ಲಿನಕ್ಸಾಯಣ - ೬೨- googlecl - ಗೂಗಲ್ ಕಮ್ಯಾಂಡ್ ಲೈನ್

ಲಿನಕ್ಸಾಯಣ - ೬೨- googlecl - ಗೂಗಲ್ ಕಮ್ಯಾಂಡ್ ಲೈನ್

ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ.

ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ. ಗೂಗಲ್ ಬ್ಲಾಗರ್, ಕ್ಯಾಲೆಂಡರ್, ಅಡ್ರೆಸ್ ಬುಕ್, ಪಿಕಾಸ, ಯೂಟ್ಯೂಬ್ ಇತ್ಯಾದಿ ಸೇವೆಗಳನ್ನು ಇನ್ಮುಂದೆ ಸುಲಭವಾಗಿ ಗೂಗಲ್ ಸಿ.ಎಲ್ (Google Command Line or GoogleCL) ಬಳಸಿ ನಿಮ್ಮ ಕನ್ಸೋಲ್ ಮೂಲಕ ಉಪಯೋಗಿಸಿಕೊಳ್ಳಬಹುದು.

ಗೂಗಲ್ ಸಿ.ಎಲ್ ನಿಮಗೆ ಈ ಕೆಳಕಂಡ ಕೊಂಡಿಯಲ್ಲಿ ಸಿಗುತ್ತದೆ.

http://code.google.com/p/googlecl/

ಉಬುಂಟು, ಡೆಬಿಯನ್ ಬಳಸುವವರು ಇಲ್ಲಿ ಸಿಗುವ .deb ಫೈಲ್ ಡೌನ್ ಲೋಡ್ ಮಾಡಿಕೊಂಡು ಸುಲಭವಾಗಿ ಇಸ್ಟಾಲ್ ಮಾಡಿಕೊಳ್ಳಬಹುದು.


ಕೆಳಕಂಡ ಪಟ್ಟಿ ಗೂಗಲ್ ನ ಕೆಲ ಸೇವೆಗಳನ್ನು googlecl ಬಳಸಿ ಉಪಯೋಗಿಸುವುದಕ್ಕೆ ಉದಾಹರಣೆಗಳನ್ನು ನೀಡುತ್ತದೆ.

ಬ್ಲಾಗರ್
$ google blogger post --title "foo" "command line posting"

ಕ್ಯಾಲೆಂಡರ್
$ google calendar add "Lunch with Jim at noon tomorrow"

ಕಾಂಟ್ಯಾಕ್ಟ್ಸ್
$ google contacts list name,email > contacts.csv

ಗೂಗಲ್ ಡಾಕ್ಸ್
$ google docs edit --title "Shopping list"

ಪಿಕಾಸ
$ google picasa create --title "Cat Photos" ~/photos/cats/*.jpg

ಯೂಟ್ಯೂಬ್
$ google youtube post --category Education killer_robots.avi


ಹೆಚ್ಚಿನ ಮಾಹಿತಿ:-

ಗೂಗಲ್ ಸಿ.ಎಲ್ ಪೈಥಾನ್ ತಂತ್ರಾಂಶವಾಗಿದ್ದು, Python gdata ಲೈಬ್ರರಿಗಳನ್ನು ಗೂಗಲ್ ನ ಡೆಟಾ API (Application programming Interface) ಸಂದೇಶಗಳನ್ನು ಬಳಸುತ್ತದೆ.
ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಗೂಗಲ್ .ಸಿ.ಎಲ್  ನಿಮ್ಮ ಮುಂದಿಡುತ್ತಿದೆ.  ಏನಿದು ಕ್ಲೌಡ್ ಕಂಪ್ಯೂಟಿಂಗ್ ... ? ಇದರ ಬಗ್ಗೆ ಹೆಚ್ಚಿನ ವಿವರಣೆ ಮುಂದಿನ ಲಿನಕ್ಸಾಯಣ ಕಂತುಗಳಲ್ಲಿ.

Rating
No votes yet

Comments