ಮದುವೆ

ಮದುವೆ

ಮದುವೆಯ ವಯಸು

ಹೆಣ್ಣಿಗಾಗಿ ಎಲ್ಲಡೆ ಶೋಧನೆ

ಜಾತಕ ಸರಿಯಿದ್ದರೆ, ಗೋತ್ರ ಹೊಂದುವುದಿಲ್ಲ

ಬೇಡ ಎನಗೆ ಮದುವೆ

ಬ್ರಹ್ಮಚಾರಿಯಾಗಿಯೇ ಇರುವೆ

 

ಪೆದ್ದ, ವಯಸ್ಸಾದ ಮೇಲೆ

ಹೆಣ್ಣೊಂದು ಬೇಕು ಆಸರೆಗೆ

ದೇಹಕ್ಕೆ ಕೊಳ್ಳಿ ಇಡಲು ಮಗ ಬೇಕು

ಅಮ್ಮನ ಹಿತ ನುಡಿ

 

ಅಂತೂ ಸಿಕ್ಕಿದಳು ಒಬ್ಬಳು ಮಡದಿ

ಹೊಸತರಲ್ಲಿ ಮನೆ, ಬಟ್ಟೆಯಲ್ಲಾ ಶುದ್ದಿ

ಕೂತಲ್ಲೇ ಕಾಫಿ, ಇನ್ನಿಲ್ಲದ ಗೌರವ

ಮಗುವಾದ ನಂತರ

"ರೀ" ಹೋಗಿ "ಲೇ "ಬಂತು

ಮನೆ, ಬಟ್ಟೆ ನನ್ನ ಸುಪರ್ದಿಗೆ

ಕೇಳಿದರೆ ಕಾಫಿ ಇರಲಿ ನೀರೂ ಇಲ್ಲ.

ಕಾಲಿಗೆ ಏನು ರೋಗ ಮಡದಿಯ ನಲ್ಮೆಯ ಪ್ರೀತಿಯ ನುಡಿ.

 

ಸಂಸಾರಿಯಾಗಿರುವ ನಾನು

ಬ್ರಹ್ಮಚಾರಿಯಾಗಿಯೇ ಇದ್ದೇನೆ

ಅಮ್ಮನ ಹಿಂದಿನ ನುಡಿಗಳು ಕೋಪ ತರುಸುತ್ತಿದೆ

ನನ್ನ ಹೆಣಕ್ಕೆ ಕೊಳ್ಳಿ ಇಡಿಸಿಕೊಳ್ಳುವ ಸಲುವಾಗಿ

ಬದುಕಿದ್ದಾಗಲೇ ಸತ್ತಂತೆ ಬಾಳಬೇಕಲ್ಲಾ ಎಂದು.

 

ಹಿರಿಯರ ಮದುವೆಯಾಗಬೇಡ ಎಂಬ ಹಿತನುಡಿ

ಸತ್ಯ ಎಂದು ಅರಿವಾಗುತ್ತಿದೆ.

 

ಬ್ರಹ್ಮಚಾರಿಗಳೆ ಮದುವೆಯಾಗಬೇಡಿ

ಮದುವೆಯಾದಗಲೇ ಮದುವೆಯ ಅನುಭವವಾಗುವುದಲ್ಲವೆ.

 

 

 

 

Rating
No votes yet

Comments