ತನ್ನಂತೆ ಪರರ ಬಗೆವೊಡೆ .....!!!!
೧.ಮನೆ
"ಅಮ್ಮ ನಂಗೆ ನಾಳೆ ಕೆಲಸಕ್ಕೆ ಬರಲು ಆಗುವುದಿಲ್ಲ, ಬಟ್ಟೆ ಎಲ್ಲ ಇವತ್ತೇ ಒಗೆದು , ಬೇಕಾದ್ರೆ ಸಂಜೆ ಒಂದೆರಡು ಗಂಟೆ ಕೆಲಸ ಜಾಸ್ತಿಯೇ ಮಾಡಿ ಹೋಗ್ತೇನೆ" ನಂಜಿ
"ಯಾಕಮ್ಮ , ನಮ್ಮನೇಲೂ ನಾಳೆ ಅತಿಥಿಗಳು ಬರ್ತಾ ಇದ್ದಾರೆ, ನಿನು ಇಲ್ಲಂದ್ರೆ ನಂಗೆ ತುಂಬಾ ಕಷ್ಟ ಆಗುತ್ತೆ, ನಾಳೆ ನೀನು ರಜೆ ಹಾಕೋದು ಬೇಡ"
"ಇಲ್ಲಮ್ಮ ನನ್ನ ಮಗಳ ಶಾಲೆಯಲ್ಲಿ ಅವಳದ್ದೇನೋ ಪ್ರೋಗ್ರಾಮ್ ಇದೆಯಂತೆ." ನಂಜಿ
"ಅದೆಲ್ಲಾ ನಂಗೆ ಗೊತ್ತ್ತಿಲ್ಲ, ನಾಳೆ ನೀನು ಬರದಿದ್ದರೆ, ನಿನ್ನ ಸಂಬಳ ಕಟ್ ಮಾಡ್ತೇನೆ, ನೋಡು"
"ಯಾಕೆ ಇವತ್ತು ಜಾಸ್ತಿಯೇ ಮಾಡ್ತೇನಲ್ಲಮ್ಮಾ?" ನಂಜಿ
"ನಮ್ಮ ಕೆಲ್ಸಕ್ಕೆ ಇಲ್ಲ ಅಂದರೆ.....??? ಅದಕ್ಕೇ... ನಾನು ಹಾಗೇ ಮಾಡೋದು, ನೋಡ್ಕೋ!!!."
೨. ಕಛೇರಿ
"ಹಲ್ಲೊ ಸರ್ ನನ್ನ ಮೆಡಿಕಲ್ ಬಿಲ್ ಇನ್ನೂ ಪಾಸಾಗಿಲ್ಲವಲ್ಲ"
"ಹಾಗಾ ನೋಡ್ತೀನಿ ಇರಿ"
"ಓಕೆ, ಓಕೆ ನೀವು ಕಳೆದ ತಿಂಗಳು ನಿಮ್ಮ ತಾಯಿಯವರನ್ನು ಆಸ್ಪತ್ರೆಗೆ ಸೇರಿಸಿದ್ದೀರಲ್ಲಾ ಅದೇ ಕ್ಲೈಮ್ ಅಲ್ಲವಾ ನೀವು ಕೇಳಿದುದು?"
"ಅದು ಸ್ವಲ್ಪ ಪ ರಿಶೀಲನೆಯಲ್ಲಿದೆ, ಸ್ವಲ್ಪ ಆ ಆಸ್ಪತ್ರೆಯ ನಂಬರ್ ಕೊಡ್ತೀರಾ?"
"ಆ ಬಿಲ್ ನಲ್ಲೇ ಇದೆಯಲ್ಲಾ ಸರ್, ವಾರ್ಡ ನಂಬರ್ ಬೆಡ ನಂಬರ್ ಎಲ್ಲಾ ಅಲ್ಲಿನ ಡಿಶ್ಚಾರ್ಜ್ ಸ್ಲಿಪ್ನಲ್ಲೇ ಇದೆ".
