ನಾವು ಸಂಪದಿಗರು...

ನಾವು ಸಂಪದಿಗರು...

ಸಂಪದಿಗರ ಸಾಗರದಲ್ಲಿ ನಾನೊಂದು ಪುಟ್ಟ ಮೀನು


ಕವಿತೆ, ಕಾವ್ಯ ಬರದೇ ನಾ ಬರೆವುದಾದರೂ ಏನು?


ಸಾಗರದಿ ಈಜಾಡುತಿರುವ ದೊಡ್ಡ ದೊಡ್ಡ ಮೀನುಗಳ ನಡುವೆ


ಸಾಗರದಲ್ಲಿ ಒಮ್ಮೊಮ್ಮೆ ಗಂಭೀರ ಚರ್ಚೆಯ ಅಲೆಗಳು


ಮತ್ತೊಮ್ಮೆ ಮುದನೀಡೋ ಹಾಸ್ಯದ ತೆರೆಗಳು


ಅದರಲ್ಲಿ ಮುಳುಗೇಳುತ್ತಲೇ ಸಾಗುವುದು ಜೀವ


ಹಸನಾಗುವುದು ನಮ್ಮ ಬಾಳು


ನಮ್ಮಯ ಕುಟುಂಬದಿ ಇರುವ ಮಂದಿ ಬಹಳ


ಕೆಲವರ ಹಾಜರಾತಿ ಒಮ್ಮೊಮ್ಮೆ ವಿರಳ


ಕೆಲವರು ಎಲೆಮರೆಯ ಕಾಯಂತೆ


ಮತ್ತೆ ಹಲವರು ಹಸಿರ ಚಿಗುರಂತೆ


ಎಲ್ಲರೂ ಸೇರಿದರೇ ಬಲು ಸೊಗಸಂತೆ


ಜಾತಿ ಭೇದದ ಅಂತರವಿಲ್ಲ


ದೇಶ ವಿದೇಶದ ನಿರ್ಭಂಧವಿಲ್ಲ


ಪ್ರತೀ ದಿನ ವಿಭಿನ್ನ ಲೇಖನಗಳು


ಬ್ಲಾಗಿನಲಿ ತೇಲಿ ಬಿಡುವ ಆಲೋಚನೆಗಳು


ಹತ್ತು ಹಲವಾರು ಚರ್ಚೆಯಾ ತಾಣ


ಹಿರಿಯರ ಕಿರಿಯರ ವಿಚಾರ ಧಾರೆಯ ಯಾನ


ನಿಮಗಿಲ್ಲಿ ದೊರೆಯುವುದು ಬಗೆ ಬಗೆಯ ಲೇಖನ


ನಿಮ್ಮ ಮನಸ್ಸಿಗೆ ಮುದಗೊಳಿಸೋ ಆತ್ಮ ಸ್ಪಂದನ

Rating
No votes yet

Comments