’ತುಳು’ವಿನ ಹುಟ್ಟು

’ತುಳು’ವಿನ ಹುಟ್ಟು

ಡಾ| ಪಾದೂರು ಗುರುರಾಜ ಬಟ್ಟರು ಬರೆದಿರುವ ’ತುಳುನಾಡು’ ಹೊತ್ತಿಗೆ ಓದುತ್ತಿದ್ದೆ. ಅವರು ತುಳುವಿನ ಹುಟ್ಟಿನ ಬಗ್ಗೆ ಹೇಳಿರುವುದು:-


 "..."ತುಳು" ಎಂಬ ಪದವು ’ತುರು’ವಿನ ಪರ್ಯಾಯ ಪದವಾಗಿ ಬಂದಿರುವುದೆಂದೂ, ಕನ್ನಡದಲ್ಲಿ ’ತುಱು’ವೆಂದರೆ ದನ, ಗೋವು ಅಂತೂ ಆಕಳು ಎಂಬ ತಿಳಿವು ಇರುವುದೆಂದೂ ಹೇಳಿದ್ದಾರೆ.’ಱ’ "ಳ’ಗಳ ಉಲಿಕೆಯಲ್ಲಿ ಬೇರೆತನ ಹೋಗಿರುವುದರಿಂದ ತುರು ಪದವು ’ತುಳು’ ಎಂದು ಮಾರ್ಪಾಟು ಹೊಂದಿದೆ. ಈ ಮಾರ್ಪಾಟಿಗೆ ಸಾದ್ಯತೆಯೂ ಇದೆ. ತುರುಗಳೆ ಹೆಚ್ಚಾಗಿರುವ ನಾಡು ತುರುನಾಡು, ಅದೇ ತುಳುನಾಡು. ತುರುಗಳನ್ನು ಸಾಕುವವರು, ಅವುಗಳನ್ನು ಹೊಂದಿದವರು ತುರುಕಾರರು(ತುರುವರು) ಅವರೇ ತುಳವರೆಂದು ಹೆಸರನ್ನು ಪಡೆದರು. ಅವರ ನಾಡು ’ತುಳವ’ವಾಯಿತು. ತುರುವರ ನಾಡು ತುಳುನಾಡಾಯ್ತು...."


ಅಂದರೆ ’ತುಳು’ ಕನ್ನಡ ಪದವಾದ ’ತುಱು’ ಎಂಬುದರಿಂದ ಹುಟ್ಟಿತು ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ.


ಈ ವಿವರಣೆ ಶಂ.ಬಾ.ಜೋಶಿಯವರು ಕನ್ನಡದ ಹುಟ್ಟಿಗೆ ಕೊಟ್ಟ ವಿವರಣೆಯನ್ನೇ ಅನುಸರಿಸಿದಂತಿದೆ:-


ಕನ್ನರು, ಅವರ ನುಡಿ ಕಂನುಡಿ(ಕಂನಡ), ಅವರ ನಾಡು ಕಂನಾಡು. "ಕಳ್"(ಹಾಲು, ಕಳ್ಳಿ- ಹಾಲು ಒಸರಿಸುವ ಗಿಡ) => ’ಕನ್’/ಕಣ್ ( ಹಿಂದಿನ ನೊಳ ->ಇಂದು ನೊಣ ಆದಂಗೆ) ಆಗಿ ಕನ್ನರು ಅಂದರೆ ಹಾಲುಮತದವರು. ಅಂದರೆ ಹಯ್ನುಗಾರಿಕೆ ಅವರ ಮೊದಲ ಕಸುಬೆಂದು ಹೇಳಿದ್ದಾರೆ. ಹೆಚ್ಚು ಕಮ್ಮಿ ತುರುಕಾರರೆ.


 ಅಂದರೆ ಕನ್ನಡಿಗರ/ತುಳುವರ ಮೂಲ ಕಸುಬು ಹಸು ಸಾಕುವುದು/ಹಾಲು ಕರೆಯುವುದು.


ಕೊನೆಯದಾಗಿ, ದ್ರಾವಿಡ ನುಡಿಗಂಟು ( ಇದಕ್ಕೆ ಸಮನಾಡ ತುಳು ಪದವನ್ನು ಕೊಟ್ಟಿಲ್ಲ ಎಂಬುದನ್ನ ಗಮನಿಸಿ)


http://dsal1.uchicago.edu/cgi-bin/philologic/getobject.pl?c.1:1:949.burrow


 Ka. tuṟu cow, kine; toṟu, tuṟupu, turuhu = tuṟu (Gai, Historical Grammar of Old Kannada, index); tuṟukāṟa cowherd, owner of cows; tuṟuvaḷa, tuṟuvāḷa cowherd

Rating
No votes yet

Comments