ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
ಕಳೆದ ಕೆಲವು ವಾರದಿಂದ ವಿಜಯ ಕನರ್ಾಟಕದಲ್ಲಿ ನಾಡಿನ ಹಿರಿಯರಾದ ಚಂಪಾ, ಚಿಮೂ, ನಾಮು ಅವರುಗಳ ನಡುವೆ ನಡೆಯುತ್ತಿರುವ ಚಚರ್ೆಯನ್ನು ಗಮನಿಸುತ್ತಿದ್ದೇನೆ. ಚಿಮೂ ಇನ್ನೂ ಈ ನಿಶ್ಚಿತ ಚಚರ್ೆಯಲ್ಲಿ ಪಾಲ್ಗೊಂಡಿಲ್ಲದಿದ್ದರೂ(ವಾಚಕ ವಿಜಯಕ್ಕೆ ನೀಡಿದ ಪ್ರತಿಕ್ರಿಯೆ ಬಿಟ್ಟು) ಅವರು ಪ್ರತಿಪಾದಿಸುತ್ತಿರುವ ವಿಚಾರವನ್ನು ಸಾಕಷ್ಟು ಅಭ್ಯಾಸಮಾಡಿ ತಿಳಿದಿದ್ದೇನೆ. ಈ ಚಚರ್ೆಯಲ್ಲಿ ಅವರಿಗೆ ಕೇಳಿರುವ ಪ್ರಶ್ನೆಗಳು, ಹಾಗೂ ಪ್ರಶ್ನೆ ಕೇಳುತ್ತಿರುವ ಚಂಪಾರವರ ಗ್ರಹಿಕೆಗಳು, ಇವೆರಡನ್ನೂ ಆಧರಿಸಿ ನನ್ನ ಪ್ರತಿಕ್ರಿಯೆಯನ್ನು ಈ ಲೇಖನದಲ್ಲಿ ಇಡುತ್ತೇನೆ.
ಒಂದು ಮನವಿ: ಚಂಪಾ ಮತ್ತು ನಾಮು ಇಬ್ಬರ ಲೇಖನಗಳಲ್ಲೂ ವ್ಯಂಗ್ಯ, ವ್ಯಕ್ತಿ ನಿಂದನೆ, ಒಬ್ಬ ವ್ಯಕ್ತಿ ಪ್ರತಿಪಾದಿಸುವ ವಿಚಾರದ ಹಿಂದೆ ಇರುವ ಅಥವಾ ಇದೆ ಎಂಬುದಾಗಿ ಭಾವಿಸುವ ಗುಪ್ತ ಅಜೆಂಡಾಗಳನ್ನು ಜರಿಯುವುದನ್ನೇ ಪ್ರಧಾನಮಾಡಿ, ಅವರೇ ಎತ್ತುತ್ತಿರುವ ಗಂಭೀರ ವಿಷಯಗಳು ಹಿನ್ನೆಲೆಗೆ ಸರಿದಿವೆ. ಇಂತಹ ಜರಿಯುವಿಕೆ ಹಾಗೂ ವ್ಯಂಗ್ಯಗಳು ಕನರ್ಾಟಕದಲ್ಲಿ ನಡೆಯಬಹುದಾಗಿದ್ದ ಅನೇಕ ಅರ್ಥಪೂರ್ಣ ಚಚರ್ೆಗಳನ್ನು ಕೊಂದುಹಾಕಿವೆ. ಇಂತಹ ಹಿರಿಯರಲ್ಲಿರುವ ಈ ರೀತಿಯ ಪ್ರವೃತ್ತಿಯು ನಮ್ಮಂತಹ ಕಿರಿಯರಿಗೆ ಕಿಂಚಿತ್ತೂ ಸಹಾಯವಾಗುವುದಿಲ್ಲ ಎನ್ನುವುದು ನನ್ನ ಪ್ರಾಮಾಣಿಕವಾದ ಅಭಿಪ್ರಾಯ.
ಈ ಲೇಖನದಲ್ಲಿ ನಾನು ಚಂಪಾ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸ ಮಾಡುತ್ತೇನೆ. ಈ ಕೆಲಸದಲ್ಲಿ ಚಿಮೂ ಮತ್ತು ಚಂಪಾ ಇಬ್ಬರನ್ನು ಎರಡು ವಿರುದ್ಧ ಚಿಂತನೆಗಳ ಪ್ರತಿನಿಧಿಗಳನ್ನಾಗಿ ಪರಿಗಣಿಸಲಾಗಿದೆ. ನಾನೂ ಹಾಗೇ ಅಂದುಕೊಂಡು, ಅಂದರೆ ಚಿಮೂ ಅವರನ್ನು ಹಿಂದೂ ಹಕ್ಕಿನ ಪರವಾದಿ ಮತ್ತು ಚಂಪಾ ಅವರನ್ನು ಸೆಕ್ಯುಲರ್ ಪರವಾದಿ ಎಂದುಕೊಂಡು ಪ್ರಾರಂಭಿಸುತ್ತೇನೆೆ. ನನ್ನ ವಾದವೆನಿದ್ದರೂ ಈ ಚಿಂತನೆಗಳ ನೆಲೆಯ ಬಗೆಗಷ್ಟೇ ವಿನಃ ಯಾವುದೇ ವ್ಯಕ್ತಿಗೆ ಸಂಬಂಧಿಸಿದ್ದಲ್ಲ.
