ಹೆಸರಿಡದ ಪದ್ಯ

ಹೆಸರಿಡದ ಪದ್ಯ

ಬೇರೆಯವರ ಎದೆಯ ಒಲೆಯಲ್ಲಿ


ತಮ್ಮ ಬೇಳೆ ಬೇಯಿಸಿಕೊಳ್ಳುವ


ತವಕ ಜನರಿಗೆ….


ಹೆಬ್ಬಾವಿನುಬ್ಬಸಕೆ ಹಸಿವು


ಒಂದೇ ಕಾರಣವಾಗಿರಲಿಕ್ಕಿಲ್ಲ


ಬಿದಿರ ತಡಿಕೆಯ ಹಿಂದಿನ


ಕಣ್ಣು ಅವಳದೇ ಆಗಿರಬೇಕ(ಕಿ)ಲ್ಲ!


ಜಾರಿಬಿದ್ದ ಕಲ್ಲನು


ಎದೆಯಲ್ಲಿ ಪೂಜಿಸುತ್ತಿರುವೆ ನಾನು


ಧೂಪ, ದೀಪಾರತಿ ಕಣ್ಣುತೆರೆಸಿದ್ದಕ್ಕೆ


ಹೊಸ ದಿಗಂತದೆಡೆಗೆ ದಿಕ್ಸೂಚಿಯಾಗಿದ್ದಕ್ಕೆ


ಹೃದಯದಗ್ನಿಗೆ, ಯಜ್ಞಕ್ಕೆ


ಇವರ ಹೊಟ್ಟೆಕಿಚ್ಚಿನ ತಣ್ಣೀರು …


ಬತ್ತಲಾರದ ಗಂಗೆಗೆ ಉಸಿರುಕಟ್ಟುವ


ಕೊರಳಿನುಬ್ಬಸ – ನನಗೆ ?


ಹರಿಯುವ ಪಾತ್ರದುದ್ದಕ್ಕೂ ಆಣೆಕಟ್ಟು !


ಜನರೆಸೆದ ಕೊಳಕು- ಕೊಚ್ಚೆ


ಯಾರಿಂದ ಹಾಕಿಸಿಕೊಳ್ಳಲಿ ನನ್ನತನದ ಹಚ್ಚೆ?

Rating
No votes yet

Comments