ಹಬೆನಾರೊ
ಮೊನ್ನೆ ಮಧ್ಯಾಹ್ನ ಗೆಳೆಯ ಮತ್ತು ಸಹೋದ್ಯೋಗಿ ಬ್ರಜೇಂದ್ರನ ಮನೆಗೆ ಹೋದಾಗ ಅವನು :ನಿನಗೊಂದು ವಿಶೇಷ ಕೊಡುಗೆಯಿದೆ." ಎಂದ
"ಏನಪ್ಪಾ ಅದು" ಅಂದೆ.
"ನಿನಗಾಗಿ ಇಂಡಿಯಾ ಸ್ಟೋರ್ ನಿಂದ ತಂದಿರುವೆ. ತಿನ್ನಲು ತಾಕತ್ತಿದೆಯಾ" ಅಂದ.
"ಅದೇನೋ ನೋಡೇ ಬಿಡೋಣ ವೆಂದು ನೋಡಿದರೆ ಅದು ಹೀಗೆ ಕಾಣುತ್ತಿತ್ತು. ಅದರಿಂದ ಒಂದು ತುಂಡು ಕತ್ತರಿಸಿ "ತಿಂದು ನೋಡು" ಎಂದು ಕೊಟ್ಟ.
ಬಾಯಿಗಿಟ್ಟು ಅಗಿದೆ.
ಅಬ್ಬಬ್ಬಾ ಒಂಥರ ಸಪ್ಪಗೆ ಶುರುವಾದ ರುಚಿ, ನಂತರ ಒಗೊರೊಗರಾಗಿ, ಆಮೇಲೆ ಖಾರವಾಗಿ ಮೈಯೆಲ್ಲಾ ವ್ಯಾಪಿಸಿತು. ಉರಿಗೆ ಎರಡೂ ಕಣ್ಣುಗಳಲ್ಲಿ ಮಾತ್ರವೇ ಏನು ಸರ್ವಾಂಗಗಳಲ್ಲಿಯೂ ನೀರು ಸೋರಲಾರಂಭಿಸಿತು.
"ಏನೋ ಅದು" ಎಂದೆ ಕೋಪದಿಂದಲ್ಲದಿದ್ದರೂ ಕಾರದಿಂದ ಕೆಂಪಾದ ಕಣ್ಣುಗಳಿಂದ.
"ರೆಡ್ ಸವೀನಾ ಹಬೆನಾರೊ" ಎಂದ
ನಮ್ಮ ಗುಂಟೂರು ಮೆಣಸಿನಕಾಯಿಗಿಂತಲೂ ಮೂರು ಪಟ್ಟು ಖಾರದ ಈ ಮೆಣಸಿನಕಾಯಿ ಮೆಕ್ಸಿಕನ್ ಮೂಲದ್ದು. ಸ್ಕೊವಿಲ್ಲೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಈ ಮೆಣಸಿನಕಾಯಿಯ ಖಾರವನ್ನು ಐದು ಲಕ್ಷದ ಎಂಬತ್ತು ಸಾವಿರ ಊನಿಟ್ಟುಗಳೆಂದು ಗುರುತಿಸುತ್ತಾರೆ. ನಮ್ಮದೇ ಅಸ್ಸಾಮಿನ ನಾಗ ಝಲೋಕಿಯ ಮೆಣಸಿನಕಾಯಿಯ ಸ್ಕೊವಿಲ್ಲೆ ಅಂಕಗಳು ಹತ್ತು ಲಕ್ಷ.