1. ಚಿಮೂ ಹಿಂದೂ ಧರ್ಮ ಎನ್ನುವುದು ಅಸ್ತಿತ್ವದಲ್ಲಿದೆ ಎನ್ನುವುದನ್ನು ಬಲವಾಗಿ ನಂಬಿದ್ದಾರೆ. ಆದರೆ ಹಿಂದೂ ಎನ್ನುವ ಒಂದು ರಿಲಿಜನ್ನು ಇದೆ ಎನ್ನುವ ಅವರ ನಂಬಿಕೆಗೆ((ನಾನು ಇಲ್ಲಿ ಸಾಮಾನ್ಯವಾಗಿ ಬಳಸುವ ಧರ್ಮ ಎನ್ನುವ ಪದವನ್ನು ಬಳಸದೆ ರಿಲಿಜನ್ ಪದ ಬಳಸುತ್ತಿದ್ದೇನೆ. ಏಕೆಂದರೆ ಚಿಮೂ ಹಾಗು ಚಂಪ ಇಬ್ಬರೂ ಹೇಳುತ್ತಿರುವುದು ರಿಲಿಜನ್ ಕುರಿತಾಗಿಯೆ ಹೊರತು ಧರ್ಮವನ್ನಲ್ಲ) ಮಾತ್ರ ಯಾವುದೇ ಸಾಕ್ಷಿಯಿಲ್ಲ. ಹಾಗೆ ನೋಡಿದರೆ ಭಾರತದ ಅನೇಕ ಸಂಪ್ರದಾಯವನ್ನು ಏಕಶಿಲಾ ವ್ಯಾಖ್ಯಾನದಲ್ಲಿ ಒಟ್ಟುಗೂಡಿಸುವ ಪ್ರಯತ್ನವು ವಸಾಹತುಶಾಹಿ ಆಡಳಿತ ಕಾಲದಿಂದಲೇ ಆರಂಭವಾಗಿದೆ. ಇನ್ನೂ ನೇರವಾಗಿ ಹೇಳುವುದಾದರೆ ವಸಾಹತುಶಾಹಿ ಸಕರ್ಾರವು ಪರಿಚಯಿಸಿದ ಸೆಕ್ಯುಲರ್ ಟಾಲರೆನ್ಸ್ (ಚಂಪಾರವರು ಶೇಷ್ಠವೆಂದು ಪರಿಗಣಿಸಿರುವ) ನೀತಿಯಿಂದಾಗಿ ಭಾರತೀಯ ಸಂಪ್ರದಾಯಗಳನ್ನು ಒಂದು ರಿಲಿಜನ್ ಚೌಕಟ್ಟಿನಲ್ಲಿ ಇಟ್ಟು ಅದನ್ನು ಹಿಂದೂ ರಿಲಿಜನ್ ಎಂದು ಗುರುತಿಸು ಕೆಲಸ ಪ್ರಾರಂಬವಾಯಿತು. ಮುಂದೆ ಇದೇ ಹಿಂದೂತ್ವ ಅಥವಾ ಹಿಂದೂ ಹಕ್ಕಿನ ಜನನಕ್ಕೆ ಕಾರಣವಾಯಿತು. ಇದಕ್ಕೆ ಬಾಲಗಂಗಾಧರ ಎಸ್. ಎನ್. ಅವರ ಸಂಶೋಧನೆಯಿಂದ ಒಂದು ಉದಾಹರಣೆ ಕೊಡಬಹುದು: ಬಂಗಾಳದಲ್ಲಿ ಕಂಪನಿ ಸಕರ್ಾರವು ತಾನು ಭಾರತದಲ್ಲಿ ಸೆಕ್ಯುಲರ್ ಸಕರ್ಾರವಾಗುವ ಆದರ್ಶವನ್ನು ಇಟ್ಟುಕೊಂಡು ರಿಲಿಜಿಯಸ್ ಟಾಲರೆನ್ಸ್ ನೀತಿಯನ್ನು ಅನುಸರಿಸುವುದಾಗಿ ಘೋಷಿಸಿತು ಮತ್ತು ಅದೇ ಸಂದರ್ಭದಲ್ಲಿ ಯಾವ ಆಚರಣೆಗಳಿಗೆ ಪಠ್ಯಗಳ ಬೆಂಬಲವಿದೆಯೊ ಅವನ್ನು ಮಾತ್ರ ಸಕರ್ಾರವು ಮಾನ್ಯ ಮಾಡಿ ಉಳಿದವನ್ನು ನಿಷೇಧಿಸುವ ಶಾಸನವನ್ನು ಜಾರಿಗೆ ತಂದಿತು. ಅಂದರೆ ಯಾವುದೇ ಆಚರಣೆಯನ್ನು ಭಾರತೀಯರು ಆಚರಿಸಬೇಕಾದರೆ ಅದಕ್ಕೆ ಪವಿತ್ರಗ್ರಂಥಗಳು ಹಾಗೂ ಡಾಕ್ಟ್ರಿನ್ನುಗಳ ಅನುಮೋದನೆಯ ಅಗತ್ಯವನ್ನು ಒತ್ತಿಹೇಳಿತು. ಅಂದರೆ ವಸಾಹತು ಪ್ರಭುತ್ವದ ಈ ಯೋಜನೆಯಿಂದಾಗಿ ಆಚರಣೆಗಳಿಗೆ ಪವಿತ್ರಗ್ರಂಥಗಳು ಹಾಗೂ ಡಾಕ್ಟ್ರಿನ್ನುಗಳ ಆಧಾರವನ್ನು ಹುಡುಕುವ ಪ್ರವೃತ್ತಿಯು ಭಾರತೀಯರಲ್ಲಿ ಪ್ರಾರಂಭವಾಯಿತು ಹಾಗೂ ಈ ಕೆಲಸವನ್ನು ತೀರಾ ಬಲವಂತವಾಗಿ ಜಾರಿಯಲ್ಲಿ ತರಲಾಯಿತು. ಭಾರತೀಯರ ಆಚರಣೆಗಳಿಗೆ ಡಾಕ್ಟ್ರಿನ್ನುಗಳ ಬುನಾದಿ ಇರುವುದನ್ನು ರುಜುವಾತುಗೊಳಿಸಿದರೆ ಅವರ ಆಚರಣೆಗಳನ್ನು ಅಂಗೀಕರಿಸುವುದಾಗಿ ಸಕರ್ಾರವು ತಿಳಿಸಿತು. ಇಂತಹ ಸಂದರ್ಭದಲ್ಲಿ ಬಂಗಾಳದಲ್ಲಿ ಎರಡು ರೀತಿಯ ಪ್ರತಿಕ್ರಿಯೆಗಳು ಬಂದವು: 1) ಒಂದು ತಮ್ಮ ಆಚರಣೆಗೆ ಯಾವುದೋ ಒಂದು ಪವಿತ್ರಗ್ರಂಥ ಹಾಗೂ ಡಾಕ್ಟ್ರಿನ್ನಿನ ಬೆಂಬಲವಿದೆ ಎಂದು ಅನೇಕ ಪುರಾಣ ಪಠ್ಯಗಳನ್ನು ಸೃಷ್ಟಿಸಿ ತಮ್ಮ ಆಚರಣೆಗಳಿಗೆಲ್ಲಾ ಸಹಮತವನ್ನು ಸಾಬೀತು ಮಾಡಿಕೊಳ್ಳುವುದು. 2) ಇನ್ನೊಂದು, ವೇದಗಳು ಮಾತ್ರವೇ ನಮ್ಮ ನಿಜವಾದ ಪಠ್ಯಗಳು, ಅವುಗಳನ್ನು ಬಿಟ್ಟು ಉಳಿದವೆಲ್ಲವೂ ಅನಧಿಕೃತವಾದವು ಎಂದು ಬಂಗಾಳದಲ್ಲಿ ಚಾಲ್ತಿಯಲ್ಲಿದ್ದ ಅನೇಕ ಆಚರಣೆಗಳನ್ನು ನಿಮರ್ೂಲನ ಮಾಡಲು ಒತ್ತಾಯಿಸಿದ ಸುಧಾರಣಾವಾದಿ ಚಳುವಳಿಗಳ ಪ್ರತಿಕ್ರಿಯೆ. ರಾಜ ರಾಮಮೋಹನ ರಾಯ್ರಂತಹವರು ಭಾರತೀಯ ಸಂಪ್ರದಾಯವನ್ನು ಸೆಮೆಟಿಕ್ ರಿಜನ್ನಿನ ಸ್ವರೂಪದಲ್ಲೇ ಇಡುವ ಕೆಲಸಕ್ಕೆ ನಾಂದಿಹಾಡಿದರು. ಆದರೆ ಒಂದು ಆಚರಣೆಗೆ ಒಂದು ಪಠ್ಯದ ಸಹಮತ ಏಕೆ ಬೇಕು ಎಂದು ಯಾರೂ ಕೇಳಲಿಲ್ಲ. ಕ್ರಿಶ್ಚಿಯನ್ನಂತಹ ರಿಲಿಜನ್ನುಗಳಲ್ಲಿ ಯಾವುದೇ ಆಚರಣೆಗೆ ಒಂದು ಪಠ್ಯದ ಬೆಂಬಲ ಅಗತ್ಯ. ಆದ್ದರಿಂದಲೇ ಅಂತಹ ರಿಲಿಜನ್ನಿನ ಹಿನ್ನಲೆಯಿಂದ ಬಂದ ಕಂಪನಿ ಸಕರ್ಾರಕ್ಕೆ ಇಲ್ಲಿ ಆಚರಣೆಗಳು ನಿಜವಾಗಿಯೂ ಹಿಂದೂ ರಿಲಿಜನ್ನಿನ ಪಠ್ಯದಿಂದ ಬಂದಿದ್ದರೆ ಮಾತ್ರ ಅವು ಅಧಿಕೃತವೆಂಬ ಭಾವನೆ ಇರುವುದು ಸಾಮಾನ್ಯ. ಹಾಗಾಗಿಯೇ ಅದು ಯಾವುದೇ ಆಚರಣೆಗೆ ಪಠ್ಯಗಳ ಬೆಂಬಲವನ್ನು ಕೇಳಿತು. ಆದರೆ ಇದಕ್ಕೆ ಬಂದ ಎರಡೂ ಪ್ರತಿಕ್ರಿಯೆಗಳೂ ಕೂಡಾ ನಮ್ಮ ಆಚರಣೆಗೆ ಪಠ್ಯಗಳ ಬೆಂಬಲದ ಅಗತ್ಯವೇಕೆ ಬೇಕು? ಎಂದು ಕೇಳದೇ ತಮ್ಮ ಆಚರಣೆಗಳೆಲ್ಲವಕ್ಕೂ ಸಮರ್ಥನೆ ಕೊಡುವ ಅಥವಾ ಈ ಆಚರಣೆಯು ತಪ್ಪು, ಇವನ್ನು ನಿಷೇಧಿಸಿ ಎಂದು ವಾದಮಾಡಿದವು. ಈ ಎರಡೂ ಪ್ರತಿಕ್ರಿಯೆಗಳು ಭಾರತೀಯ ಸಂಪ್ರದಾಯಗಳನ್ನು ರಿಲಿಜನ್ನಿನ ರೀತಿಯಲ್ಲೇ ಭಾವಿಸಿದವು. ಕ್ರಿಶ್ಚಿಯಾನಿಟಿಯಂತೆ ಬಲವಾದ ಒಂದು ಕೇಂದ್ರವಿಲ್ಲದೇ ಇರುವುದೇ ನಮ್ಮ ನ್ಯೂನತೆ ಎಂದು ಭಾವಿಸಿದ ಹಿಂದುತ್ವವಾದಿಗಳು ಸೆಮೆಟಿಕ್ ರಿಲಿಜನ್ ಮಾದರಿಯನ್ನೇ ಅನುಸರಿಸಿ ಹಿಂದೂಯಿಸಂನ್ನು ನಿಮರ್ಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂದರೆ ವಸಹಾತುಶಾಹಿ ಸಕರ್ಾರವು ಪರಿಚಯಿಸಿದ ಸೆಕ್ಯುಲರ್ ಟಾಲರೆನ್ಸ್ ನೀತಿಯು ಭಾರತೀಯ ಸಂಪ್ರದಾಯವನ್ನು ನಿರ್ವಹಿಸಿದ ಶೈಲಿಯಿಂದಾಗಿಯೇ ಹಿಂದುತ್ವ ಅಥವಾ ಹಿಂದೂ ಹಕ್ಕಿನ ಜನನವಾಗಿದೆ. ಸೆಕ್ಯುಲರ್ ಚಿಂತನೆಯು ತಪ್ಪು ಗ್ರಹಿಕೆಯ ನಿರ್ಣಯಕ್ಕೆ ಹಿಂದುತ್ವವಾದಿಗಳ ಪ್ರತಿಕ್ರಿಯೆಯು ಬೌದ್ಧಿಕವಾದದ್ದಲ್ಲ, ಅದು ಕೇವಲ ತಾತ್ಪೂತರ್ಿಕ ಪ್ರತಿಕ್ರಿಯೆಯಷ್ಟೇ ಆಗಿದೆ. ಈ ವಾದವನ್ನು ಒಪ್ಪಿದರೆ, ಸೆಕ್ಯುಲರ್ ಚಿಂತನೆ ಮತ್ತು ಹಿಂದುತ್ವಗಳು ಹೇಗೆ ಒಂದಕ್ಕಿಂತ ಇನ್ನೊಂದು ಉತ್ತಮ ಎಂಬ ಪ್ರಶ್ನೆ ಬರುತ್ತದೆ.
2. ಮೇಲೆ ವಾದಿಸಿರುವಂತೆ ಭಾರತೀಯ ಸಮಾಜದ ಜನರ ಆಚರಣೆ ಮತ್ತು ಕ್ರಿಯೆಗಳು ಯಾವುದೋ ಪಠ್ಯದ ಅನುಮೋದನೆಯಿಂದ ಅಥವಾ ಅದಕ್ಕೆ ಅನುಗುಣವಾಗಿ ನಡೆಯುತ್ತವೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಹಾಗೆ ಭಾವಿಸುವುದು ಕ್ರಿಶ್ಚಿಯನ್ ರಿಲಿಜನ್ನಿನ ಸಂಸ್ಕೃತಿಯಲ್ಲಿ ಸಾಮಾಜೀಕರಣಗೊಂಡ ಜನರು ಮಾತ್ರ. ಭಾರತೀಯ ಸಮಾಜವನ್ನು ಅರ್ಥಮಾಡಿಕೊಳ್ಳಬೇಕಾದರೆ ಇಲ್ಲಿನ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಎಂದು ಓರಿಯಂಟಲಿಸ್ಟರು ಭಾವಿಸಿದ್ದು ಮತ್ತು ಮನುಧರ್ಮಶಾಸ್ತ್ರವನ್ನು ಭಾರತೀಯ ಸಮಾಜದ ನಾಗರೀಕ ಕಾನೂನು ಗ್ರಂಥವೆಂದು ಮುಂದಿಟ್ಟಿದ್ದು ಇಂಥ ತಿಳುವಳಿಕೆಯಿಂದಲೇ. ಈ ವಿಚಾರವನ್ನು ಸಹ ಇತ್ತೀಚಿನ ಅಧ್ಯಯನಗಳು ಒತ್ತಿಯೇ ಹೇಳಿವೆ ಎನ್ನುವುದನ್ನು ಚಂಪಾ ಅವರು ಗಮನಿಸಬೇಕು. ಈ ವಾದವು ಸತ್ಯವೇ ಆದರೆ ಮನುಧರ್ಮಶಾಸ್ತ್ರವನ್ನು ಭಾರತೀಯ ಸಾಮಾಜಿಕ ವ್ಯವಸ್ಥೆಗೆ ಮೂಲಾಧಾರವೆಂದು ಭಾವಿಸಿ ಕೊಂಡಾಡುವುದು ಇಲ್ಲವೇ ಸುಡುವುದು ಎರಡೂ ಸಹ ಒಂದೇ ರೀತಿಯ ತಿಳುವಳಿಕೆಯ ಮೇಲೆ ನಿಂತಿರುವುದನ್ನು ನಾವು ಒಪ್ಪಲೇಬೇಕಾಗುವುದು.
3 ಇನ್ನು ಮತಾಂತರದ ವಿಷಯ: ಭಾರತದಲ್ಲಿ ಅನೇಕ ಸ್ಥಳೀಯ ಸಂಪ್ರದಾಯಗಳು ಮತ್ತು ಹೊರಗಿನಿಂದ ಬಂದ ಸೆಮೆಟಿಕ್ ರಿಲಿಜನ್ನಿನ ಸಂಪ್ರದಾಯಗಳೆರಡೂ ಅಸ್ತಿತ್ವದಲ್ಲಿವೆ. ರಿಲಿಜನ್ನುಗಳು ಗಾಡ್/ಅಲ್ಲಾ ನಿಂದಲೇ ದತ್ತವಾಗಿ ತಮ್ಮ ರಿಲಿಜನ್ನು ಬಂದಿದೆ ಎಂದು ಭಾವಿಸಿಕೊಳ್ಳುತ್ತವೆೆ. ಆದ್ದರಿಂದಲೆ ತಮ್ಮ ರಿಲಿಜನ್ನು ಮಾತ್ರವೇ ಸತ್ಯ. ಉಳಿದವು ಸುಳ್ಳು ಎಂದು ಪ್ರತಿಪಾದಿಸುತ್ತವೆ. ಸುಳ್ಳಿನ ಮಾರ್ಗದಲ್ಲಿರುವ ಅನ್ಯರನ್ನು ಸತ್ಯ ಮಾರ್ಗಕ್ಕೆ ಕರೆದು ಕೊಳ್ಳಲು ರಿಲಿಜನ್ನಿನ ಪ್ರಚಾರ, 'ವ್ಯಾಪ್ತಿ' ವಿಸ್ತರಣೆ ಮತ್ತು ಮತಾಂತರವನ್ನು ನಡೆಸುವುದು ತಮ್ಮ ಪವಿತ್ರ ಕರ್ತವ್ಯ ಎಂಬುದಾಗಿ ಈ ರಿಲಿಜನ್ನುಗಳು ಭಾವಿಸುತ್ತವೆ. ಈ ಮೂಲಕ ಬೇರೆ ಸಂಪ್ರದಾಯಗಳಲ್ಲಿ ತಮ್ಮ ಹಸ್ತಕ್ಷೇಪವನ್ನು ಬೆಂಬಲಿಸುತ್ತವೆ. ಇದಕ್ಕೆ ವಿರುದ್ಧವಾಗಿ ಭಾರತದ ಯಾವುದೇ ಸಂಪ್ರದಾಯಗಳು