ಮತ್ತದೇ ಮೌನ
ಆಚೆ ದಡದಿ ನೀ ಕುಳಿತಿರಲು
ನನ್ನ ಭಾವಗಳೆಲ್ಲಾ ನದಿಯಲ್ಲಿ ಕರಗಿ
ಅಲೆಗಳಾಗಿ ನಿನ್ನ ಕಾಲ್ಬೆರಳ ಸೋಕಿರಲು
ಮತ್ತದೇ ಮೌನ, ಮತ್ತದೇ ಮೌನ
ಅಂದೇಕೋ ಬರೀ ಮೌನ
ನೆನಪುಗಳ ಮೀರಿದ
ಖಾಲಿ ಖಾಲಿ ಕನಸುಗಳದೇ
ಸಾರಿ ಸಾರಿ ಮತ್ತವುಗಳದೇ ಬರೀ ಮೌನ
ಆ ಚೆಲುವ ಕಂಗಳದೇ
ಇಂಪಿನ ಮಾತುಗಳದೇ
ಒಲವಿನ ಸುಳಿವಿನದೇ
ಬಾರಿ ಬಾರಿ ಮತ್ತವುಗಳದೇ ಬರೀ ಮೌನ
ಕನಸುಗಳ ಕಾವಲಿರಿಸಿ
ನೆನಪುಗಳ ಕಾಲುವೆಯಲ್ಲಿ
ಹರಿದಿದೆ ಪ್ರೀತಿ ಪ್ರೇಮ
ಸಾಲು ಸಾಲು ಮತ್ತದೇ ಮೌನ
Rating
Comments
ಉ: ಮತ್ತದೆ ಮೌನ
In reply to ಉ: ಮತ್ತದೆ ಮೌನ by asuhegde
ಉ: ಮತ್ತದೆ ಮೌನ
In reply to ಉ: ಮತ್ತದೆ ಮೌನ by prasannas
ಉ: ಮತ್ತದೇ ಮೌನ
In reply to ಉ: ಮತ್ತದೇ ಮೌನ by asuhegde
ಉ: ಮತ್ತದೇ ಮೌನ
In reply to ಉ: ಮತ್ತದೇ ಮೌನ by prasannas
ಉ: ಮತ್ತದೇ ಮೌನ
ಉ: ಮತ್ತದೇ ಮೌನ