ಮನುಜ

ಮನುಜ

ಸುತ್ತ ಜೇಡರ ಬಲೆ
ಸಿಕ್ಕಿಹಾಕಿಕೊಂಡೇನೆಂಬ ಭಯ
ಈಗಾಗಲೇ ಬಲೆಯಲ್ಲಿ ಬಿದ್ದಾಗಿದೆ ಎಂಬ ಭ್ರಮೆ
ಹೊರ ಬರುವುದು ಹೇಗೆ
ತಿಳಿದವರು ಹೇಳುತ್ತಾರಾ?
ಗೊತ್ತಿಲ್ಲ.
ಮತ್ತೆ ಬದುಕಿ ಬಿಡುತ್ತಾನೆಂಬ ಕಿಚ್ಚು
ನನ್ನವರು ಯಾರು ಇಲ್ಲವೇ?

ಪ್ರಪಂಚದಲ್ಲಿ ಇರುವವರಲ್ಲಿ
ಸ್ವಾರ್ಥಕ್ಕಾಗಿ ಬದುಕುವರು ಹಲವರು
ಅನ್ಯರಿಗಾಗಿ ಬದುಕುವರು ಕೆಲವರು
ಕಷ್ಟದಲ್ಲಿದ್ದಾಗ ಬರುವರು ಕೆಲವರು ಮಾತ್ರ
ಕುಹಕವನ್ನಾಡುವರು ಹಲವರು
ಹಾಗಾದರೆ ಪ್ರಪಂಚ ಜೇಡರ ಬಲೆಯೇ?
ಗೊತ್ತಿಲ್ಲ.

ಇದ್ದಾಗ ಅನ್ಯರಿಗಾಗಿ ಬದುಕು ಎಂದವಳು ಅಮ್ಮ
ನಡೆಯುತ್ತಿರುವುದು ಹಾಗೆಯೇ
ಸಹಾಯವನ್ನು ದುರ್ಬಳಕೆ ಮಾಡಿಕೊಂಡು
ನನ್ನನ್ನೇ ಬಲೆಯಲ್ಲಿ ಸಿಕ್ಕಿಸಿದಂಥವರು ಹಲವರು
ನನ್ನವರೇ ಪರರೇ?
ಅದೂ ಗೊತ್ತಿಲ್ಲ.

ಮನುಜ ಜನ್ಮ ಅಪರೂಪವಂತೆ
ಹಾಗಂದದ್ದು ಪೂರ್ವಜರು
ಮನುಜನಾದ ಮೇಲೆ ಅವನ ಕರ್ತವ್ಯವಾದರೂ ಏನು?
ಅನ್ಯರಿಗೆ ತೊಂದರೆ ಕೊಟ್ಟು
ಸಂತಸ ಪಡುವುದೇ?

ಇಂತಹ ಮನುಜ ಜನ್ಮ ಎನಗಂತೂ ಬೇಡವೇ ಬೇಡ,
ಇದು ನನ್ನ ಅಸಹಾಯಕತೆಯಲ್ಲ,
ಬದಲಾಗಿ ನನ್ನ ಪ್ರಾರ್ಥನೆ.

Rating
No votes yet

Comments