ನಗುವಿನಲ್ಲಿ ಬಗೆ

ನಗುವಿನಲ್ಲಿ ಬಗೆ

ಕೆಲವರು ನಕ್ಕರೆ

ಪಕ್ಕದಲ್ಲಿ ಭೂ ಕಂಪನವಾದಂತೆ

ಮತ್ತಿರರು ನಕ್ಕರೆ

ದೇಹದಲ್ಲಿನ ಯಾವುದೋ ಊನತೆ ತೋರಿಸುವಂತೆ                                         

ಮತ್ತೆ ಕೆಲವರು ನಗುವುದೇ ತಿಳಿಯುವುದಿಲ್ಲ

ಸೌಂಡ್ ಇಲ್ಲದೆ ಬಾಂಬ್ ಸಿಡಿದಂತೆ                                          

 

ಅನ್ಯರನ್ನು ಅಣಕವಾಡಿ ನಗುವುದು

ದೇಹದ ನ್ಯೂನ್ಯತೆ ನೋಡಿ ನಗುವುದು

ನಕ್ಕರೆ ಕಣ್ಣಲ್ಲಿ ನೀರು

ಬಾಯಲ್ಲಿ ಜೊಲ್ಲು

ಪಕ್ಕದಲ್ಲಿದ್ದವರಿಗೆ ಒದೆ:

 

ಎದೆಯಲ್ಲಿನ ಕಫ ಕರಗಿದಂತೆ                          

ನಗುವಾಗ ತಲೆಯಾಡಿಸುವುದು

ಹಿಂದೆ ಹೋಗುವುದು

ಮುಂದೆ ಬಗ್ಗಿ ನಗುವುದು

ಮೇಲೆ, ಕೆಳಗೆ ನೋಡಿ ನಗುವುದು.

 

ಅಪಹಾಸ್ಯ,ತಿಳಿ ಹಾಸ್ಯ

ನಗುವಿನ ಬಗೆ

ಸಣ್ಣ ಹಾಸ್ಯಕ್ಕೆ ಹಾ,ಹಾ,ಹಾ,ಹಾ

ಭಾರಿ ಹಾಸ್ಯಕ್ಕೆ ಹಿ,ಹಿ,ಹಿ

ಹಲ್ಲಿಲ್ಲದವರು ಫೆ>>>>>

ದಮ್ಮಿದ್ದವರು ಗುಕ್,ಗುಕ್, ಆ....ಥೂ

ಇದೇ ನಗುನಾ

 

ಹುಸಿ ನಗು, ಮುಸಿ ನಗು.

ನಗೆಗಳಲ್ಲಿ ಅನೇಕ ಪ್ರಕಾರ

ನಗೆಗೆ ಇತಿ ಮಿತಿ ಇದೆಯಾ?

ಇಂತಹ ಕಡೆ ಇಂತಹುದೇ ರೀತಿಯಲ್ಲಿ ನಗಬೇಕು

ಸರ್ಕಾರ ಆಜ್ಞೆ ಹೊರಡಿಸಿದ್ದರೆ

ಸಾಕಷ್ಟು ಹಣ ಸಂದಾಯವಾಗುತ್ತಿತ್ತೆನೋ!

ಅಬ್ಬಾ ನಕ್ಕೂ ನಕ್ಕೂ ಸಾಕಾಯಿತು!

 

ಚಿತ್ರಕೃಪೆ - ಅಂತರ್ಜಾಲದಿಂದ

 

Rating
No votes yet

Comments