ತಿರುಗಿ ಬಂದ ಸಂತೋಷ

ತಿರುಗಿ ಬಂದ ಸಂತೋಷ

Comments

ಬರಹ

ರಾಜ್ಯ ಸರಕಾರದ ಕಾರ್ಯವೈಖರಿ, ಹೆಚ್ಚಿನ ಅಧಿಕಾರ ನೀಡಲು ತೋರಿದ ನಿರಾಸಕ್ತಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದ ಲೋಕಾಯುಕ್ತ [^] ನ್ಯಾ. ಸಂತೋಷ್ ಹೆಗ್ಡೆ ಅವರು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಒತ್ತಾಯಕ್ಕೆ ಮಣಿದು ರಾಜೀನಾಮೆ ಹಿಂದಕ್ಕೆ ಪಡೆದಿದ್ದಾರೆ.

"ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ನನಗೆ ತಂದೆ ಸಮಾನರು. ಅವರು ರಾಜೀನಾಮೆ ವಾಪಸ್ ಪಡೆಯುವಂತೆ ನನಗೆ ಮನವಿ ಮಾಡಿದ್ದಾರೆ. ಅವರ ಮಾತು ಮೀರುವ ಧೈರ್ಯವಾಗಲಿ, ಶಕ್ತಿಯಾಗಲಿ ನನಗಿಲ್ಲ. ನಾನು ಇಟ್ಟಿರುವ ಬೇಡಿಕೆಯನ್ನು ಸರಕಾರ ಪರಿಶೀಲನೆ ನಡೆಸುವ ವಾಗ್ದಾನ ಮಾಡಿದೆ. ಹೀಗಾಗಿ ನನ್ನ ರಾಜೀನಾಮೆ ಪತ್ರವನ್ನು ವಾಪಸ್ ಪಡೆದುಕೊಳ್ಳುತ್ತಿರುವೆ" ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ ಘೋಷಿಸಿದ್ದಾರೆ.

 

ಇದು ಸತ್ಯಕ್ಕೆ ಸಂದ ಗೌರವವೇ , ಜನತೆಯ  ದನಿಯ ಶಕ್ತಿಯೇ ..?

ಅಥವಾ.....?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet