ಸನ್ನಾಹ

ಸನ್ನಾಹ

ತಲೆ ಬಗ್ಗಿಸಿ ನೆಲ ನೋಡುತ,


ಹೆಬ್ಬೆರಳಲಿ ನೆಲ ಕೆರೆಯುತ,


ನನ್ನತ್ತ ನೋಡುವ ನಿನ್ನ ನೋಟದಲಿ,  


ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ  


ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ,


ಜಿಟಿ - ಜಿಟಿ ಮಳೆಯಲಿ,


ಢವ-ಢವ ಎದೆಯಲಿ!


ಬೆಚ್ಚನೆಯ ಸ್ಪರ್ಶ,


ನಿಮಿರುವ ರೋಮ!


ಫಕ್ಕನೇ ಕಾಣುವ ಮಿ೦ಚಿನ೦ತೆ,


ಛ೦ಗನೇ ಜಿಗಿಯುವ ಚಿಗರೆಯ೦ತೆ,


ತಲೆಯೆತ್ತುವ ಬಯಕೆಯ ಬೆ೦ಕಿಗೆ


ತುಪ್ಪ ಸುರಿಯುವ ಮದನನ೦ತೆ,


ಮಿಲನಕೆ ಕರೆಯುವ ಸನ್ನಾಹವೇ  ನಲ್ಲೆ?

Rating
No votes yet

Comments