ಜಾಹಿರಾತು ಇದ್ರೇನೆ ಒಳ್ಳೇದು!

ಜಾಹಿರಾತು ಇದ್ರೇನೆ ಒಳ್ಳೇದು!

ಅನ್ಯ ದೇಶಗಳಲ್ಲಿ ಕ್ರಿಕೆಟ್ ಪ್ರಸಾರವಾಗುವಾಗ ಜಾಹಿರಾತು ಕಡಿಮೆ ಎಂಬ ವಿಷಯ ಅದೆಷ್ಟೋ ಸಾರಿ ಕೇಳಿಬರುತ್ತಿರುತ್ತದೆ. ಅದಕ್ಕೆ ಹೋಲಿಸಿ ನೋಡಿದರೆ ಪ್ರತಿ ಓವರಿನ ಮಧ್ಯೆ ಜಾಹಿರಾತು ತೋರಿಸುವುದು ಹುಚ್ಚುತನವೆನಿಸಿಬಿಡಬಹುದು.

ಆದರೆ ಜಾಹಿರಾತು ಒಂದು ರೀತಿ ನಮಗೆಲ್ಲ ಒಳ್ಳೇದೇ ಆಗಿರಬಾರದೇಕೆ? ಹೀಗೆ ಲೆಕ್ಕ ಹಾಕೋಣ: ಟಿವಿಯನ್ನ ನಿರಂತರ ನೋಡೋದರಿಂದ ಕಣ್ಣಿಗೆ ಒತ್ತಡ ಹೇರಿದಂತಾಗುತ್ತದೆ (strain ಆದಂತಾಗುತ್ತದೆ) ತಾನೆ? ಅದೇ ನೋಡುತ್ತಿರುವ ಕಾರ್ಯಕ್ರಮದ ನಡುವೆ ವಿರಾಮಗಳು ಇದ್ದರೆ? ಕೈಯಲ್ಲಿ ರಿಮೋಟ್ ಹಿಡಿದು ಆಗಾಗ ಮ್ಯೂಟ್ ಬಟನ್ ಪ್ರೆಸ್ ಮಾಡುತ್ತಲೇ ಇರುತ್ತೇವೆ (ಅದೊಂದು ಒಳ್ಳೆಯ ವ್ಯಾಯಾಮ ಬೇರೆ). ಕೆಲವು ಕ್ಷಣಗಳ ಕಾಲ ಕಣ್ಣು, ಮನಸ್ಸು ಎರಡನ್ನೂ ಟಿ ವಿಯಿಂದ ದೂರ ಎಳೆದೊಯ್ದರೆ ಸ್ಟ್ರೇಯ್ನ್ ಕೂಡ ಕಡಿಮೆಯಾಗಿ ಕ್ರಿಕೆಟ್ ಹುಚ್ಚಿನಿಂದ ತಪ್ಪಿಸಿಕೊಂಡು ಟಿ ವಿ ಯನ್ನು ಆರಿಸಿ ಹೊರಡುವ ಅವಕಾಶವೂ ಲಭಿಸಬಹುದು!

ಇವತ್ತು ಭಾರತ ಆಡುತ್ತಿರುವ ಕಳಪೆ ಆಟವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಟಿವಿ ಆರಿಸಲು ಸಹಾಯ ಮಾಡುವ "ಈ 'ಜಾಹಿರಾತಿನ ಪ್ರಭಾವ' ಒಳ್ಳೆಯದೇ!

Rating
No votes yet

Comments