ನನ್ನೆದೆಯ ಜಾತ್ರೆ

ನನ್ನೆದೆಯ ಜಾತ್ರೆ

ಊರು ಕೇರಿ ಬೀದಿಯೆಲ್ಲ ಸಿಂಗಾರ,

ಜಾತ್ರೆಯದೆ ಆಹಂಕಾರ

ಕಣಳತೆಗು ಹಸಿರು ತೋರಣ ಸಿಂಗಾರ

ಝಳ ಝಳ ರೇಶಿಮೆ ಲಂಗದ ಪುಟ್ಟ ಹುಡುಗಿಯರ ಝೇಂಕಾರ

ಬೀದಿಗೂ ಬಂದು ನಿಂತ ತುಪ್ಪದಡಿಗೆಯ ಘಮ ಘಮ

ಎಲ್ಲೆಲು ಝೇಂಕಾರ ಜಾತ್ರೆಯ ಆಹಂಕಾರ

ಮನೆಯೊಳಗೆ ಅವಳಿಲ್ಲ

ಏನು ಆ ಸಂಭ್ರಮ, ಜರತಾರಿ ಪಂಚೆ, ಜರತಾರಿ ಸೀರೆ,

ಊರಿಗೆ ನಾವೇ ಹೊಸ ದಂಪತಿಗಳು ನೋಡಿದ ಕಣೆಷ್ಟು,

ನುಡಿದ ಮಾತೆಷ್ಟು, ವರುಷ ತುಂಬಿದೆ,

ತೇರ ಬೀದಿಯಲ್ಲಿ ಮುಡಿದ ಮಲ್ಲಿಗೆಯ ಘಮವಿದೆ

ಎಲ್ಲೆಲು ಝೇಂಕಾರ ಜಾತ್ರೆಯ ಆಹಂಕಾರ

ಮನೆಯೊಳಗೆ ಅವಳಿಲ್ಲ

ತುಂಬಿತ್ತು ಮನೆ ಘಳ ಘಳ ಕಿಲ ಕಿಲ ನೆಂಟರು,

ಇಷ್ಟರು, ಸ್ನೇಹಿತರು, ಬಂದವರು, ಹೋದವರು,

ಉಳಿದವರು, ನಡೆದವರು,

ರಥ ಬೀದಿಯಲ್ಲಿ ನಮ್ಮದೇ ಝೇಂಕಾರ

ಹೀಗಿತ್ತು, ಹೀಗಿಲ್ಲ,

ವರುಷದಲ್ಲಿ ಯಾರಿಲ್ಲ ಯಾಕೆಂದರೆ ಮನೆಯೊಳಗೆ ಅವಳಿಲ್ಲ

ಎಲ್ಲೆಲ್ಲು ಝೇಂಕಾರ, ಜಾತ್ರೆಯ ಆಹಂಕಾರ,

ನನ್ನೆದೆಯ ಚೀತ್ಕಾರ.

Rating
No votes yet

Comments