ಮಾನ್ಯ ಮುಖ್ಯಮಂತ್ರಿಗಳೇ, ಅಂದಿನಂತೆ ಇಂದೂ, ಕಣ್ಣೀರಿಳಿಸಿಬಿಡಿ ಒಮ್ಮೆ!

ಮಾನ್ಯ ಮುಖ್ಯಮಂತ್ರಿಗಳೇ, ಅಂದಿನಂತೆ ಇಂದೂ, ಕಣ್ಣೀರಿಳಿಸಿಬಿಡಿ ಒಮ್ಮೆ!

ಅಂದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿಯವರನ್ನು ಕಡ್ಡಾಯವಾಗಿ ವರ್ಗ ಮಾಡಬೇಕಾಗಿ ಬಂದಾಗ ಹಾಗೂ ತನ್ನ ಮಂತ್ರಿಮಂಡಲದ ಸಚಿವೆ ನೀಡಿದ ರಾಜೀನಾಮೆ ಪತ್ರವನ್ನು ಒಪ್ಪಿಗೆಯೊಂದಿಗೆ ರಾಜ್ಯಪಾಲರಿಗೆ ರವಾನಿಸಬೇಕಾಗಿ ಬಂದಾಗ, ಸಾರ್ವಜನಿಕವಾಗಿ ಕಣ್ಣೀರಿಳಿಸಿದ್ದ ಮಾನ್ಯ ಮುಖ್ಯಮಂತ್ರಿಗಳೇ, ಇಂದು ನಮ್ಮ ರಾಜ್ಯದ ನಿಷ್ಠಾವಂತ ಲೋಕಾಯುಕ್ತ ನ್ಯಾಯಮೂರ್ತಿ ನಿಟ್ಟೆ ಸಂತೋಷ ಹೆಗ್ಡೆಯವರು ರಾಜೀನಾಮೆ ನೀಡಿರುವಾಗ ಮನನೊಂದು ಮತ್ತೊಮ್ಮೆ ಕಣ್ಣೀರಿಳಿಸುವಿರಾ?


ಪ್ರಾಮಾಣಿಕರನ್ನು ಕಳೆದುಕೊಳ್ಳುವಾಗ ನೊಂದುಕೊಂಡು ಕಣ್ಣೀರಿಳಿಸುವ ನಿಮ್ಮ ಮನಸ್ಸು ಇಂದೂ ಕೂಡ ನೊಂದುಕೊಂಡು ಕಣ್ಣೀರಿಳಿಸಬೇಕು ತಾನೇ?


ಇಂದು ನೀವು ಲೋಕಾಯುಕ್ತರ ರಾಜೀನಾಮೆಗೆ ಕಣ್ಣೀರಿಳಿಸುವುದಿಲ್ಲ ಎಂದಾದರೆ ಅಂದು ಶೋಭಾ ಕರಂದ್ಲಾಜೆಗಾಗಿ ಕಣ್ಣೀರಿಳಿಸಿದ್ದು ಬರೀ ವೈಯಕ್ತಿಕ ಹಿತಾಸಕ್ತಿಯಿಂದ ಎನ್ನುವುದು ಸಾಬೀತಾಗುವುದಿಲ್ಲವೇ?


ಅತ್ತುಬಿಡಿ ಒಮ್ಮೆ... ಮಾನ್ಯ ಮುಖ್ಯಮಂತ್ರಿಗಳೇ ಅತ್ತುಬಿಡಿ ಒಮ್ಮೆ. ಕಣ್ಣೀರ ಧಾರೆ ಹರಿಯಬಿಡಿ ಒಮ್ಮೆ.


ನೀವು, ಭ್ರಷ್ಟಾಚಾರಿಗಳ ಕೈಗೊಂಬೆಯಾಗಿದ್ದು, ಪಟ್ಟಭದ್ರ ಹಿತಾಸಕ್ತಿ ಹೊಂದಿರುವ, ಓರ್ವ ನಿಸ್ಸಹಾಯಕ ಅಳುಬುರುಕರಷ್ಟೇ ಎಂದು ಸಾಬೀತುಪಡಿಸಿಬಿಡಿ ಮಗದೊಮ್ಮೆ.


ಯಾರೂ ಕೇಳುವುದಿಲ್ಲ ನಿಮ್ಮನ್ನು "ಕಣ್ಣೀರ ಧಾರೆ ಇದೇನು? ಇದೇನು?" ಎಂದು.


ಏನಂತೀರಿ?


- ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments