ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ
ಭಾನುವಾರ ಆಗಸ್ಟ್ ೧೨, ಸಿಡ್ನಿಯ ಒಲಂಪಿಕ್ ಅಥ್ಲೆಟಿಕ್ ಸೆಂಟರ್ನಲ್ಲಿ ಇಂಡಿಯಾದ ಅರವತ್ತನೇ ವರ್ಷದ ಸ್ವಾತಂತ್ಯ್ರ ಉತ್ಸವ. ಇದು ಭಾರತದ ಹೊರಗೆ ನಡೆಯೋ ಸ್ವಾತಂತ್ಯ್ರ ಉತ್ಸವಗಳಲ್ಲಿ ಅತಿ ದೊಡ್ಡದಂತೆ. ಹತ್ತಾರು ಸಾವಿರ ಜನ ಇಂಡಿಯಾದವರು ಸೇರತಾರೆ. ದಿನವಿಡೀ ಹಾಡು ಕುಣಿತ ಊಟ ತಿಂಡಿ ಜಾತ್ರೆ. ಇದರ ನಡುವೆ ಆಸ್ಟ್ರೇಲಿಯಾದ ಕೆಲವು ರಾಜಕಾರಣಿಗಳನ್ನ ಕರೆಸಿ ಬೆನ್ನು ತಟ್ಟಿಸಿಕೊಳ್ಳೋ ಬೇಜವಾಬ್ದಾರಿತನ ನಮ್ಮ ಸೂಟುಧಾರಿ ಇಂಡಿಯನ್ "ಎಂಟರ್ಪ್ರೆನರ್ಸ್"ಗಳಿಗೆ. ಹಲ್ಲುಗಿಂಜಿಕೊಂಡು ಅವರ ಜತೆ "ಸಭ್ಯತೆಯ ಲಂಚ್" ಬೇರೆ.
ಅವರೆಲ್ಲಾ ಭಾಷಣದ ಬೊಗಳೆ ಮುಗಿಸಿ "ಸಭ್ಯತೆಯ ಲಂಚ್"ಗೆ ತೊಲಗತ್ತಲೂ, ಕನ್ನಡದವರು ನಾವು ಕೆಲವರು "ಈ ಮಣ್ಣು ನಮ್ಮದು, ಈ ಗಾಳಿ ನಮ್ಮದು" ಅನ್ನೋ ದೊಡ್ಡರಂಗೇಗೌಡರ ಹಾಡು ಹಾಡಿದೆವು. (ಯಾವ ಮಣ್ಣು-ಯಾವ ಗಾಳಿ ಅಂತ ಗೊಂದಲ ಇದೆ ಬಿಡಿ!)
ಆಮೇಲೆ ಕನ್ನಡದ ಪುಟ್ಟ ಪುಟ್ಟ ಮಕ್ಕಳು ಹುರುಪಿನಿಂದ "ಚಲುವಯ್ಯ ಚಲವೋ" ಹಾಡಿಗೆ ಕುಣಿದರು.
ಅಲ್ಲದೆ, ತಮಿಳರು, ತೆಲುಗರು, ಹಿಂದಿಯವರು, ಪಂಜಾಬಿಗಳು, ಮಲಯಾಳಿಗಳು, ಮರಾಟಿಗರು, ಬಂಗಾಳಿಗಳು, ಎಲ್ರೂ ಅವರ ಅವರ ಹಾಡು ಹಾಕಿಕೊಂಡು/ಹೇಳಿಕೊಂಡು ಕುಣಿದರು.
ಇನ್ನೊಂದು ಕಡೆ ನಾವು ಸಿಕ್ಕ ಸಿಕ್ಕ ಕನ್ನಡದವರಿಗೆಲ್ಲಾ ಜೋಕುಮಾರಸ್ವಾಮಿ ಮತ್ತೆ ಆಡ್ತಾ ಇದ್ದೀವಿ ಬನ್ನಿ ಅಂತ ಹೇಳ್ಕೊಂಡು ತಿರುಗತಾ ಇದ್ದಿವಿ. ಆವಾಗ ಆಸ್ಟ್ರೇಲಿಯಾದ ಪ್ರಧಾನಿ ಜಾನ್ ಹವಾರ್ಡ್ ಅನ್ನೋ ಧೂರ್ತನ್ನ ಅವನ ಕ್ಷೇತ್ರದಲ್ಲೇ ಸೋಲಿಸೋ ಹಾಗೆ ಕಾಣೋ, ತನ್ನ ಟಿವಿ ಪ್ರೆಸೆಂಟರ್ ಕೆಲಸ ಬಿಟ್ಟು ಎಲೆಕ್ಷನ್ಗೆ ನಿಂತಿರೋ ದಿಟ್ಟ ಹೆಂಗಸು ಮಾಕ್ಸೀನ್ ಮೆಕ್ಯೂ ಬಂದು ನಮ್ಮ ಜತೆ ಮಾತಾಡಿದಳು. ಅವಳ ಬಗ್ಗೆ ನಮಗೆ ಸ್ವಲ್ಪ ಜಾಸ್ತೀನೆ ಪ್ರೀತಿ. ಮುಂದೆ ಅವಳಿಗೆ ಆ ಪ್ರೀತಿಯ ಭಾರ ಹೊರಕ್ಕಾಗದೇ ಇರಬಹುದು ಅನ್ನೋ ಎಚ್ಚರಿಕೇನೂ ಇದೆ. ಜೋಕುಮಾರಸ್ವಾಮಿ ನಾಟಕಕ್ಕೆ "ನೀನೂ ಬಾ, ನಿನ್ನ ಸಂಗಾತಿಗಳಿಗೂ ಹೇಳು" ಅಂತ ಚೀಟಿ ಕೊಟ್ಟು ಕರೆದವು. ಅವಳ ಹಿಂದೆ ಟೀವಿ ಕ್ಯಾಮೆರಾಗಳು ಇದ್ದವು. ಅವಳು ಯಾವುದಾದರೂ ಹಾಡು ಹೇಳಿ ಅಂದಳು. ತಕ್ಕೊ ಅಂತ "ಶರಣು ಹೇಳೇವ್ರಿ" ಹಾಡನ್ನು ಹಾಡಿದವು. ಅದು ಆವತ್ತು ಸಂಜೆ ಟೀವಿ ನ್ಯೂಸಲ್ಲೆಲ್ಲಾ ಬಂದದ್ದು ನೀವು ಇಲ್ಲಿ ನೋಡಬಹುದು.
[http://www.smh.com.au/news/national/hes-ours-but-we-like-the-other-one/2007/08/12/1186857348363.html|Sydney Morning Herald ನಲ್ಲಿ]
[http://cosmos.bcst.yahoo.com/ver/237/popup/index.php?cl=3674886|ಸಂಜೆ ಟಿವಿ ಸುದ್ದಿಯಲ್ಲಿ]
Comments
ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ
In reply to ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ by ಶ್ಯಾಮ ಕಶ್ಯಪ
ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ
In reply to ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ by anivaasi
ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ
ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ
In reply to ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ by ಸಂಗನಗೌಡ
ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ
ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ
In reply to ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ by muralihr
ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ
In reply to ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ by anivaasi
ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