ನೀನಿಲ್ಲದೆ....

ನೀನಿಲ್ಲದೆ....

ನಿನ್ನ ಬದುಕಿನಲ್ಲಿ ಈಗ ನನಗಿಲ್ಲ ಜಾಗ
ಆದರೆ ಗೆಳತಿ ನಿನಗಾಗಿ ನಾ ಕಟ್ಟಿಕೊಟ್ಟ
ನೆನಪುಗಳ ಮರೆಯಲು ನಿನ್ನಿಂದ ಸಾಧ್ಯವೇ
ನನ್ನಿಂದ ಸಾಧ್ಯವೇ

ಮತ್ತೆ ಅವೇ ಕನಸುಗಳು ಮೊಳೆಯಲಾರವು ನಿಜ
ಆದರೆ ಕಂಡ ಕನಸುಗಳನು ಮರೆಯಲು ಸಾಧ್ಯವೇ

ನನ್ನೊಳಗೆ ನಿನ್ನ ಅವಶೇಷಗಳ ನಾಶಕ್ಕೆ
ನಾನಾದರೂ ಯಾಕಾಗಿ ಯತ್ನಿಸಬೇಕು
ನೀನು ಎಂದಿಗೂ ಬರಲಾರೆ ಎಂದು ಅರಿವಾದಾಗ
ಅವೂ ನನ್ನ ಮಧುರ ನೆನಪಿನಲ್ಲಿ ಒಂದಾಗಲಾರವೇ

ಪ್ರೀತಿಯಲ್ಲಿ ಸೋತೆನೆಂದು ನಾ ಏಕೆ ಹೇಳಬೇಕು
ಇದ್ದಷ್ಟು ಕ್ಷಣಗಳು ನಿನ್ನ ಪರಿಪೂರ್ಣನಾಗಿ ಪ್ರೀತಿಸಿರುವಾಗ...

 

[ವಸಂತರ 'ನಿನ್ನ ನೆನಪಲ್ಲಾದರೂ ನಾ ಪೂರ್ಣವಾಗಿ ಸಾಯುತ್ತೇನೆ..!' ಓದಿದಾಗ ಮನದಲ್ಲಿ ಮೂಡಿದ ಸಾಲುಗಳು ]

Rating
No votes yet

Comments