ಹೀಗೊಂದು ಲವ್ ಸ್ಟೋರಿ

ಹೀಗೊಂದು ಲವ್ ಸ್ಟೋರಿ

ಸಾಗರದಲ್ಲಿ ಡಿಪ್ಲೊಮೊ ಓದುತ್ತಿದ್ದ ಕಾಲ. ಒಂದು ಮನೆಯಲ್ಲಿ 8ಜನ ವಿವಿಧ ತಾಲ್ಲೂಕಿನ ಹುಡುಗರು ಇದ್ವಿ. ಸಂಜೆಯಾಗುತ್ತಿದ್ದಂತೆ ಸ್ಥಳೀಯ ಹುಡುಗರು ನಮ್ಮೊಂದಿಗೆ ಸೇರಿ ಹರಟುತ್ತಿದ್ದರು. ಕಾಲೇಜಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಿದ್ದರೂ ನಮ್ಮ ಮನೆಯೇ ಅಭ್ಯಾಸದ ತಾಣ. ಓನರ್ ಈ ಹುಡುಗರಿಗೆ ಯಾಕಾದರೂ ಮನೆ ಕೊಟ್ವೋ ಅಂತಾ ಬೇಜಾರ್ ಮಾಡಿಕೊಳ್ಳೋರು. ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಒಂದೆರೆಡು ಡಾನ್ಸ್, ಸ್ಕಿಟ್,ಚಿತ್ರನಟರ ಮಿಮಿಕ್ರಿ ಅಂತಾ ಹೀಗೆ ಭಾಗವಹಿಸುತ್ತಿದ್ದೆ. ಕಾಲೇಜ್ ಕ್ಯಾಂಟೀನ್ ನಮ್ಮ ಅಡ್ಡೆ. ಅದರಲ್ಲೂ ಮೆಕ್ಯಾನಿಕಲ್ ಎಂದರೆ ಹುಡುಗಿಯರೂ ಕೊಂಚ ದೂರನೇ.

ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವೀಣಾ (ಹೆಸರು ಬದಲಾಯಿಸಲಾಗಿದೆ), ನೋಡುವುದಕ್ಕೂ ಸುಂದರವಾಗಿದ್ದಳು. ಅವಳು ನಗು ಎಲ್ಲರಿಗೂ ಭಿನ್ನವೆನಿಸುತ್ತಿತ್ತು. ಕಾಲೇಜಿನ ಹಲವಾರು ಹುಡುಗರು ಅವಳ ಹಿಂದೆ ಬಿದ್ದಿದ್ದು ಅಂತೂ ಸತ್ಯ. ಸುರೇಶ "ಬೇಟಾ" ಹಿಂದಿ ಚತ್ರದ ಹಾಡಿಗೆ ನಾವಿಬ್ಬರೂ ಡಾನ್ಸ್ ಮಾಡೋಣ ಅಂದ್ಲು. ಸ್ಟಾಂಡರ್ಡ್ ತೋರಿಸಬೇಕು ಅಂತಾ ನೀನೊಬ್ಬಳೆ ಮಾಡು ಅಂದೆ. ಮನಸ್ಸು ಮಾಡು ಅನ್ನುತ್ತಿತ್ತು. ಕಡೆಗೆ ಭೀಮನಕೋಣೆಯ ಶ್ರೀಧನ್ ನಿನಗೆ ಆಗಲಿಲ್ಲ ಅಂದರೆ ಬೇರೆಯವರಿಗೆ ಹೇಳಿಕೊಡು ಅಂದಾ. ಬೇಡ ಬಿಡು ನಾನೇ ಮಾಡುತ್ತೀನಿ ಅಂದೆ. ಪ್ರಾಕ್ಟೀಸ್ ಆಯ್ತು. ಒಳ್ಳೆಯ ಸ್ನೇಹಿತರು ಆದ್ವಿ. ಅಷ್ಟೊತ್ತಿಗೆ ನಮ್ಮಲ್ಲಿನ ಒಬ್ಬ ಅವಳ ಬಗ್ಗೆ ಫುಲ್ ಪಾಗಲ್ ಆಗಿದ್ದ. ಏನೇ ವಿಷಯ ಮಾತನಾಡಿದ್ರೂ ಅವಳ ವಿಷಯಕ್ಕೆ ಬರೋನು.

