ಇದು ಪದ್ಯವಲ್ಲ

ಇದು ಪದ್ಯವಲ್ಲ

ಎಲ್ಲರೂ ನಿದ್ದೆ ಮಾಡುತ್ತಿದ್ದಾರೆ;
ಕೆಲವರು ಗೊರಕೆ ಹೊಡೆದರೆ,
ಕೆಲವರು ನಿಶ್ಯಬ್ದವಾಗಿ ಮಲಗಿದ್ದಾರೆ;
ಇನ್ನು ಹಲವರು ಎಚ್ಚರವಿದ್ರೂ ಕಣ್ಮುಚ್ಚಿದ್ದಾರೆ......
ನನಗೇಕೋ ನಿದ್ದೆ ಬರುತ್ತಿಲ್ಲ

ಬಸ್ಸು ಒಮ್ಮೆಲೇ ಗುಂಡಿಗೆ ಸಿಕ್ಕಿ ದಗ್ಗನೆ ಮೇಲೆ ಬಂದಾಗ
ನನ್ನೆದುರಿನವ ಕೂಗಿದನು ಆಗ
"ಬಸ್ಸಿನಾಗ ಜೀವ ಇರೋ ಮನುಷ್ಯರಿರೋದು; ಹೆಣಗಳಲ್ಲ"

ಚಾಲಕ ನಿಧಾನವಾಗಿ ಹೇಗೆ ಆ ಗುಂಡಿಯಿಂದ ಪಾರುಮಾಡಿದ ಎಂಬುದು
ಅವನಿಗೇನು ಗೊತ್ತು ಪಾಪ ಅವನು "ನಿದ್ದೆ ಮಾಡುತ್ತಿದ್ದ".

ಸಣ್ಣ ಪುಟ್ಟ ಗುಂಡಿಗಳಿಗೆ ಯಾರು ಅಲುಗಾಡುವುದೇ ಇಲ್ಲ
ದೊಡ್ಡ ಗುಂಡಿ ಬಂದ್ರೆ ಮಗ್ಗುಲಾಗಿ ಮಲಗಿದರೆಲ್ಲ;
ಈ ಹೆಣಗಳಿಗೂ ಜೀವವಿದೆ. ಆದರೆ ಮತಿಲ್ಲ ಕಥೆಯಿಲ್ಲ;

"ಹೆಣಗಳಿಗೂ ಜೀವಭಯ......" ಒಮ್ಮೆಲೆ ಕೂಗಿದರು ಎಲ್ಲ

ಒಬ್ಬ ಚಾಲಕನಿಗೆ ಬೈದ್ರೆ ಇನ್ನೊಬ್ಬ ರಸ್ತೆಗೆ
ಮತ್ತೊಬ್ಬ ರಾಜಕಾರಣಿಗೆ ಬೈದ್ರೆ, ಮಗದೊಬ್ಬ ಭಾರತ ದೇಶಕ್ಕೆ;

"೪೫ ಡಿಗ್ರೀ ವಾಲಿ ನಿಂತಿತ್ತು ಬಸ್ಸು.
ನೋಡುನೋಡುತ್ತಿದ್ದಂತೆ ಉರುಳಿ ಕಣಿವೆಗೆ ಬಿತ್ತು ಬಸ್ಸು"

ಸಣ್ಣಗುಂಡಿಗಳು ಬಂದಾಗಲೇ ಎಚ್ಚೆತ್ತಿದ್ದರೆ
ಸಣ್ಣ ಗುಂಡಿಗಳು ಬಂದಾಗಲೆ ಬೈದಿದ್ರೆ
ಸಣ್ಣಗುಂಡಿ ಆದಾಗಲೇ ಸರಿಪಡಿಸಿದ್ದರೆ
ಬರುತ್ತಿತ್ತಾ ಈ ಸಾವಿನ ಗುಂಡಿ

ಸಣ್ಣ ಗುಂಡಿಗಳೇ ಮುಂದೆ ದೊಡ್ಡ ಗುಂಡಿಗಳಾಗೋದು
ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳಗೋದು
ಸಣ್ಣ ತಪ್ಪಾದಾಗ ತೆಪ್ಪಗಿರಬೇಡಿ.
ಮುಂದೆ ಅದೇ ತಪ್ಪು ದೊಡ್ಡದಾದರೆ ಗೋಳಾಡಬೇಡಿ.

-ರವೀಶ್

Rating
No votes yet

Comments