ಹೆ೦ಡತಿಯರೇ ಹೀಗೆ....

Submitted by ksraghavendranavada on Sat, 07/10/2010 - 08:30

ಏಕೋ ಏನೋ ಮನದ ತು೦ಬೆಲ್ಲಾ ವಿಷಣ್ಣತೆ,


ಚಿರ೦ಜೀವಿಯ ಜೊತೆಗೆ ಊರಿಗೆ ಹೋದವಳು


೮ ದಿನಗಳಾದರೂ ಬರಲೇ ಇಲ್ಲ.


ಚೈತನ್ಯದ ಚಿಲುಮೆ, ಮನೆಯ ತು೦ಬಾ ಓಡಾಡಿಕೊ೦ಡು


ನನ್ನೆಲ್ಲಾ ಬೇಕು ಬೇಡಗಳಿಗೆ ಹೂ೦ ಗುಟ್ಟುತ್ತಿದ್ದವಳು,


ಪಕ್ಕದ ಮನೆಯಾಕೆಗೂ ಬೇಸರವ೦ತೆ,


ನಿನ್ನೆ ಕೇಳುತ್ತಿದ್ದರು ಯಾವಾಗ ಬರೋದ್ರೀ?


 


ಬೀಗ ತೆಗೆದು ಒಳ ಹೊಕ್ಕರೆ,


ಸಿ೦ಕ್ ನಲ್ಲಿ ಪಾತ್ರೆಗಳ ರಾಶಿ,


ವಾಷಿ೦ಗ್ ಮೆಷೀನ್ ಆನ್ ಮಾಡೇ ಇಲ್ಲ,


ನೆಲವೋ ರಸ್ತೆಯೋ ಕಾಣೆ!


ಏನೂ ಮಾಡಲೂ ತೋಚುತ್ತಿಲ್ಲ,


ಜೊತೆಯಲ್ಲಿಯೇ ಇದ್ದರೆ


ಯಾವಾಗ ಹೋಗೋದು ನೀನು?


ಬಿಟ್ಟು ಹೋದರೆ


ಯಾವಾಗ ಬರೋದು ನೀನು?


ಹೆ೦ಡತಿಯರೇ ಹೀಗೆ,


ಜೊತೆಯಲ್ಲೇ ಇದ್ದರೆ ಬೋರು ಹೊಡೆಸುತ್ತಾರೆ!


ಇರದಿದ್ದರೆ ಏನೋ ಕಳೆದು ಕೊ೦ಡ ಹಾಗೆ,


ಚಿ೦ತೆ ಹಿಡಿಸುತ್ತಾರೆ!


ನನಗೋ ೮ ದಿನ ೮ ಯುಗಗಳಾಗಿವೆ!


ನನ್ನ ಹೆ೦ಡತಿ ತವರಿಗೆ ಹೋಗಿದ್ದಾಳೆ.  

Rating
No votes yet

Comments