ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ್ ವಿ ಯವರ " ಅಭ್ಯಾಸ ೩" ೨೦.೦೬.೧೦

ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ್ ವಿ ಯವರ " ಅಭ್ಯಾಸ ೩" ೨೦.೦೬.೧೦

ಈ ಬಾರಿ ನಾನೇ ವೈಯ್ಯಕ್ತಿಕ ಕೆಲಸದಲ್ಲಿ ಮಗ್ನ ನಾಗಿ ಸಮಯಕ್ಕೆ ಸರಿಯಾಗಿ ಅಭ್ಯಾಸ ಏರ್ಪಡಿಸಿರುವಂತಹ ವಿಜಯನಗರಕ್ಕೆ ಮನೋಹರ ಸಾಲಿಮಠ ರ ಸ್ವಗೃಹ "ನೆಲೆ" ಗೆ ತಲುಪಿರದಿದ್ದರೂ ನನಗೇ ನಾಚಿಕೆಯಾಗುವಂತೆ, ಆರಂಭ ಮಾಡದೇ
ನನಗಾಗಿಯೆ ಅವರೆಲ್ಲರೂ ಕಾಯುತ್ತಿದ್ದರು, .ಇನ್ನೂ ತಡಮಾಡಿದರೆ ಒಳ್ಳೆಯದಲ್ಲವೆಂದು ನನಗೆ ನಾನೇ ಶಿಕ್ಷೆ ವಿಧಿಸಿಕೊಂಡೆ ಬೆಳಗಿನ ತಿಂಡಿಯನ್ನು ತಿನ್ನದೇ.

 

 

 




ಈ ಸಾರಿಯ ವಿಷಯ ರನ್ನನ "ಗಧಾ ಯುದ್ಧ"
ಪ್ರಸಿದ್ಧ ಜೈನ ಕವಿಯಾದ ರನ್ನನು ಕನ್ನಡದ ರತ್ನ ತ್ರಯರಲ್ಲಿ ಒಬ್ಬ( ಪಂಪ, ಜನ್ನ, ರನ್ನ) ಕ್ರಿ ಶ ೯೪೯ರಲ್ಲಿ ಮುದುವೊಳಲು ಊರಿನಲ್ಲಿ (ಈಗಿನ ಮುಧೋಳ)
ಜಿನವಲ್ಲಭೇಂದ್ರ ಮತ್ತು ಅಮ್ಮಲಬ್ಬೆಯರಮಗನಾಗಿ ಜನಿಸಿದ . ಮುಂದೆ ಈತ ದಕ್ಷಿಣ ಕರ್ನಾಟಕಕ್ಕೆ ಬಂದು ಶ್ರವಣ ಬೆಳಗೊಳದಲ್ಲಿ ನೆಲೆಸಿ ಪ್ರಸಿದ್ಧ ಜೈನ ಮುನಿಗಳಾದ ಅಜಿತ ಸೇನಾಚಾರ್ಯರಲ್ಲಿ ವ್ಯಾಸಂಗ ಮಾಡಿ ಚಾವುಂಡರಾಯ ಅತ್ತಿಮಬ್ಬೆಯರ ಅಶ್ರಯದಿಂದ ಪೋಷಿತನಾಗಿ
ಚಾಲುಕ್ಯ ಚಕ್ರವರ್ತಿ ತೈಲಪನ ಆಸ್ಥಾನ ಕವಿಯೂ ಆದ." ಅಜಿತ ಪುರಾಣ" ಮತ್ತು ಗಧಾ ಯುದ್ಧ" ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ " ಸಾಹಸಭೀಮ ವಿಜಯಮ್" ಆತನ ಎರಡು ಪ್ರಸಿದ್ಧ ಕೃತಿಗಳು
ಮೊದಲಿನದ್ದು ಜೈನ ತೀರ್ಥಂಕರರೊಬ್ಬರ ಕಥೆಯಾದರೆ ಎರಡನೆಯದ್ದು ಮಹಾಭಾರತವನ್ನು ಆದರಿಸಿದ್ದು.
ಹಳೆಗನ್ನಡ ಕವಿಗಳಲ್ಲೇ ಅತ್ಯಂತ ಜನಪ್ರಿಯನಾದ ರನ್ನ" ಕವಿಚಕ್ರವರ್ತಿ" ಶ್ರೀಕವಿ ರತ್ನ "ಮೊದಲಾದ ಬಿರುದುಗಳನ್ನು ಪಡೆದಿದ್ದಾನೆ.

ಇವನ ತಂದೆ ಬಳಗಾರ ವೃತ್ತಿಯವನು. ರನ್ನ ಸಂಸ್ಕೃತವನ್ನು ಆಳವಾಗಿ ಅಭ್ಯಾಸ ಮಾಡಿದ್ದು, ಸಂಸ್ಕೃತ ನಾಟಕ ಕಾರರಾದ ಭಾಸ ಮತ್ತು ಭಟ್ಟನಾರಾಯಣರ ಪ್ರಭಾವ ಇವನ ಮೇಲೆ ಗಾಢವಾಗಿರುವುದನ್ನು ವಿಮರ್ಶಕರು ಗುರುತಿಸಿದ್ದಾರೆ. ಇವನಿಗೆ ಇಬ್ಬರು ಹೆಂಡತಿಯರು ಜಕ್ಕಿ ಮತ್ತು ಶಾಂತಿ ,ಮಗನ ಹೆಸರು ಚಾವುಂಡರಾಯ, ಮಗಳು ಅತ್ತಿಮ್ಮಬ್ಬೆ .
ಕ್ರತಜ್ಞತಾ ಸ್ವಭಾವದವನು ಎಂಬುದು ತನ್ನ ಮಗ ಮತ್ತು ಮಗಳ ಹೆಸರುಗಳನ್ನು ತನಗೆ ಸಹಾಯ ಮಾಡಿದ ಆಶ್ರಯ ಪೋಷಕರ ಹೆಸರುಗಳನ್ನೇ ಇಟ್ಟು ತೋರಿಸಿರುತ್ತಾನೆ.
ರನ್ನ ಎಲ್ಲಿಯೂ ಕಥೆ ಹೇಳುವುದಿಲ್ಲ ಆದರೆ ಮಹಾಭಾರತದ ಒಂದೇ ಒಂದು ಅಶ್ವಾಸ ತೆಗೆದುಕೊಂಡು ಅದನ್ನು ವಿಸ್ತರಿಸುತ್ತಾನೆ, ಅವನ ಈ ಗಧಾಯುದ್ಧ ಆಗಿನ ಕಾಲದ ಹೊಸ ರೀತಿಯ ಮೊಡರ್ನ್ ಟೆಕ್ನಿಕ್ ಈಗಲೂ.
ಗುರುಗಳು ರನ್ನನ ಗಧಾಯುದ್ಧದ ಪ್ರಮುಖ ವೆನ್ನುವಂತಹಾ ೧೫ ಪದ್ಯ ಗಳನ್ನು ತೆಗೆದುಕೊಂಡು ನಮಗೆ ರಸಾಸ್ವಾದವನ್ನು ಬಡಿಸಿದರು ಎಲ್ಲಿಯೂ ನಮಗೆ ರಸಾಭಾಸವಾಗದಂತೆ ಮಧ್ಯೆ ಮಧ್ಯ ಬೇರೆ ಬೇರೆ ಕವಿಗಳ ಕೃತಿಯ ರಸಗಟ್ಟಗಳನ್ನೇ ಸೇರಿಸುತ್ತಾ ನಮ್ಮೆಲ್ಲರನ್ನೂ ಒಂದು ಸಾವಿರ ವರುಷ ಹಿಂದೆ ಕೊಂಡೊಯ್ದರು.
ಅವರು ವಿವರಿಸಿರುವ ರೀತಿಗೆ ಅವರೇ ಸಾಟಿ.

 

 

ಇದರ ಜತೆಗೆ ಈ ಸಾರಿ ಎಲ್ಲ  ವಿಡಿಯೋಗಳ ಲಿಂಕ್ ಕೊಟ್ಟಿದ್ದೇನೆ

 

http://www.youtube.com/watch?v=WSENuwhBpQo

http://www.youtube.com/watch?v=NmzaAIPllQ0

http://www.youtube.com/watch?v=IxALQKkgm9c

http://www.youtube.com/watch?v=3mHyS2aSPOo

http://www.youtube.com/watch?v=um3i1QkuG8s

http://www.youtube.com/watch?v=pU6WZQbcRII

http://www.youtube.com/watch?v=JO_Ly43A9v4

http://www.youtube.com/watch?v=qPPtQR7M3eM

 

ತಾವೂ ನಮ್ಮೆಲ್ಲರ ಜತೆ ಈ ರಸಾಯನ ಸವಿಯ ಬಹುದು

Rating
No votes yet

Comments