ಗೆಳೆತನದ ಪ್ರೀತಿ ...

ಗೆಳೆತನದ ಪ್ರೀತಿ ...


ಹೊರಗಡೆ ತುಂತುರು  ಮಳೆಯ ಹನಿ
  ನನ್ನೆದೆಯಲ್ಲಿ ಬೆಳೆಯಿತು  ಸ್ನೇಹದ ಹನಿ
ಒಂದೊಂದು ಹನಿಯೂ ನನ್ನ ತಾಕಿ
ಅದರಿಂದ ಉದ್ಭವಿಸಿತು ಗೆಳೆತನದ ಪ್ರೀತಿ ...

    ಎಲ್ಲರಂತೆ ಕೈಕೈ ಹಿಡಿದು ನಡೆದಿಲ್ಲ
ಎಂದೂ ಮುನಿಸಿಕೊಂಡಿರಲಿಲ್ಲ
ಮನಸಿನ ಮೂಲೆಯಲೊಂದು  ಮನೆಯ ಮಾಡಿ
ನೆಟ್ಟಿದ್ದೆವಲ್ಲಿ  ನಾವು ಗೆಳೆತನದ ಪ್ರೀತಿ...



ಮುಚ್ಚಿದ್ದ ಬಾಗಿಲನ್ನು ತೆರೆದು
ಎಲ್ಲ ಹತಾಶೆಗಳನ್ನು ತೊರೆದು
ಮನಸ ಭಾವನೆಯಲ್ಲಿ ಬೆರೆತು
ಮೂಡಿತು ಈ ಗೆಳೆತನದ ಪ್ರೀತಿ............

 

 

ಶಾಶ್ವತವಾಗಿರಲಿ ಎಂದೂ ನಮ್ಮ ಪ್ರೀತಿ
ಸದಾ ಹೆಚ್ಚುತಿರಲಿ  ಈ ನಮ್ಮ ರೀತಿ
ಎಂದೂ ಮರೆಯದಿರು ನೀ ನಮ್ಮ ಪ್ರೀತಿ
ಯಾರಿಂದಲೂ ಬಿಡಿಸಲಾಗದು ಈ ಗೆಳೆತೆನದ ಪ್ರೀತಿ.......

Rating
Average: 3.3 (3 votes)

Comments