ನಿರ್ಜೀವ ದೇವರು ..!?ರಾಮ,ರಾಮಾ...

ನಿರ್ಜೀವ ದೇವರು ..!?ರಾಮ,ರಾಮಾ...

ಮಗು ಕಾಣಲಿಲ್ಲ ಎಂದರೆ ಮೊದಲು ಮನೆಯಲ್ಲಿ ಹುಡುಕಿ, ಬೀದಿಯಲ್ಲಿ ಹುಡುಕಿ,ನಂತರ ಪೋಲೀಸ್/ಪೇಪರ್/ಟಿ.ವಿ.ಗೆ ಕಳೆದು ಹೋದ ಬಗ್ಗೆ ದೂರು/ವರದಿ ಕೊಡುವರು. ಅದೇ ತರಹ ದೇವರಿಲ್ಲ ಎನ್ನುವ ಮೊದಲು ದೇವರನ್ನು ಹುಡುಕುವ ಪ್ರಯತ್ನ ಮಾಡಿರಬೇಕು.
ಈ ದಿನ ಹುಲಿಕಲ್ ನಟರಾಜು ಎಂಬವರು “ನಿರ್ಜೀವ ದೇವರು ಮನುಷ್ಯನ ಸಾಮರ್ಥ್ಯಕ್ಕೆ ಸಾಟಿಯೇ”ಎಂದು “ವಿಜಯಕರ್ನಾಟಕ”ಪತ್ರಿಕೆಯಲ್ಲಿ ದೇವರಿಗೇ ಸವಾಲು ಹಾಕಿ ಲೇಖನ ಬರೆದಿದ್ದಾರೆ.
ದೇವರನ್ನು ಕಲ್ಲು,ವಿಗ್ರಹ ಎಂದು ಬರೆಯುತ್ತಾ, -“..ಆದರೆ ಅಗೋಚರ ಶಕ್ತಿಯ ಮೂರ್ತಿ ಮಾನವ ನಿರ್ಮಿತ ಎನ್ನುವುದನ್ನು ಮರೆಯುವಂತಿಲ್ಲ.ಮಾನವ ನಿರ್ಮಿತ ಮೂರ್ತಿಗೆ ಮಾನವನಿಗಿಂತಲೂ ಅಪರೂಪದ ಶಕ್ತಿ ಬರುವುದಾದರೂ ಹೇಗೆ?” ಎಂದು ಒಂದು ಕಡೆ ಬರೆದು,ಇನ್ನೊಂದು ಕಡೆ-“ಮಾನವ ನಿರ್ಮಿತ ಬಾಂಬ್ ಹಿರೋಷಿಮಾದ ಲಕ್ಷಾಂತರ ಜನರನ್ನು ಧ್ವಂಸಗೊಳಿಸಿದಾಗ,..”ಎಂದಿದ್ದಾರೆ.
ತಮಾಷೆಯೆಂದರೆ -ದೇವರು, ಅಮೆರಿಕಾದವರು ಹಿರೋಷಿಮಾದ ಮೇಲೆ ಬಾಂಬು ಎಸೆದಾಗ,ಅಮೆರಿಕಾದ ಮೇಲೆಭಯೋತ್ಪಾದಕ ದಾಳಿ ನಡೆದಾಗ ಯಾವ ನೆರವನ್ನೂ ನೀಡಲಿಲ್ಲ ಎಂದು ದೂರಿದ್ದಾರೆ.ದೇವರು ಜೇಮ್ಸ್ ಬಾಂಡ್ ತರಹ ಅಡ್ಡ ಬಂದು ತಡೆಯಬೇಕಿತ್ತು ಕಾಣುತ್ತದೆ.
ದೇವರನ್ನು ನಮ್ಮ ಮಟ್ಟಕ್ಕೆ ಇಳಿಸಬಾರದು. ಅವರ ನ್ಯಾಯ ತೀರ್ಮಾನದ ರೀತಿಯೇ ಬೇರೆ ಇರಬಹುದು.
ಹೌದು.ಕೆಲ ಮಂದಿ ಪವಾಡಪುರುಷರು ,ಸ್ವಾಮಿಗಳು ದೇವರ ಹೆಸರಲ್ಲಿಮೋಸ ಮಾಡುತ್ತಿರಬಹುದು. ಅವರ ಢೋಂಗಿತನವನ್ನು,ಜನರ ಮೂಢನಂಬಿಕೆಯನ್ನು ತಿದ್ದಲು ಪ್ರಯತ್ನಿಸಬೇಕು.
ಗಾಂಧೀಜಿ,ಅಂಬೇಡ್ಕರ್,ಶಿವಾಜಿ ಮುಂತಾದವರನ್ನು ನಾನು ನೋಡಿಲ್ಲ,ಹುಲಿಕಲ್ ನಟರಾಜು ರವರೂ ನೋಡಿರಲಿಕ್ಕಿಲ್ಲ. ಗಾಂಧೀಜಿ…ಬಗ್ಗೆ ಓದಿದ್ದೇವಲ್ಲ. ಬೀದಿ ಬೀದಿಯಲ್ಲಿರುವ ಅವರ ಪ್ರತಿಮೆಗಳನ್ನು ಗೌರವದಿಂದ ಕಾಣುವೆವು.ಹಾಗೆ ದೇವರನ್ನುನಾನೂ ನೋಡಿಲ್ಲ,ಹುಲಿಕಲ್ ನಟರಾಜು ರವರೂ ನೋಡಿಲ್ಲ.ವಾಲ್ಮೀಕಿ,ತುಳಸೀದಾಸ್,ವಿವೇಕಾನಂದ…ರ ಪುಸ್ತಕಗಳನ್ನು ಓದಿದ್ದೇವಲ್ಲ.ಬೀದಿ ಬೀದಿಯಲ್ಲಿರುವ ದೇವರ ಮೂರ್ತಿಗಳನ್ನೂ ಗೌರವದಿಂದ ಕಾಣಲಿಕ್ಕೇನು ಕಷ್ಟ?

Rating
No votes yet

Comments