ಮೌನ ಗೀತೆ.....

ಮೌನ ಗೀತೆ.....

ಕಾಣದ ಕೈಗಳಿಗೆ ಬೇಡಿಯ ತೊಡಿಸಿ,


ಹಾರುವ ಪಕ್ಷಿಯ ಕುತ್ತಿಗೆ ಹಿಚುಕಿ,


ಬೆಳೆಯುವ ಪರಿ ನೋಡು ! ಅಬ್ಬಾ....!


ಎಲ್ಲವೂ ಬೇಕು- ಬೇಡವಾಗಿದ್ದು ಯಾವುದು?


ಎಲ್ಲೆಲ್ಲಿಯೂ ಒ೦ದೊ೦ದು ತೆರನಾದ ಶಿಕಾರಿ.


ಸೃಷ್ಟಿ-ಸ್ಥಿತಿ-ಲಯಗಳಿಗೆಲ್ಲಾ ಕಾರಣನೆ೦ಬ ಹೆಮ್ಮೆ.


ದಿನಕ್ಕೊ೦ದು ಸ೦ಶೋಧನೆಯ ಗರಿಮೆ!


ಅಲ್ಪನಿಗೂ ಅಷ್ಟೈಶ್ವರ್ಯದ ಕನಸು!


ಕನಸು ಕಾಣಲಡ್ಡಿಯಿಲ್ಲ.


ಸಾಧನೆಗೆ ಮತ್ಸರವಿಲ್ಲ!


ಎಲ್ಲವೂ ನಿನದೇ ಎ೦ಬ ಹಪಾಹಪಿ ಏಕೆ?


ಅರಿತು ಬಾಳಲಾಗದೇ?


ಮೂಕ ಹಕ್ಕಿಯ ಹಾಡಿಗೆ..,


ಮೌನ ಗೀತೆಯ ರಾಗ.....!


ಹುಟ್ಟಿಸು, ಪೋಷಿಸು..


ನೀನೇ ಸಾಯಿಸಬೇಡ...


ಕೊನೆಗೊಮ್ಮೆ ನಿನ್ನ ಶವಕೂ


ವಾರಸುದಾರರ ಹುಡುಕಬೇಕಾದೀತು!!!

Rating
No votes yet

Comments