ನಿನ್ನದೇ ನೆನಪಲ್ಲಿ

ನಿನ್ನದೇ ನೆನಪಲ್ಲಿ

         ೧


ಎನ್ನೆದೆಯ ತಿಳಿಗೊಳಕ್ಕೆ


ನೀ ಬೀಸಿದ ಪ್ರೀತಿಯ ಗಾಳಕ್ಕೆ


ಕದಡಿತೆನ್ನ ತಿಳಿಗೊಳದ ಮನ


ನೀ ಬೀಸಿದ ಗಾಳಕ್ಕೆ ಸಿಕ್ಕು


ತಳಮಳಿಸುತ್ತಿರುವ ಮೀನು ನಾನು


ಕಳಕಳಿಯಿಂದ ಕೇಳುತಿರುವೆನು


ತೊರೆದು ಹೋಗದಿರೆನ್ನನು


          ೨


ಅಳಿಸಲಾರದ ನೆನಪು


ನೀ ಉಳಿಸಿ ಹೋದೆ ಗೆಳತಿ


ಎನ್ನೆದೆಯಾಳದಲಿ


ಅದೆಷ್ಟು ರೂಪ ರಾಗಗಳಲಿ


ಬಂದು ಕೆರಳಿ ನರಳಿಸುತಿವೆ


ಎನ್ನ ಮನದಾಳದಲಿ


 


             ೩


 


ಬತ್ತಿ ಬರಡಾಗಿದೆ ಎನ್ನೆದೆ


ನಿನ್ನೊಲವಿನ ಮಳೆ ಕಾಣದೆ


ದಾಹಕೆ ಬಳಲಿ ಬೆಂಡಾಗಿದೆ


ದೇಹದ ಕಣ-ಕಣ ನೀನಿಲ್ಲದೆ 


ಬೇಗುದಿಯ ಕುಲುಮೆಯಲಿ


ಬೇಯುತಿರುವೆ ನಾನು


ತೊರೆದು ಹೋದ ಹಿರಿಮೆಯಲಿ


ಬೀಗುತಿರುವೆ ನೀನು


 


                                    -- ಮೌನೇಶ

Rating
No votes yet

Comments