ಮತ್ತೊಂದು ಸಂಪ್ರದಾಯವನ್ನು ಕುರಿತು ಸತ್ಯ-ಸುಳ್ಳುಗಳ ಭಾಷೆಯಲ್ಲಿ ಮಾತನಾಡುವುದಿಲ್ಲ. ಹಾಗಾಗಿ, ಪ್ರಚಾರ ಮತ್ತು ಮತಾಂತರವನ್ನು ಮಾಡುವುದಿಲ್ಲ. ಆದ್ದರಿಂದ ಇವು ಒಂದು ಸಂಪ್ರದಾಯದಲ್ಲಿ ಇನ್ನೊಂದು ಸಂಪ್ರದಾಯದ ಹಸ್ತಕ್ಷೇಪನ್ನು ಒಪ್ಪುವುದಿಲ್ಲವಷ್ಟೇ ಅಲ್ಲ ಅವುಗಳ ಪ್ರಕಾರ ಅದು ಅಧರ್ಮ. ರಿಲಿಜನ್ನುಗಳು ಅನ್ಯವನ್ನು ತಮ್ಮೊಳಗೆ ಕರಗಿಸಿಕೊಂಡು ಪ್ರತ್ಯೇಕತೆಯನ್ನು ನಾಶಮಾಡುತ್ತವೆ. ಆದರೆ ಭಾರತದ ಸಂಪ್ರದಾಯಗಳು ಅನ್ಯವನ್ನು ಹಾಗೆ ಪ್ರತ್ಯೇಕವಾಗಿ ಉಳಿದು ಕೊಳ್ಳವುದಕ್ಕೆ ಅವಕಾಶ ಮಾಡಿಕೊಡುತ್ತವೆ. ನನ್ನ ಪ್ರಕಾರ ಇದೇ ಗುಣವೇ ಭಾರತೀಯ ಸಮಾಜದಲ್ಲಿ ಬಹುತ್ವವನ್ನು ಕಾಪಿಟ್ಟಿರುವುದು ಎನಿಸುತ್ತದೆ. ಹೀಗೆ ಒಂದು ಸಂಪ್ರದಾಯದಲ್ಲಿ ಇನ್ನೊಂದು ಸಂಪ್ರದಾಯದ ಹಸ್ತಕ್ಷೇಪನ್ನು ಒಪ್ಪುವ ಮತ್ತು ನಿರಾಕರಿಸುವ ಎರಡೂ ಸಂಪ್ರದಾಯಗಳು ಇರುವ ಭಾರತೀಯ ಸಮಾಜದಲ್ಲಿ ಭಾರತದ ಸೆಕ್ಯುಲರ್ ಪ್ರಭುತ್ವಕ್ಕೆ ಹಾಗೂ ಬುದ್ಧಿಜೀವಿಗಳಿಗೆ ಒಂದು ಸವಾಲು ಎದುರಾಗುತ್ತದೆ. ಅದೆಂದರೆ ನೀವು ಮತಾಂತರವನ್ನು ಒಪ್ಪಿದರೆ ಭಾರತೀಯ ಸಂಪ್ರದಾಯಗಳ ಅರ್ಥದಲ್ಲಿ ಅಧರ್ಮವಾಗುತ್ತದೆ, ವಿರೋಧಿಸಿದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ನರ ಪವಿತ್ರ ಕರ್ತವ್ಯವನ್ನು ಅಲ್ಲಗಳೆದಂತೆ. ಅಂದರೆ, ಸೆಕ್ಯುಲರ್ ಪ್ರಭುತ್ವವು ರಿಲಿಜನ್ನಿನ ಸ್ವಾತಂತ್ರ್ಯವನ್ನು ಬೆಂಬಲಿಸಿದಾಗ ಮತಾಂತರವನ್ನು ಬೆಂಬಲಿಸುತ್ತಿರುತ್ತದೆ ಹಾಗೂ ಇಸ್ಲಾಂ ಮತ್ತು ಕ್ರಿಶ್ಚಿಯನ್ನರನ್ನು ಬೆಂಬಲಿಸಿರುತ್ತದೆ, ಅದೇ ಕಾರಣದಿಂದ ಭಾರತೀಯ ಸಂಪ್ರದಾಯಗಳ ಹಕ್ಕನ್ನು ಕಸಿದುಕೊಳ್ಳುತ್ತದೆ. ಇದರಿಂದಾಗಿ ಸದ್ಯಕ್ಕೆ ಭಾರತದ ಸೆಕ್ಯುಲರಿಸಂಗೆ ಈ ಸಮಸ್ಯೆಯನ್ನು ಬಗೆಹರಿಸುವ ಶಕ್ತಿಯಿಲ್ಲ ಎನ್ನುವುದು ಮಾತ್ರ ಸಾಬೀತಾಗುತ್ತದೆ. ಆದ್ದರಿಂದ ಹಿಂದೂತ್ವದಿಂದ ಭಾರತೀಯ ಸಮಾಜಕ್ಕೆ ಎಷ್ಟು ಅಪಾಯವಿದೆಯೋ ಆಷ್ಟೇ ಅಪಾಯ ಸೆಕ್ಯುಲರಿಸಂನಿಂದಲೂ ಇದೆ. ಹಾಗಾಗಿ, ಸೆಕ್ಯುಲರಿಸಂ ಅನ್ನು ಒಂದು ಅತ್ಯುತ್ತಮ ಮೌಲ್ಯವೆಂದು ವಾದಿಸುವುದು ಮೂಢನಂಬಿಕೆಯಾಗುತ್ತದೆ.
4 'ಹಿಂದೂ' ಎನ್ನುವುದು ಕೇವಲ ಪ್ರದೇಶ ವಾಚಕ ಎನ್ನುವ ಬಗೆಗೆ ಚಂಪಾ ಅವರ ನಿಲುವೇನು ಎನ್ನುವುದು ಅವರು ಬರೆದಿರುವ ಬರವಣಿಗೆಯಲ್ಲಿ ಸ್ಪಷ್ಟವಾಗಿಲ್ಲ. ಹಿಂದೂ ಎನ್ನುವುದು ಕೇವಲ ಪ್ರದೇಶ ವಾಚಕ ಎನ್ನುವುದನ್ನು ಅವರು ಒಪ್ಪುತ್ತಿದ್ದಾರೆಯೇ? ಉತ್ತರ ಹೌದು ಎಂದಾದರೆ ಅಂತಹ ಒಂದು ರಿಲಿಜನ್ನು ಇಲ್ಲ ಎಂದಾಗುತ್ತದೆ. ಆದರೆ ಅವರು ಹಾಗೆ ವಾದಿಸುವ ಹಾಗೆ ಕಾಣಿಸುತ್ತಿಲ್ಲ ಏಕೆಂದರೆ ಅವರ ಎರಡನೇ ಪ್ರಶ್ನೆಯಲ್ಲಿ 'ಹಿಂದೂ ಎಂಬ ಧರ್ಮಕ್ಕೆ ಬುನಾದಿಯಾಗಿರುವ ಮನು ಸ್ಮೃತಿ....' ಎನ್ನುತ್ತಾರೆ. ಹಾಗೆಂದರೆ ಹಿಂದೂ ಎನ್ನುವ ಒಂದು ಧರ್ಮವಿದೆ ಎಂದು ಚಿದಾನಂದ ಮೂತರ್ಿಯವರಂತೆ ಚಂಪಾರವರು ನಂಬಿರುವಂತೆ ಕಾಣುತ್ತದೆ.
5 ಚಂಪಾರವರು ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಕುರಿತಾದ ಎರಡು ದಿಕ್ಕಿನ ವಾದನ್ನು ಗುರುತಿಸುತ್ತಾರೆ. (ಅ) ಅಸ್ಪೃಶ್ಯತೆ ಸೇರಿದಂತೆ ಅನೇಕ ಕಳಂಕಕಾರಿ ಅಂಶಗಳಿವೆ, ಅವನ್ನು ನಿವಾರಿಸಿದರೆ ಹಿಂದೂ ಧರ್ಮ ಶುದ್ಧವಾಗುತ್ತದೆ. (ಆ) 'ಅಸ್ಪೃಶ್ಯತೆಯು ದೇಹದೊಳಗಿಂದಲೇ ಹುಟ್ಟಿದ ಮಹಾರೋಗವೊಂದರ ಬಾಹ್ಯ ಲಕ್ಷಣ ಅಷ್ಟೆ. ಅದು ಅಳಿಯುವುದು ಆ ದೇಹ ಅಳಿದಾಗ ಮಾತ್ರ' ವೆನ್ನುತ್ತಾರೆ. ಇದರಲ್ಲೂ ಚಂಪಾ ಇದೇ ತಮ್ಮ ನಿಲುವೆಂದು ಸ್ಪಷ್ಟವಾಗೇನೂ ಹೇಳುವುದಿಲ್ಲ. ಅವರು ಮೊದಲನೇ ನಿಲುವನ್ನು ಒಪ್ಪುತ್ತಾರೆ ಎಂದರೆ ಹಿಂದುತ್ವವಾದವನ್ನು ಒಪ್ಪುತ್ತಾರೆ ಎಂದಾಗಿಬಿಡುತ್ತದೆ. ಹಾಗಾಗಿ ನನಗನಿಸುವಂತೆ ಅವರು ಈ ನಿಲುವನ್ನು ನಿರಾಕರಿಸುತ್ತಾರೆ. ಒಂದೊಮ್ಮೆ ಎರಡನೇ ನಿಲುವಿಗೆ ಅವರ ಸಹಮತವಿದೆ ಎಂದರೆ ಅನೇಕ ಸೆಕ್ಯುಲಿರಿಸ್ಟರು ಮಂಡಿಸುವ ಒಂದು ಅಸಂಗತ ವಾದಕ್ಕೆ ಈ ನಿಲುವು ಸಾಕ್ಷಿಯಾಗುತ್ತದೆ. ಅದೆಂದರೆ ಅಮೇರಿಕದ ಸಾಮಾಜಿಕ ರಚನೆಯಲ್ಲಿ ಜನಾಂಗಭೇದದ ಆಚರಣೆಯಿದ್ದರೆ ಅದು ಇಡೀ ಸಾಮಾಜಿಕ ರಚನೆಯ ದೋಷವಲ್ಲ. ಅದನ್ನು ನಿವಾರಿಸಬಹುದು. ಇಸ್ಲಾಂ ರಿಲಿಜನ್ನಿನಿಂದ ಒಬ್ಬ ಉಗ್ರ ಬಂದರೆ ಅದು ಆ ರಿಲಿಜನ್ನಿನ ದೋಷವಲ್ಲ. ಅದು ಆತನ ದೋಷವಾಗುತ್ತದೆ. ಆದರೆ ಭಾರತೀಯ ಸಾಮಾಜಿಕ ರಚನೆಯಲ್ಲಿ ಇರುವ ಅಸ್ಪೃಶ್ಯತೆಯ ಆಚರಣೆ ಮಾತ್ರ ನೇರವಾಗಿ ಹಿಂದೂ ಧರ್ಮದ ಸಾಮಾಜಿಕ ರಚನೆಗೆ ಸಂಬಂಧಿಸಿದ್ದು. ಅದು ರಚನೆ ಸತ್ತರೆ ಮಾತ್ರ ಸಾಯುತ್ತದೆ. ಈ ಇಬ್ಬಂದಿ ನಿಲುವಿನ ಪ್ರಕಾರ ಈ ದೋಷಗಳು ಒಂದು ಸಂದರ್ಭದಲ್ಲಿ ಮೂಲರಚನೆಗೂ(ಹಿಂದೂ ಧರ್ಮ) ಇನ್ನೊಂದು ಸಂದರ್ಭದಲ್ಲಿ (ಅಮೇರಿಕ, ಇಸ್ಲಾಂನ ಸಂದರ್ಭಗಳಲ್ಲಿ) ಆಚರಣೆಯಲ್ಲಿ ತೊಡಗುವವರಿಗೂ ಆರೋಪಿತವಾಗುತ್ತವೆ.
6 ಚಿದಾನಂದ ಮೂತರ್ಿಯವರಿಗೆ ಹಿಂದೂ ಧರ್ಮ ಇರುವುದರ ಬಗೆಗೆ ಸ್ಪಷ್ಟ ನಂಬಿಕೆ ಇದೆ. ಆ ನಂಬಿಕೆ ಸುಳ್ಳೆಂಬುದಾಗಿ ತೋರಿಸಬಹುದು. ಆದರೆ, ಮತಾಂತರಕ್ಕೆ ಸಂಬಂಧಿಸಿದಂತೆ ಅವರ ಪ್ರಶ್ನೆಗಳನ್ನು ಲೇವಡಿಮಾಡಿ ಮೂಲೆಗೊತ್ತಲು ಸಾಧ್ಯವಿಲ್ಲ. ಹಾಗೂ ಇದಕ್ಕೆ ಸಂಬಂಧಿಸಿದಂತೆ ಸೆಕ್ಯುಲರ್ ಪ್ರಭುತ್ವವು ಸೆಮೆಟಿಕ್ ರಿಲಿಜನ್ನುಗಳ ಪರವಾಗಿರುವುದನ್ನು ಅಲ್ಲಗೆಳೆಯಲಾಗುವುದಿಲ್ಲ. ಭಾರತ ಸಂಪ್ರದಾಯಗಳಿಗೆ ಅದು ವಿರುದ್ಧವಾಗಿರುವುದನ್ನು ಅವರು ಸರಿಯಾಗೆ ಗುರುತಿಸುತ್ತಿದ್ದಾರೆ. ಚಂಪಾರವರು ತಮ್ಮ ವಾದವು 'ಸತ್ಯ ಸಸತ್ಯ' ವಾಗಿದೆ ಎಂದು ಹೇಳಿಕೊಂಡರೂ ಅವರ ತಾಕರ್ಿಕತೆಯಲ್ಲಿ ಅಸ್ಪಷ್ಟತೆಯಿದೆ ಎಂಬುದು ಮೇಲಿನ ಅಂಶಗಳಿಂದ ತಿಳಿದುಬರುತ್ತದೆ. ಅಲ್ಲದೇ ಸೆಕ್ಯುಲರ್ ವಾದದಲ್ಲಿನ ಸಮಸ್ಯೆಯನ್ನು ಚಂಪಾರಂಥವರು ಸರಿಯಾಗಿ ಗುರುತಿಸುವುದಿಲ್ಲ. ಈ ಎರಡೂ ವಾದಗಳಲ್ಲಿರುವ ಕಾಳಜಿ ಮತ್ತು ಸಮಸ್ಯೆಯನ್ನು ಸರಿಯಾಗಿ ಗ್ರಹಿಸಿದ ಹೊರತೂ ಈ ಸಮಸ್ಯೆಯಿಂದ ಹೊರಬರುವುದು ಸಾಧ್ಯವಿಲ್ಲ ಎಂಬುದನ್ನು ನಾವು ಮೊದಲು ಮನಗಾಣಬೇಕಿದೆ.
ಮಹೇಶ್ ಕುಮಾರ್ ಸಿ.ಎಸ್
ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ
(ಪ್ರಸ್ತತ ಲೇಖನವು ವಿಜಯಕನರ್ಾಟಕದ ಪತ್ರಿಕೆಯಲ್ಲಿ ಪ್ರಕಟಿತವಾಗಿದೆ)
Comments
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by darshi
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by asuhegde

In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by mpneerkaje

In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by keshava_prasad
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by prasca
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by Praveen Konandur
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by keshava_prasad
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by shivaram_shastri
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by Maheshcslc
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by savithru
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by Maheshcslc
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by shanmukha24
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by savithru
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by cslc

In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by keshavmysore
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by cslc
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
In reply to ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ by ananthesha nempu
ಉ: ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