ನಿಮಗೆ ಏನನ್ನಿಸುತ್ತದೆ?

ನಿಮಗೆ ಏನನ್ನಿಸುತ್ತದೆ?

Comments

ಬರಹ

"ಮುಕ್ತ ಮುಕ್ತ" ಚಿಕ್ಕತೆರೆಯ ಧಾರಾವಾಹಿ ಬಹಳ ಜನಪ್ರಿಯತೆ ಗಳಿಸಿದೆ. ಆ ಧಾರಾವಾಹಿಯಲ್ಲಿ ಇತ್ತೀಚೆಗೆ ಒಂದು ಪಾತ್ರಗಳು ಇನ್ನೊಂದು ಪಾತ್ರಕ್ಕೆ ಕೆನ್ನೆಗೆ ಹೊಡೆಯುವ ದೃಶ್ಯ ಬಂತು. ಮಧು ಕೃಷ್ಣ ಬಿಂಗ ಆಸ್ಪತ್ರೆಯ ಡಾಕ್ಟರ್ ವಾಹನ ಅಪಘಾತದಲ್ಲಿ ಗಾಯಗೊಂಡ ರೋಗಿಗೆ ಮುಂಗಡ ಹಣಕೊಡದೆ ಆಪರೇಷನ್ ಮಾಡಲು ನಿರಾಕರಿಸಿದ್ದಕ್ಕೆ. ಮಧು ಕೋಪಗೊಂಡಿದ್ದಕ್ಕೆ ಕಾರಣ ಮುಂಗಡ ಹಣದ ನೆಪದಲ್ಲಿ ಪ್ರಾಣ ಉಳಿಸುವ ಕಾರ್ಯದ ನಿರ್ಲಕ್ಷ್ಯ. ಕೆಲವು ಸಂಚಿಕೆಗಳ ನಂತರ ಇದೇತರಹ ಒಂದು ಪಾತ್ರಗಳು ಇನ್ನೊಂದು ಪಾತ್ರಕ್ಕೆ ಕೆನ್ನೆಗೆ ಹೊಡೆಯುವ ದೃಶ್ಯ ಬಂತು. ಅದರ ಸಂದರ್ಭ ಅಂದರೆ ಶಶಿಗೆ ಲಾಯರ್ ನೋಟೀಸ್ ಕೊಟ್ಟನೆಂಬ ಕಾರಣಕ್ಕೆ, ಆ ಲಾಯರ್ ನೋಟೀಸ್ ಹಿಂದಕ್ಕೆ ತೆಗೆದು ಕೊಳ್ಳುವದನ್ನು ಪ್ರೇರೇಪಿಸಲು "ಬಿಸಿ ಮುಟ್ಟಿಸುವ" ಕ್ರಮವಾಗಿ ಒಬ್ಬ ನೇಮಿಸಿಕೊಂಡ ಗೂಂಡಾ ಶಶಿಗೆ ಕೆನ್ನೆಗೆ ಹೊಡೆಯುತ್ತಾನೆ. ಈ ಎರಡೂ ಸಂದರ್ಭಗಳಲ್ಲೂ ಕೆನ್ನೆಗೆ ಹೊಡೆತ ಕೊಟ್ಟದ್ದು ಕಾನೂನನ್ನು ತನ್ನ ಕೈಗೆ ತೆಗೆದುಕೊಂಡಂತೆ ತಪ್ಪು ನಡುವಳಿಕೆ ಆಗುತ್ತದೆ. ಇದು ನಾವು ಚರ್ಚಿಸುತ್ತಿದ್ದಾಗ ಚರ್ಚೆಯಲ್ಲಿ ಹಲವು ಸಂಯೋಗಗಳು ಗಮನಕ್ಕೆ ಬಂತು. ಅವು ಹೀಗಿವೆ.

೧) ಸಿಧ್ಧಾಂತದ ಪ್ರಕಾರ ಎರಡೂ ಸಂದರ್ಭಗಳು ಕಾನೂನನ್ನು ತನ್ನ ಕೈಗೆ ತೆಗೆದುಕೊಂಡಂತೆ ತಪ್ಪು ನಡುವಳಿಕೆ ಆಗುತ್ತದೆ.

೨) ಒಳ್ಳೆಯ ಕಾರಣಕ್ಕೆ ಕೋಪ ಬರಿಸುವ ಸಂದರ್ಭವಿದ್ದುದರಿಂದ ಮಧು ಮಾಡಿದ್ದು ಕ್ಷಮಾರ್ಹ. (ಈ ಪ್ರಕರಣ ನ್ಯಾಯಾಲಯದ ಗಮನಕ್ಕೆ ಬಂದರೂ ಅಲ್ಲಿ ಇದನ್ನು ತೀವ್ರವಾಗಿ ಪರಿಗಣಿಸಲಿಲ್ಲ ಎನ್ನುವುದು ಒಂದು ವಿಷಯ)

೩) ತಮ್ಮ ಕೆಲಸ ಸಾಧಿಸುವುದಕ್ಕೆ ಉಪಯೋಗಿಸಿಕೊಂಡ ಗೂಂಡಾಗಳು ಹೊಡೆದದ್ದು ತಪ್ಪು.

 

ನಿಮಗೆ ಏನನ್ನಿಸುತ್ತದೆ?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet