ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ
ಈಚೆಗೆ ಮಂಡ್ಯಗೆ ಹೋಗಿದ್ದಾಗ ಹಲವು ಸಲ ಕೇಳಿದ್ದ ಅದೇ ಮಾತುಗಳನ್ನು(ಆಡುನುಡಿಯನ್ನು) ಹೊಸದಾಗಿ ಕೇಳಿ - ಅವುಗಳಿಗೆ ಸೊಲ್ಲರಿಮೆಯನ್ನು ವಿವರಿಸುವ ಮೊಗಸು ಇದು:-
ತಿರುಳು: ಈ ಆಡುನುಡಿಯಲ್ಲಿ ’ಹ’ಕಾರ ಬಿದ್ದುವೋಗಿರುವುದು ಮತ್ತು ದ್->ಜ್ ಆಗಿ ಮಾರ್ಪಾಡಾಗುವುದು
ಈ + ಹಯ್ದ = ಈವಯ್ದ( ಎಲ್ಲರ ಕನ್ನಡ), ಆದರೆ ’ದ್’-->’ಜ್’ ಆಗುವುದು ಕನ್ನಡದಲ್ಲಿ(ಆಡುನುಡಿಗಳಲ್ಲೂ) ಹಲವು ಕಡೆ ಕಣ್ದೋರುತ್ತವೆ.
ಹಾಗಾಗಿ ಈ + ವಯ್ ಜ= ಈವಯ್ಜ (ಮಂಡ್ಯದ ಆಡುನುಡಿ) = ಈವಯ್ದ(ಎಲ್ಲರಕನ್ನಡ)
ಇನ್ನು ಕೆಲವು ಎತ್ತುಗೆಗಳು : ಸಂಧ್ಯಾ(ಸಂ) => ಸಂಜೆ, ವಂಧ್ಯಾ(ಸಂ) => ಬಂಜೆ
ಕೆಲವು ಬಳಕೆಗಳು ( ಬರೀ ಮಂಡ್ಯಜಿಲ್ಲೆಯಲ್ಲಿ ಮತ್ತು ಸುತ್ತಮುತ್ತ ಕೇಳಸಿಗುತ್ತವೆ):-
೧. ಬಜ.. ಮಂಡ್ಯಕ್ಕೆ ವೋಮ ( ಬಾ ಹಯ್ದ - ಮಂಡ್ಯಕ್ಕೆ ಹೋಗುವ)
೨. ಯಾವನ್ ಜ ಅಮ ( ಯಾವನೊ ಹಯ್ದ ಅವನು)
೩. ಅಜೊ...ಅಜೊ ಸುಳ್ಳು ಯೋಳ್ಬೇಡ ಕಜೊ ( ಹಯ್ದ... ಹಯ್ದ ..ಸುಳ್ಳು ಹೇಳ್ಬೇಡ ಕಣೊ ಹಯ್ದ)
ಗಮಿನಿಸಿ:
1.ಅಜೊ = ಹಯ್ದ + ಓ ( ಹ ಕಾರ ಬಿದ್ದೋಗಿರುವುದರಿಂದ) = ಅಯ್ದ+ಓ ( ದ->ಜ)=> ಅಯ್ ಜೊ => ಅಜೊ
2. ಕಜೊ = ಕಣ್ ( ಗಣ್ ಡಿನ ಮೊದಲ ರೂಪ) + ಹಯ್ದ ==> ಕಣ್+ ಜೊ = ಕಜೊ
3. ಕಣ್ =>(ಕ --> ಗ) ಗಣ್ => ಗಣ್+ಡು =ಗಣ್ಡು=> ಗಂಡು
4. ಪೆಣ್=> ಹೆಣ್+ಣು => ಹೆಣ್ಣು
ಶಂಕರ ಬಟ್ಟರ ಮತ್ತು ಕೆ.ವಿ.ನಾರಾಯಣರ ಹೊತ್ತಿಗೆ/ಬರಹಗಳಿಂದ ಕಲಿತ ಅರಿಮೆಗಳನ್ನು ಒರೆಗೆ ಹಚ್ಚುವ ಮೊಗಸು.
ಒಟ್ಟಿನಲ್ಲಿ ಎಲ್ಲಾ ಆಡುನುಡಿಗಳ ಸೊಲ್ಲರಿಮೆಯನ್ನು ವಿವರಿಸುಬಹುದು..ಯಾವ ಆಡುನುಡಿ ಕೀಳಲ್ಲ :)
Comments
ಉ: ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ
In reply to ಉ: ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ by ananthesha nempu
ಉ: ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ
ಉ: ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ
ಉ: ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ
ಉ: ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ
ಗಮನಿಸಿ: ಗೆಜ್ಜ/ದ್ದಲು, ಇದ್ದಿ/ಜ್ಜಿಲು