ಜೀವನದ ಬಗ್ಗೆ ಚೇತನ್ ಭಗತ್ ನಿಲುವು...

ಜೀವನದ ಬಗ್ಗೆ ಚೇತನ್ ಭಗತ್ ನಿಲುವು...

ಬರಿ ವೃತ್ತಿ ಅಥವಾ ಶೈಕ್ಷಣಿಕ ಗುರಿಗಳೇ ಜೀವನದಲ್ಲಿ ಮುಖ್ಯವಲ್ಲ. ಒಂದು ಸಮತೋಲನವಾದ, ಸಫಲವಾದ ಜೀವನಕ್ಕೆ ತಕ್ಕುದಾದ ಗುರಿಗಳನ್ನ ನಿಗದಿಪಡಿಸಿಕೊಳ್ಳಬೇಕು. ಸಮತೋಲನವಾದ ಎಂಬ ಪದವನ್ನ ಸಫಲ ಎಂಬ ಪದಕ್ಕಿಂತ ಮೊದಲು ಉಪಯೋಗಿಸಿದ್ದೇನೆ. ಕಾರಣ, ಸಮತೋಲನವಾಗಿ ಎಂದರೆ ನಿಮ್ಮ ಆರೋಗ್ಯ, ಸಂಬಂಧ, ಮಾನಸಿಕ ಶಾಂತಿ ಎಲ್ಲವೂ ಉತ್ತಮ ರೀತಿಯಲ್ಲಿರುವುದು.

ಒಂದು ಸಂಬಂಧ ಮುರಿದುಬಿದ್ದ ದಿನ ಕೆಲಸದಲ್ಲಿ ಬಡ್ತಿ ಸಿಕ್ಕರೆ ಖುಶಿಯಿರದು. ತುಂಬಾ ಬೆನ್ನು ನೋವೆಂದು ಪರ್ದಾಡ್ತಿದ್ದಾಗ ಕಾರ್ ಡ್ರೈವ್ ಮಜಾ ತರದು. ಉದ್ವಿಗ್ನತೆ ಮನ ತುಂಬಿದ್ರೆ ಶಾಪಿಂಗ್ ಮುದ ನೀಡದು.

ಜೀವನ ಎಂಬುದು ನರ್ಸರಿ ಶಾಲೆಗಳ ಓಟಗಳಲ್ಲೊಂದಾದ ಚಮಚ ಬಾಯಲ್ಲಿಟ್ಟುಕೊಂಡು ಚಮಚದಲ್ಲಿರುವ ನಿಂಬೆಹಣ್ಣನ್ನ ಕೆಳ ಬೀಳದ ಹಾಗೆ ಬ್ಯಾಲೆನ್ಸ್ ಮಾಡುತ್ತಾ ಓಡುವ ಚಮಚ-ನಿಂಬೆಹಣ್ಣು ಓಟದಂತೆ. ನಿಂಬೆಹಣ್ಣು ಕೆಳ ಬಿದ್ದರೆ ಓಟದಲ್ಲಿ ಮೊದಲು ಬಂದರೂ ಪ್ರಯೋಜನವಿಲ್ಲ... ಜೀವನದಲ್ಲೂ ಹಾಗೆ  ಆರೋಗ್ಯ ಮತ್ತು ಸಂಬಂಧಗಳು ನಿಂಬೆಹಣ್ಣಿನಂತೆ. ಜೀವನದಲ್ಲಿ ಸಾಂಗತ್ಯ ಇದ್ದಾಗ ಮಾತ್ರ ನಿಮ್ಮ ಸೆಣೆಸಾಟಕ್ಕೆ ತಕ್ಕ ಮಾನ್ಯತೆ ಸಿಗುವುದು. ನೀವು ಸಫಲರಾಗಬಹುದು, ಆದರೆ ಸಂಭ್ರಮ ಮತ್ತು ಹುಮ್ಮಸ್ಸಿನ ಭಾವನೆಗಳ ಕಿಡಿ  ಕ್ಷೀಣಿಸಲು ಪ್ರಾರಂಬಿಸುತ್ತದೆ. 

