ಟೇಬಲ್ ಲ್ಯಾಂಪ್ ಮನಿ
"ಬಾಟ್ಲೀ" ಲಿ
ಚಳಿಗಾಲದ ಒಂದು ಸಂಜೆ.
ಎಣ್ಣೆ ಅಂಗಡಿಯ ತ್ಯಾಂಪ ಮತ್ತು ಬೆಲ್ಲದಂಗಡಿಯ ರಾಂಪ ಇಬ್ಬರೂ ಅಕ್ಕ ಪಕ್ಕದ ಅಂಗಡಿಯಲ್ಲಿ ಕುಳಿತು ತಮ್ಮ ತಮ್ಮ ಗಿರಾಕಿಗಳಿಗಾಗಿ ಕಾಯುತ್ತಿದ್ದರು.
ಕಾದು ಬೇಸತ್ತ ತ್ಯಾಂಪ ರಾಂಪನಿಗೆಂದ "ರಾಂಪಣ್ಣ ಗಿರಾಕಿಗಳು ಬರುವವರೆಗಾದರೂ ನಾವ್ನಾವೇ ಯಾಪಾರ ಮಾಡ್ಕಳಾಣ"
ತ್ಯಾಂಪ ಒಪ್ಪಿದ.
"ಸರಿ ಕಣಣ್ಣೋ ಮದ್ಲಿಗೆ ನಾ ನಿನ್ತಾವ ಬರ್ತೀನಿ"
ತ್ಯಾಂಪ ತನ್ನ ಅಂಗಡಿಯಿಂದ ಇಳಿದು ರಾಂಪನ ಅಂಗಡಿಗೆ ಬಂದು" ಅಣ್ಣೋ ಒಂದು ಲೀಟರ್ ಬೆಲ್ಲ ತತ್ತಾ"ಎಂದ.
"ಲೇಯ್ ಅಲ್ಲಾ ಬೆಲ್ಲಾನ ಎಣ್ಣೆ ಹಾಗೆ ಕೇಳೋದಾ ? ನಾ ಕೇಳ್ತೀನಿ ವಸಿ ಇರು"
ಎಂದ ರಾಂಪ ತನ್ನ ಅಂಗಡಿಯಿಂದ ಇಳಿದು
ತ್ಯಾಂಪನ ಅಂಗಡಿಗೆ ಬಂದು "ಅಣ್ಣೋ ಒಂದು ಕೇಜಿ ಎಣ್ಣೆ ಕೊಡು " ಎಂದ.
"ತುಥ್ ನಿನ್ನಾ ಅದೇನ್ ಬೆಲ್ಲಾನಾ ಕೇಜೀಲಿ ಕೊಡೋಕೆ?
ನಾ ಬರ್ತೀನಿರು" ತ್ಯಾಂಪ ಈಗ ತನ್ನ ಅಂಗಡಿಯಿಂದ ಇಳಿದು ರಾಂಪನಲ್ಲಿಗೆ ಬಂದ
" ಅಣ್ಣಾ ಒಂದ್ ಕೇಜಿ ಬೆಲ್ಲ ಕೊಡು " ರಾಂಪ ಬಾಯಿ ತೆಗೆಯೊದ್ರಲ್ಲಿ ಈತ ಮುಂದುವರಿಸಿದ "ಈ ಬಾಟ್ಲೀಲಿ"
ಈಗ ರಾಂಪನಿಗೆ ನಿಜವಾಗಿಯೂ ಕೋಪ ಬಂತು " ಯಾಕಲೇ ........ಗಾಂಪನ್ತಂದು ಬೆಲ್ಲ ಯಾರಾರೂ ಬಾಟ್ಲೀಲ್ ಕೇಳ್ತಾರ ಥೂ ನಿನ್ನ" ನಾನೇ ಬರ್ತೀನಿ ಇರು
ಎಂದವ ತ್ಯಾಂಪನನ್ನ ತನ್ನ ಅಂಗಡಿಯಲ್ಲಿ ಕುಳ್ಳಿರಿಸಿ " ಅಣ್ಣಾ ಒಂದು ಕೇಜಿ ಬೆಲ್ಲ ಕೊಡು" ನೋಡ್ಲಾ ಹೀಗೆ ಕೇಳ್ಬೇಕು ಎಂದ.
