ಗೆಳತಿ ನಿನ್ನ ನೆನಪಲ್ಲಿ

ಗೆಳತಿ ನಿನ್ನ ನೆನಪಲ್ಲಿ

ಗೆಳತಿ ನಿನ್ನರಸಿ ದೂರದ ಊರಿಂದ ನಾ ಬಂದೆ

ನೀ ಎಲ್ಲಿಗೂ ಹೋಗುವುದಿಲ್ಲವೆಂದು

ನಾ ಹತ್ತಿರ ಬಂದಾಗ ದೂರ ಸರಿಯುವೆ

ನೀ ಬಹು ದೂರ ಹೋದೆ ಎಂದು ತಿಳಿದಾಗ

ಮನಸ್ಸು ಅಲ್ಲೋಲ ಕಲ್ಲೋಲವಾಯಿತೆಂದು

 

ಗೆಳತಿ ನಮ್ಮಿಬ್ಬರ ಸ್ನೇಹ ಜನ್ಮಾಂತರದ್ದು

ಅದು ಸುಳ್ಳು ಎಂದು ದೂರ ನೀ ಹೋದಾಗಲೇ ತಿಳಿದೆ

ಆದರೂ ಸನಿಹಕ್ಕೆ ಬರುವೆ ಎಂಬ ಆಶಯ

ಕಾಡುತ್ತಿದೆ ಎಂದೆಂದು

 

ಗೆಳತಿ ನಮ್ಮಿಬ್ಬರ ಬಾಲ್ಯ ಅಜರಾಮರ

ಅದರ ನೆನಪು ಕಾನನದ ಪಕ್ಷಿಯ ಚೀತ್ಕಾರವಿದ್ದಂತೆ

ನೀ ಅಗಲಿದ ನೆನಪು ಮರುಭೂಮಿಯಂತೆ

ಅದರಲ್ಲೂ ಕಾಣುವ ಮರೀಚಿಕೆಯಂತೆ

ನಿನ್ನನ್ನೂ ಎಂದಿಗೂ ಹುಡುಕುತ್ತಲೇ ಇರುವೆ.

ಇದು ಸತ್ಯ ಗೆಳತಿ, ಇದು ಸತ್ಯ.

 

Rating
No votes yet

Comments