"ಆದರೆ ನಿಮ್ಮ ಅದರಲ್ಲಿನ ಸಹಿಗೂ ನಮ್ಮ ರೆಕಾರ್ಡನಲ್ಲಿನ ಸಹಿಗೂ ತಾಳೆಯಾಗುತ್ತಿಲ್ಲವಲ್ಲ"
"ಇಲ್ಲ ಸರ್ ನಾನೇ ಖುದ್ದಾಗಿಅಲ್ಲಿಯೆ ನಿಂತು ಮಾಡ್ಸಿದ್ದೆ ಸರ್, ಸುಮಾರು ೮-೧೦ ಘಂಟೆಗಳ ಕಾಲ ನಾನು ಅಲ್ಲಿಯೇ ಇದ್ದೆ."
"ಇದರಲ್ಲಿ ಮೂರು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿದ್ದರು ಅಂತ ಅರೆದಿದೆ, ಯಾರಿದ್ದರು ಅವರ ಜತೆ..?"
"ನಾನೇ ಇದ್ದೆ ಸರ್...!"
"ಸರಿ ಸರಿ,"
"ಇದನ್ನ ಅಕೌಂಟ್ ಸೆಕ್ಷನ್ಗೆ ಕಳುಹಿಸುತ್ತೇನೆ ಆಯ್ತಾ"..
"ಉಪಕಾರವಾಯ್ತು ಸರ್ ನಿಮ್ಮಿಂದ".
೩. ಫಲಿತಾಂಶ
" ಹಲ್ಲೋ ನಂಜಿಯವರೇ, ಇದು ಆಢಳಿತ ಕಾರ್ಯಾಲಯದಿಂದ , ನೀವು ಕಳೆದ ತಿಂಗಳು ೧೩,೧೪,೧೫ ರಂದು ಆಫೀಸಿಗೆ ಬರದೇ ಇದ್ದುದರಿಂದ ಹಾಗೂ , ಮೇಲಾಧಿಕಾರಿಗಳ ಒಪ್ಪಿಗೆ ಯಿಲ್ಲದೇ ಆಫೀಸಿಗೆ ಗೈರು ಹಾಜರಿಯಾಗಿದ್ದರಿಂದ ಆ ದಿನಗಳನ್ನು ಸಂಬಳವಿಲ್ಲದ ರಜೆಯಾಗಿ ಪರಿವರ್ತಿಸಿ, ನಿಮಗೆ ಕಾರಣ ಹೇಳಿ ನೋಟೀಸ್ ಜಾರಿ ಮಾಡಲಾಗಿದೆ."
Comments
ಉ: ತನ್ನಂತೆ ಪರರ ಬಗೆವೊಡೆ .....!!!!
In reply to ಉ: ತನ್ನಂತೆ ಪರರ ಬಗೆವೊಡೆ .....!!!! by vasanth
ಉ: ತನ್ನಂತೆ ಪರರ ಬಗೆವೊಡೆ .....!!!!
ಉ: ತನ್ನಂತೆ ಪರರ ಬಗೆವೊಡೆ .....!!!!
In reply to ಉ: ತನ್ನಂತೆ ಪರರ ಬಗೆವೊಡೆ .....!!!! by suresh nadig
ಉ: ತನ್ನಂತೆ ಪರರ ಬಗೆವೊಡೆ .....!!!!
ಉ: ತನ್ನಂತೆ ಪರರ ಬಗೆವೊಡೆ .....!!!!
In reply to ಉ: ತನ್ನಂತೆ ಪರರ ಬಗೆವೊಡೆ .....!!!! by asuhegde
ಉ: ತನ್ನಂತೆ ಪರರ ಬಗೆವೊಡೆ .....!!!!
ಉ: ತನ್ನಂತೆ ಪರರ ಬಗೆವೊಡೆ .....!!!!
In reply to ಉ: ತನ್ನಂತೆ ಪರರ ಬಗೆವೊಡೆ .....!!!! by deepakdsilva
ಉ: ತನ್ನಂತೆ ಪರರ ಬಗೆವೊಡೆ .....!!!!
ಉ: ತನ್ನಂತೆ ಪರರ ಬಗೆವೊಡೆ .....!!!!
In reply to ಉ: ತನ್ನಂತೆ ಪರರ ಬಗೆವೊಡೆ .....!!!! by ksraghavendranavada
ಉ: ತನ್ನಂತೆ ಪರರ ಬಗೆವೊಡೆ .....!!!!