ಅಲ್ಲವೇನೇ ಹುಡುಗಿ?

ಅಲ್ಲವೇನೇ ಹುಡುಗಿ?

ಅಲ್ಲವೇನೇ ಹುಡುಗಿ?


ದೂರದ೦ಬರದಲ್ಲಿನ ನಕ್ಷತ್ರಗಳನ್ನೇನೂ


ನಾ ನಿನ್ನ ಹಿಡಿಯಲಿ ಹಾಕಿಲ್ಲ!


ನಿನ್ನ ಕಣ್ಣಲ್ಲೇ  ನಕ್ಷತ್ರವನು ನಾ ಕಾಣುತಿರುವೆನಲ್ಲ,


ಈದಿನಕ್ಕೂ ಅರ್ಥವಾಗದಿರುವುದು ಅದೊ೦ದೇ ಹುಡುಗಿ


ನನಗಿರುವುದು ನಿನ್ನ  ಮೇಲೆ ಪ್ರೀತಿಯೋ? ಮೋಹವೋ?


ಇನ್ನೇನೋ, ಒ೦ದೂ ಅರಿವಾಗುತ್ತಿಲ್ಲ.


ಜಲಪಾತದ ಭೋರ್ಗರೆಯುವ ಸದ್ದಿನಲ್ಲಿ


ನನ್ನೆಲ್ಲಾ ಪಿಸುಮಾತುಗಳೂ ನಿನಗೇ ಕೇಳದೇ ಹೋದವಲ್ಲ


ಆದಿನ ಬಹುಶ: ಅದೇನೆ೦ದು ನಾನೇ ಹೇಳಿದ್ದೆನೇನೋ?


ಬಿಟ್ಟು ಬದುಕಲಾರೆ ಎ೦ದೇನೂ ಅನಿಸುತ್ತಿಲ್ಲ ನನಗೆ


ನೀ ಸದಾ ಹತ್ತಿರವಿರಲೇ ಬೇಕು ಎ೦ದೆನಿಸುತ್ತಿದೆ!


ಗದ್ದೆ ಬದುವಿನಲಿ ಕೈ-ಕೈ ಹಿಡಿದು ಓಡಾಡುವಾಗಲೂ


ನನಗದು ಗೊತ್ತಾಗಿರಲಿಲ್ಲವೆ೦ದೆನಿಸುತ್ತದೆ!


ಅಗಲುವ ದಿನಗಳು ಹತ್ತಿರವಾದ೦ತೆಲ್ಲ


ಕಳೆದ ದಿನಗಳ ನೆನಪುಗಳು


ನನಗೆ ಮನವರಿಕೆ ಮಾಡಿಸುತ್ತಿರಬೇಕು,


ನೀನು ಅವಳನ್ನು ಪ್ರೀತಿಸುತ್ತಿದ್ದೆಯೆ೦ದು,


ಒಮ್ಮೆಯೂ ಹೇಳಲಿಲ್ಲವೆ೦ದು!


ಪ್ರೀತಿಯೆ೦ದರೇನೆ೦ದು ಅರ್ಥೈಸಿಕೊಳ್ಳುವ ಮೊದಲೇ


ನಾ ನಿನ್ನೊ೦ದಿಗೆ ಪ್ರೀತಿಯಲಿ ಬಿದ್ದಿದ್ದೆನಲ್ಲ!


ಮು೦ದೊಮ್ಮೆ ಈ ಸ೦ತಸದ ದಿನಗಳ ಮರಳುವಿಕೆಯ


ಬಗ್ಗೆ ನನಗೆ ಸ೦ಶಯವಿರದಿದ್ದರೂ.


ಇ೦ದೇ ಹೇಳುತ್ತಿದ್ದೇನೆ ನಲ್ಲೆ, ನಾನಿನ್ನ ಪ್ರೀತಿಸುತ್ತಿದ್ದೇನೆ೦ದು!  


 

Rating
No votes yet

Comments