ಕನ್ನಡಿ ಮತ್ತು. . .
ಬಂಡೆಗಲ್ಲುಗಳ ನಡುವೆ
ಹೃದಯ ಕನ್ನಡಿಯ ಇಟ್ಟಿರುವೆ ನಾನು
ಬದುಕು ದುಸ್ತರವಾದುದೆಂದು
ತಿಳಿಯದೆ ಹೋಯಿತೇ ನಿನಗಿಂದು?
ಬಿಂಬಗಳು ನಮ್ಮಿಬ್ಬರವು ಮೂಡಿದಾಗ
ಕಾಮನಬಿಲ್ಲು ನಾಚಿತ್ತಲ್ಲ ಗೆಳತಿ
ನಮ್ನಮ್ಮ ಎದೆಯ ಒಲೆಗಳನು ಹೊತ್ತಿಸೇ
ಇಡುವುದು ಕಷ್ಟವೆಂದು ನಿನಗನಿಸದೆ ಈಗ?
ಬಂಡೆಗಲ್ಲುಗಳು ಗಹಗಹಿಸಿ ನಗುತ್ತಿವೆ
ನೋಡು ಒಡೆದ ಕನ್ನಡಿಯಲಿ ಈಗ
ನಾನೂ ಇಲ್ಲ – ನೀನೂ ಇಲ್ಲ
ಸೆಲೆಬತ್ತಿಹೋದ ನದಿ ಪಾತ್ರದಲ್ಲೂ
ಪ್ರೀತಿ ನದಿಯ ಕುರುಹು ಕಾಣದಲ್ಲ!
ಬಂಡೆಗಳು ಹಾಗೇ ಬಿದ್ದಿವೆ ನಿರ್ಲಿಪ್ತವಾಗಿ
ಮಳೆ ಬಂದರೂ ಒರತೆ ಹರಿಯಲೊಲ್ಲದು
ಒಡೆದ ಕನ್ನಡಿಯಲಿ ಕಾಣುತಿರುವುದೀಗ
ನಮ್ಮಿಬ್ಬರ ಅಹಮ್ಮಿನ ಕೋಡು…
Rating
Comments
ಉ: ಕನ್ನಡಿ ಮತ್ತು. . .
ಉ: ಕನ್ನಡಿ ಮತ್ತು. . .
In reply to ಉ: ಕನ್ನಡಿ ಮತ್ತು. . . by ಭಾಗ್ವತ
ಉ: ಕನ್ನಡಿ ಮತ್ತು. . .
ಉ: ಕನ್ನಡಿ ಮತ್ತು. . .
ಉ: ಕನ್ನಡಿ ಮತ್ತು. . .