ಯಾ೦ತ್ರಿಕ ಬದುಕು

ಯಾ೦ತ್ರಿಕ ಬದುಕು

-ಯಾ೦ತ್ರಿಕ ಬದುಕು-

 

 

 

 

 

ಅರಿವಾಗಿದೆ ಈ ಕೆಲಸ ನನದಲ್ಲ
ಆದರೂ ಇಲ್ಲಿ ಬ೦ದಿಯಾಗಿಹೆನಲ್ಲ
ಇದು ಮನದಲಿ ತರಿಸಿದೆ ಬೇಸರಿಕೆ
ಬಯಸದ ಕೆಲಸವು ಬರೆ ವಾಕರಿಕೆ

ಯಾಕೋ ದಿನಗಳು ನಿ೦ತ೦ತಿದೆ
ಗಡಿಯಾರ ಉಸಿರಾಟ ಮರೆತ೦ತಿದೆ
ಗಾಳಿಯು ಕೂಡ ಮುನಿಸಿಕೊ೦ಡಿದೆ
ಹೊಟ್ಟೆಯ ಚಕ್ರಕೆ ತುಕ್ಕು ಹಿಡಿದಿದೆ

ಮನದಲಿ ಯೋಚನೆ ಸ್ತಬ್ದವಾಗಿದೆ
ಮನೆಯಲಿ ಸಡಗರ ಮರೆಯಾಗಿದೆ
ಗೆಳೆಯರಿಗಿಲ್ಲ ಹಿ೦ದಿನ ಹುರುಪು ಈ ದಿನ
ಎಲ್ಲೆಡೆ ಅವರಿಸಿದ೦ತಿದೆ ಮನಕೆ ಮುದಿತನ

ತೆಗೆಯಬಲ್ಲೆನೇ ನಾ ಪ೦ಜರದ ಕುಣಿಕೆ
ಹಾರಬಲ್ಲೆನೇ ನಾ ಮುಕ್ತ ಹೊರಜಗಕೆ
ಅನುದಿನವೂ ಹ೦ಬಲಿಸಿದೆ ಈ ಮನ
ಬೆ೦ಬಲಿಸಬಲ್ಲರೇ ಇದ ನನ್ನ ಜನ

Rating
No votes yet

Comments