ಆ ಕಿಡಿಯನ್ನು ಪೋಷಿಸಬೇಕೆಂದರೆ, ಜೀವನವನ್ನ ಗಂಭೀರವಾಗಿ ತೆಗೆದುಕೊಳ್ಳಬಾರದು. ಜೀವನ ಕ್ಷಣಿಕ ಹಾಗಾಗಿ ಗಂಭೀರವಾಗಿ  ತೆಗೆದುಕೊಳ್ಳುವ ಅಗತ್ಯವಿಲ್ಲ. ನಾವು ಸೀಮಿತ ಅವಧಿಗೆ ಮುಂಗಡವಾಗಿ ಹಣ ಕೊಟ್ಟು ಪಡೆಯುವ ಕಾರ್ಡಿನಂತೆ. ನಮಗೆ ಅದೃಷ್ಟವಿದ್ರೆ ಒಂದೈವತ್ತು ವರ್ಷ ಬದುಕಬಹುದು. ಐವತ್ತು ವರ್ಷ ಅಂದ್ರೆ 2,500 ವಾರಾಂತ್ಯಗಳು ಅಷ್ಟೆ!!! ನಿಜವಾಗಿಯೂ ನಾವುಗಳು ಇಷ್ಟೆಲ್ಲ ಶ್ರಮಪಡುವ ಅಗತ್ಯವಿದೆಯೇ?

ಕೆಲವೊಮ್ಮೆ ತರಗತಿಗಳಿಗೆ ಚಕ್ಕರ್ ಹಾಕುವುದು, ಒಂದೆರಡು ಪೇಪರ್ ಗಳಲ್ಲಿ ಕಡಿಮೆ ಅಂಕ ಗಳಿಸುವುದು, ಕೆಲವು ಸಂದರ್ಶನಗಳನ್ನು ಹಾಳುಮಾಡಿಕೊಳ್ಳುವುದು, ಕೆಲಸಕ್ಕೆ ರಜೆ ಕೊಡುವುದು, ಪ್ರೀತಿಸುವುದು, ಹೆಂಡತಿ ಜೊತೆ ಸಣ್ಣ ಪುಟ್ಟ ಜಗಳವಾಡುವುದು ಇತ್ಯಾದಿಗಳೆಲ್ಲಾ ಇರಬೇಕು. ನಾವು ಮನುಷ್ಯರು, ಯೋಜಿತ ಸಾಧನಗಳಲ್ಲ.

“ಸೀರಿಯಸ್ಸಾಗಿರಬೇಡಿ, ಪ್ರಾಮಾಣಿಕರಾಗಿರಿ.”

ದೇವರು ನಾ ಬಯಸಿದ್ದೇನನ್ನೂ ಕೊಡಲಿಲ್ಲ. ಆದರೆ ನನಗೇನು ಅಗತ್ಯವಿದೆಯೋ ಅದನ್ನು ಕೊಡುತ್ತಾನೆ. ಆನಂದದಿಂದಿರಿ...
ಈ ಜೀವನವೆಂಬ ಹಾರೈಕೆಯನ್ನು ಆನಂದಿಸಿರಿ…

ನಡೆದಿದ್ದು ಅನುಭವ…!
ನಡೆಯುತ್ತಿರುವುದು ಪ್ರಯೋಗ…!
ನಡೆಯಲಿರುವುದು ನಿರೀಕ್ಷೆ…!

ನಿಮ್ಮ ನಿರೀಕ್ಷೆಗಳನ್ನು ನೆರವೇರಿಸಿಕೊಳ್ಳಲು ನಿಮ್ಮ ಪ್ರಯೋಗಗಳಲ್ಲಿ ನಿಮ್ಮ ಅನುಭವಗಳನ್ನು ಬಳಸಿ…!!!
                                                                                             -ಚೇತನ್ ಭಗತ್

ಈ ಮೇಲಿನ ಬರಹ ಭಗತ್ ರ ಒಂದು ಆಂಗ್ಲ ಭಾಷಣದ ಅನುವಾದ.

ಚೇತನ್ ಭಗತ್(ಎಪ್ರಿಲ್ 22, 1974) ಭಾರತದ ಉದಯೋನ್ಮುಕ ಕಾದಂಬರಿಕಾರ, ಅಂಕಣಕಾರ ಮತ್ತು ಚಿತ್ರಲೇಖಕ. ಇಂಜಿನಿಯರಿಂಗ್ ಮತ್ತು ಮ್ಯಾನೇಜಮೆಂಟ್ ಪಧವೀದರ.
ಇವರ ಪ್ರಸಿದ್ಧ ಕಾದಂಬರಿಗಳು: ಫೈವ್ ಪಾಯಿಂಟ್ ಸಮ್ಒನ್-ವ್ಹಾಟ್ ನಾಟ್ ಟು ಡು ಅಟ್ ಐಐಟಿ(ಈ ಕಾದಂಬರಿ ಆಧಾರಿತ ಚಲನಚಿತ್ರವೇ 3 ಈಡಿಯಟ್ಸ್), ಒನ್ ನೈಟ್ @ ದಿ ಕಾಲ್ ಸೆಂಟರ್, ದಿ ಥ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್ ಮತ್ತು 2 ಸ್ಟೇಟ್ಸ್- ದಿ ಸ್ಟೋರಿ ಆಫ್ ಮೈ ಮ್ಯಾರೇಜ್.

Rating
No votes yet

Comments