ಆದರೂ ಅದನ್ನು ಬಿಡದೆ, ನನಗೆ ಮೆಣಸಿನಕಾಯಿ ತಿನ್ನಿಸಿದ ಪಾಪಕ್ಕೆ ಪರಿಹಾರವಾಗಿ, ಎರಡೇ ಎರಡು ಹಬೆನಾರೋ ಹಾಕಿಸಿ, ಆಲೂ-ಬೈಂಗನ್ ಪಲ್ಯ, ಜೊತೆಗೆ ಪರೋಟ ಮಾಡಿಸಿ, ಗಡದ್ದಾಗಿ ಉಂಡು ಚೆನ್ನಾಗಿ ನೀರು ಕುಡಿದು ಸುಧಾರಿಸಿಕೊಂಡೆ
Comments
ಉ: ಹಬೆನಾರೊ
In reply to ಉ: ಹಬೆನಾರೊ by gopinatha
ಉ: ಹಬೆನಾರೊ
ಉ: ಹಬೆನಾರೊ
In reply to ಉ: ಹಬೆನಾರೊ by ksraghavendranavada
ಉ: ಹಬೆನಾರೊ
In reply to ಉ: ಹಬೆನಾರೊ by modmani
ಉ: ಹಬೆನಾರೊ
In reply to ಉ: ಹಬೆನಾರೊ by komal kumar1231
ಉ: ಹಬೆನಾರೊ
In reply to ಉ: ಹಬೆನಾರೊ by modmani
ಉ:ಮೊದ್ಮಣಿಯವರೇ, ದೊಣ್ಣೆ ಮೆಣಸಿನಕಾಯಿಯ ಕಾಯಿರಸ ಮಾಡುವ ವಿಧಾನ
In reply to ಉ:ಮೊದ್ಮಣಿಯವರೇ, ದೊಣ್ಣೆ ಮೆಣಸಿನಕಾಯಿಯ ಕಾಯಿರಸ ಮಾಡುವ ವಿಧಾನ by ksraghavendranavada
ಉ:ಮೊದ್ಮಣಿಯವರೇ, ದೊಣ್ಣೆ ಮೆಣಸಿನಕಾಯಿಯ ಕಾಯಿರಸ ಮಾಡುವ ವಿಧಾನ
In reply to ಉ:ಮೊದ್ಮಣಿಯವರೇ, ದೊಣ್ಣೆ ಮೆಣಸಿನಕಾಯಿಯ ಕಾಯಿರಸ ಮಾಡುವ ವಿಧಾನ by modmani
ಉ:ಮೊದ್ಮಣಿಯವರೇ, ದೊಣ್ಣೆ ಮೆಣಸಿನಕಾಯಿಯ ಕಾಯಿರಸ ಮಾಡುವ ವಿಧಾನ
In reply to ಉ:ಮೊದ್ಮಣಿಯವರೇ, ದೊಣ್ಣೆ ಮೆಣಸಿನಕಾಯಿಯ ಕಾಯಿರಸ ಮಾಡುವ ವಿಧಾನ by ksraghavendranavada
ಉ:ಮೊದ್ಮಣಿಯವರೇ, ದೊಣ್ಣೆ ಮೆಣಸಿನಕಾಯಿಯ ಕಾಯಿರಸ ಮಾಡುವ ವಿಧಾನ
In reply to ಉ:ಮೊದ್ಮಣಿಯವರೇ, ದೊಣ್ಣೆ ಮೆಣಸಿನಕಾಯಿಯ ಕಾಯಿರಸ ಮಾಡುವ ವಿಧಾನ by manju787
ಉ:ಮೊದ್ಮಣಿಯವರೇ, ದೊಣ್ಣೆ ಮೆಣಸಿನಕಾಯಿಯ ಕಾಯಿರಸ ಮಾಡುವ ವಿಧಾನ
ಉ: ಹಬೆನಾರೊ
In reply to ಉ: ಹಬೆನಾರೊ by kavinagaraj
ಉ: ಹಬೆನಾರೊ
ಉ: ಹಬೆನಾರೊ
In reply to ಉ: ಹಬೆನಾರೊ by vishwaratha
ಉ: ಹಬೆನಾರೊ
ಉ: ಹಬೆನಾರೊ
In reply to ಉ: ಹಬೆನಾರೊ by ಗಣೇಶ
ಉ: ಹಬೆನಾರೊ