ಕವನಾ ಸಾ.
ಗುರುವೇ ಸಿದ್ದೇಸ
ಕವನ "ನಾಯಿ ಮರಿ ಮಲಗಿದೆ"
ನಾಯಿ ಮರಿಯೊಂದು ಮನೆಯಲ್ಲಿ ಮಲಗಿದೆ
ಅದೂ ಚಾಪೆಯ ಮೇಲೆ ಮಲಗಿದೆ
ಚಾಪೆಯ ಮೇಲೆ ಹಾಕಿದ ಗೋಣಿ ಚೀಲದ ಮೇಲೆ ಮಲಗಿದೆ.
ನಾಯಿಮರಿ ಮಲಗಿದೆ.
ನಾಯಿಮರಿ ಬಾಲ ಮುದುಡಿಕೊಂಡು ಮಲಗಿದೆ
ನಾಯಿಮರಿ ಮುಖವನ್ನು ಉತ್ತರಕ್ಕೆ ಹಾಕಿ ಮಲಗಿದೆ... ಮಲಗಿದ್ಯಪ್ಪಾ ಅದನ್ನು ಎಬ್ರಸ್ರೋ ಕವನ ಮುಂದೆ ಹೋಗ್ಲಿ ಅಂದ್ರು. ಸಾ ಅದು ಬೇರೆ ಕವನ ಇದೆ ಸಾ, "ನಾಯಿ ಮರಿ ಎದ್ದಿದೆ" ಅಂತಾ. ಅಲ್ಲಿಯ ತನಕ ನಗುತ್ತಿದ್ದ ಚಂಪಾ, ಮುಖ ಗಂಟು ಹಾಕಲು ಸುರು ಮಾಡಿದ್ರು.
ಗುರುವೇ ಸಿದ್ದೇಸ
ಕವನ "ಪ್ರವಾಸ"
ಧರ್ಮಸ್ಥಳಕ್ಕೆ ಹೋದರೆ ಸರ್ಟು ತೆಗಿಬೇಕು
ಸುಬ್ರಹ್ಮಣ್ಯಕ್ಕೆ ಹೋದರೆ ಸರ್ಟು ತೆಗಿಬೇಕು
ಶ್ರವಣ ಬೆಳಗೊಳಕ್ಕೆ ಹೋದರೆ........ ಲೇ ಯಾವನೋ ಇವನನ್ನ ಕರೆಸಿದ್ದು ಅಂತಾ ಸ್ಟೇಜ್ನಾಗೆ ಕೂಗಾಟ. ಚಂಪಾ ಮಾತ್ರ ನನ್ನನ್ನ ನೋಡಿ ಇತ್ತ ನಗುವುದಕ್ಕೂ ಆಗದೆ ಬಯ್ಯೋದಿಕ್ಕೂ ಆಗದೆ. ಕಪ್ಪ ಬಣ್ಣದಲ್ಲೇ ಕೆಂಪಾಗಿದ್ದರು. ಏ ನಿನ್ ಕವನದ ಪೇಪರ್ ತೊಗೊಂಡು ಬಾಪ್ಪಾ. ಹೌದು ಎಲ್ಲಾದ್ರೂ ಮೇಲೂ ಗುರುವೇ ಸಿದ್ದೇಸ ಅಂತಾ ಬರೆದಿದ್ದೀಯಲ್ಲಾ ಏನಿದು. ಸಾ ಪರೀಕ್ಸೆ ಬರೆಯೋಕ್ಕಿಂತ ಮುಂಚೆ ಪೇಪರ್ ಮ್ಯಾಕೆ "ಓಂ" ಬರೆಯೋಲ್ವಾ ಸಾ ಹಂಗೆ. ಇದು ನಮ್ಮ ಕುಲ ದ್ಯಾವರು.
ಸಾ ಕಡೇ ಕವನ ಏಳ್ ಬಿಡ್ತೀನಿ. ಹೇಳಿ ಸಾಯಿ
ಗುರುವೇ ಸಿದ್ದೇಸ
ಕವನ "ಪ್ರೇಮ"
ಪ್ರೇಮ ನೀ ಎಲ್ಲಿರುವೆ
ಪ್ರೇಮ ನಿನ್ನನ್ನು ನಾನು ಪ್ರೇಮಿಸಬೇಕು
ಪ್ರೇಮ ನಿನಗಿಂತ ನಿನ್ನ ತಂಗಿ ಪ್ರೀತಿ ಸಂದಾಕ್ಕಾಅವ್ಳೆ
ಅವಳನ್ನು ಪ್ರೇಮಿಸಿದರೆ ನಿಂಗೆ ಬೇಜಾರ್ ಆಯ್ತದೆ.
ಅದಕ್ಕೆ ಪ್ರೇಮ, ಪ್ರೀತಿ ಇಬ್ಬರಿಗೂ ನನ್ನ ಪ್ರೇಮ....
ಅಷ್ಟೊತ್ತಿಗೆ ಸ್ಟೇಜ್ ಮುಂದೆ ಒಬ್ಬ ದೊಣ್ಣೆ ಹಿಡಿಕೊಂಡು ಓಡಾಡ್ತಾ ಇದ್ದ. ಯಾಕ್ ಗುರು ಹಿಂಗ್ ಓಡಾಡ್ತಾ ಇದೆಯಲ್ಲಾ ಅಂದೆ. ಅದಕ್ಕೆ ಅವನು " ನೀನು ಕವನ ಮುಂದುವರೆಸು ನಿನ್ನನ್ನ ಕರೆಸಿದ್ದು ಯಾರು ಅಂತಾ ಹುಡುಕ್ತಾ ಇದೀನಿ ಅಂದ" ಹಂಗೇ ಅವನು ಹೇಳಿದ್ದೇ ತಡ ನನ್ನ ಕವನ ವಾಚನ ಮುಗಿಸಿ ಸೀಟ್ ಹೋಗಿದ್ದೆ.
ಚಂಪಾ ನಾನು ಫ್ರೀಯಾಗಿ ಇದ್ದಾಗ ಮನೆಗೆ ಬಾಪ್ಪಾ ಅಂದ್ರು. ಯಾಕ್ ಸಾ. ಎರಡು ತಪರಾಕಿ ಬಿಡಬೇಕು ಅಂದ್ರು. ಅವತ್ತಿಂದ ಇವತ್ತಿನವರೆಗೂ ಕವನ ಬರೀತಿನಾದ್ರೂ ಎಲ್ಲೂ ಪಬ್ಲಿಸ್ ಮಾಡಕ್ಕಿಲ್ಲಾ. ಯಾಕೇಂದ್ರೆ ನಮ್ಮಂತೋರು ಬೆಳೆಯೋದು ದೊಡ್ಡವರಿಗೆ ಇಷ್ಟಾ ಆಗಕ್ಕಿಲ್ಲಾ.
Comments
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by santhosh_87
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by ambika
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by ambika
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by Harish Athreya
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by asuhegde
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by mannu
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by VeerendraC
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by Shrikantkalkoti
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by Chikku123
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by chaitu
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by Chikku123
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by ksraghavendranavada
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by deepakdsilva
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by mouna
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by kavinagaraj
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by gopinatha
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by malathi shimoga
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by manju787
ಉ: ನಾ ಕವಿಯಾದೆ...........
ಉ: ನಾ ಕವಿಯಾದೆ...........
In reply to ಉ: ನಾ ಕವಿಯಾದೆ........... by sudhichadaga
ಉ: ನಾ ಕವಿಯಾದೆ...........