ಅದು ಬರಬರುತ್ತಾ ಸುರೇಶ ನಿನ್ನ ಕಂಡರೆ ಇಷ್ಟ ಪಡುತ್ತಾಳೆ ಅಂದಾ ಶ್ರೀಧನ್. ಏ ಬೇಡಪ್ಪಾ ನಾವು ಬಂದಿರೋದು ಓದಕ್ಕೆ, ಇವೆಲ್ಲಾ ಬೇಡಮಾ ಅಂದೆ.(ಬಹಳ ತತ್ವ ಜ್ಞಾನಿ ತರಹ), ನನಗೆ ಗೊತ್ತಿಲ್ಲದೆನೇ ಅವಳು ಕಾಲೇಜಿಗೆ ಹೋಗುವ ಬಸ್ಸಿಗೆ ನಾನು ಹೋಗುತ್ತಿದ್ದೆ. ಅವಳ ಹಿಂದುಗಡೆ ಸೀಟ್ನಲ್ಲಿ ಕೂತು ರೇಗಿಸುವುದು, ತಮಾಷೆ ಮಾಡುತ್ತಾ ಹೋಗುತ್ತಿದ್ದೆ. ಅದಕ್ಕೆ ಅವಳು ನಗೋಳು.  ಬರುವಾಗ ನನ್ನ ಕ್ಲಾಸುಗಳು 2ಗಂಟೆಗೆ ಮುಗಿದಿದ್ದರೂ ಅವಳ ಕ್ಲಾಸ್ ಮುಗಿಯುವ ತನಕ ಕ್ಯಾಂಟೀನ್ ನಲ್ಲಿ ಕಾದು ಅವಳ ಜೊತೆಯೇ ಕಾಲೇಜಿನಿಂದ ಸಾಗರಕ್ಕೆ ಹೆಜ್ಜೆ ಹಾಕುತ್ತಿದ್ದೆ. ಕಾಲೇಜು ಊರಿನಿಂದ ಸುಮಾರು 3ಕಿ.ಮೀ ದೂರವಿದೆ. ಕೂಲ್ ಡ್ರಿಂಕ್ಸ್, ಗಿಫ್ಟ್ ಮಾಮೂಲಿ. ಸ್ನೇಹಿತ ಮಗನೆ ನನ್ನ ಫಿಗರಿಗೆ ನೀನು ಲೈನಾ. ಇಲ್ಲಪ್ಪಾ ಬರೀ ಫ್ರೆಂಡ್ಸ್ ಅಷ್ಟೆ ಅಂತಿದ್ದೆ.

ಅಷ್ಟರೊಳಗೆ ನಿನ್ನ ಪ್ರೀತಿ ವಿಷಯ ತಿಳಿಸು ಅಂತಾ ಶ್ರೀಧನ್ ಹೇಳುತ್ತಲೇ  ಇದ್ದ. ನನಗೆ ಅಷ್ಟೊಂದು ಮೀಟರ್ ಇಲ್ಲ ಅಂದು ಸುಮ್ಮನಾಗಿದ್ದೆ. ಮುಂದಿನ ವಾರ ಹೇಳಲೇ ಬೇಕು ಅಂತಾ ಎಲ್ಲಾ ಪ್ಲಾನ್ ಮಾಡಿದ್ದೆ. ಒಂದು ವಾರ ಆದರೂ ಅವಳು ಕಾಲೇಜಿಗೆ ಬರಲೇ ಇಲ್ಲ. ಯಾಕೆ ಅಂತಾ ಅವಳ ಸ್ನೇಹಿತೆಯರನ್ನು ಕೇಳಿದೆ. ಓದಕ್ಕೆ ಅಂತಾ ಅವಳು ಶಿವಮೊಗ್ಗಕ್ಕೆ ಹೋಗಿದ್ದಾಳೆ ಅಂದರು. ಸರಿ. ಆಗ ಮೊಬೈಲ್ ಇರಲಿಲ್ಲ. ಸ್ವಲ್ಪ ದಿನ ಮನಸ್ಸು ಏನು ಬೇಡವೆನಿಸಿತು. ನಂತರ ಪರೀಕ್ಷೆ ಸಮಯದಲ್ಲಿ ಸಿಕ್ಕಳು. ಅಷ್ಟೊತ್ತಿಗಾಗಲೇ ನನ್ನ ಜವಾಬ್ದಾರಿಯ ಅರ್ಥವಾಗಿತ್ತು. ಬೆಂಗಳೂರಿನಲ್ಲಿ ಇದ್ದಾಳಂತೆ. ಇತ್ತೀಚೆಗೆ ಒಮ್ಮೆ ಸಿಕ್ಕಾಗ ಅದೇ ಸ್ಮೈಲ್.  ಅವಳನ್ನು ನೋಡುತ್ತಿದ್ದಂತೆ ಹಳೆಯದಲ್ಲ ನೆನಪಾಯಿತು. 

Rating
No votes yet

Comments