ಯಾತ್ರೆ
ಬದುಕು ಜಟಕಾ ಬಂಡಿ ಇರಬಹುದು
ಆದರೆ ಕಾಲ ಲಗಾಮಿಲ್ಲದ ಕುದುರೆ
ಕಬ್ಬಿನ ಜಲ್ಲೆಯ ಮೇಲೆ ಮಲಗಿದರೂ
ಎದೆಯೊಳಗಿನ ಕಹಿ ಕರಗೀತೆ ?
ಪಲ್ಲಕ್ಕಿ ಹೊತ್ತ ನಂತರವೂ
ಬೆವರು ಹರಿಯುವ ಝರಿ
ಆಯಾಸಕ್ಕೆ ಸಂದ ಉಡುಗೊರೆ !
ನಡೆಯುವಾಗ ನೀನೆ ಎಡವಬಹುದು
ಬೇರೆಯವರು ಕಾಲೆಳೆಯಬಹುದು
ಬಿದ್ದುಕೊಂಡ ದಾರಿಗೆ ಬಾಯಿಲ್ಲ ತಿಳಿ.
ಮರೆಯಲ್ಲೆಲ್ಲೋ ಸಾವು
ಹೆದರಿ ಕಚ್ಚುವ ಹಾವು.
ಸತ್ತ ತಾಯಿಯ ಮೊಲೆ ಹೀರುತ್ತಿರುವ
ಹಸಿದ ಕೂಸು ಹುಚ್ಚುಖೋಡಿ !
ಆದರೆ ಬದುಕು ಪೇರಿಸಿಟ್ಟ ಗೋರಿಗಳ ಮೇಲಿಂದ
ಶುಭ ಕೋರಿ ನಗುತ್ತವೆ ಹೂಗಳು
ಯಾತ್ರೆ ಹೊರಟವನ ನೋಡಿ..
(ಈ ಕವಿತೆಯನ್ನು ನಾನು ಮೊದಲ ಬಾರಿ ಮನೆ ಬಿಟ್ಟು ಧಾರವಾಡಕ್ಕೆ ಹೋಗುವಾಗ ರಚಿಸಿದ್ದು ೨೦೦೨ ರಲ್ಲಿ )
Rating
Comments
ಉ: ಯಾತ್ರೆ
ಉ: ಯಾತ್ರೆ
In reply to ಉ: ಯಾತ್ರೆ by manju787
ಉ: ಯಾತ್ರೆ
ಉ: ಯಾತ್ರೆ
ಉ: ಯಾತ್ರೆ
ಉ: ಯಾತ್ರೆ