"ಬಾಟ್ಲಿ ತಂದಿದಿಯಾ" ಕೇಳಿದ ಅಮಾಯಕನಾಗಿ ತ್ಯಾಂಪ.
"ನೀವ್ಕಚ್ಚಲ್ಲಲ್ವಾ"
ಟಿಪ್ ಟಾಪ್ ತರುಣಿಯೊಬ್ಬಳು ತನ್ನ ಮುದ್ದಾದ ನಾಯಿಮರಿಯೊಂದಿಗೆ ಬಂದು ಬ್ಯೂಟಿ ಪಾರ್ಲರಿನಲ್ಲಿ ವಿಚಾರಿಸುತ್ತಿದ್ದಳು
" ಈ ಪಪ್ಪಿಗೆ ಕಟಿಂಗ್ ಮಾಡಲು ಎಷ್ಟು ತಗೋತೀರಾ?" "ನಾಲ್ಕು ನೂರು ರುಪಾಯಿಗಳು ಮೇಡಮ್" ಎಂದ ಸಲೂನಿನಾತ.
"ಯಾಕ್ರೀ ಅಷ್ಟೊಂದು? ನಂಗೇ ನೂರ್ ರುಪಾಯಿ ತಗೋತೀರಾ?" ಕೇಳಿದಳು ತರುಣಿ
" ನೀವ್ ಕಚ್ಚಲ್ಲ ಅಲ್ವಾ" ಎಂದನಾತ ಸೀರಿಯಸ್ಸಾಗಿ.
ಟೇಬಲ್ ಲ್ಯಾಂಪ್ ಮನಿ
"ಯಾಕೋ ಬೇಜಾರಲ್ಲಿದ್ದೀಯಾ" ಕೇಳಿದ ರಾಮು ಹಾಸ್ಟೆಲಿನಲ್ಲಿ ತನ್ನ ಸ್ನೇಹಿತನಿಗೆ.
" ನಾನು ಮನೆಗೆ ಟೇಬಲ್ ಲ್ಯಾಂಪ್ ಬೇಕು ಹಣ ಕಳಿಸಿ ಅಂತ ಬರೆದಿದ್ದೆ" ಎಂದ ಗೋಪು. "ಏನಾಯ್ತೀಗ?" ಕೇಳಿದ ರಾಮು
"ಅವರು ಟೇಬಲ್ ಲ್ಯಾಂಪೇ ಕಳುಹಿಸಿದ್ರು" ಎಂದ ಗೋಪು ಬೇಜಾರಲ್ಲಿ.
Comments
ಉ: ಟೇಬಲ್ ಲ್ಯಾಂಪ್ ಮನಿ
In reply to ಉ: ಟೇಬಲ್ ಲ್ಯಾಂಪ್ ಮನಿ by ಭಾಗ್ವತ
ಉ: ಟೇಬಲ್ ಲ್ಯಾಂಪ್ ಮನಿ
ಉ: ಟೇಬಲ್ ಲ್ಯಾಂಪ್ ಮನಿ
In reply to ಉ: ಟೇಬಲ್ ಲ್ಯಾಂಪ್ ಮನಿ by chandrakanthamg
ಉ: ಟೇಬಲ್ ಲ್ಯಾಂಪ್ ಮನಿ
ಉ: ಟೇಬಲ್ ಲ್ಯಾಂಪ್ ಮನಿ
In reply to ಉ: ಟೇಬಲ್ ಲ್ಯಾಂಪ್ ಮನಿ by asuhegde
ಉ: ಟೇಬಲ್ ಲ್ಯಾಂಪ್ ಮನಿ
In reply to ಉ: ಟೇಬಲ್ ಲ್ಯಾಂಪ್ ಮನಿ by gopinatha
ಉ: ಟೇಬಲ್ ಲ್ಯಾಂಪ್ ಮನಿ