ಕನ್ನಡ ಸಾಹಿತ್ಯ ಡಾಟ್ ಕಾಂ ಎಂಬ ವೆಬ್ ತಾಣವೂ......

ಕನ್ನಡ ಸಾಹಿತ್ಯ ಡಾಟ್ ಕಾಂ ಎಂಬ ವೆಬ್ ತಾಣವೂ......

Comments

ಬರಹ

ಈಗ್ಗೆ 5 ವರ್ಷಗಳಿಂದ ನಾನು ಗಮನಿಸುತ್ತಾ ಬಂದಿರುವ ಕನ್ನಡ ತಾಣಗಳಲ್ಲಿ ಈ ಮೇಲಿನ ತಾಣವೂ ಒಂದು. ಆಗಾಗ ಕುಂಟುತ್ತ ದೇಕುತ್ತಾ ಬರುತ್ತಿರುವ ಈ ವೆಬ್ ತಾಣದ ಕಥೆ ಅದರ ಸಂಪಾದಕರು, ಬೆಂಬಲಿಗರ ಬಳಗದ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದಾಗ ತಿಳಿಯಲು ಸಾಧ್ಯವಾಯಿತು. ಕನ್ನಡವನ್ನು ಅಂತರ್ಜಾಲದಲ್ಲಿ ಮೂಡಿಸಲು ಆಸಕ್ತಿಯಿರುವವರಿಗಾಗಿ ಒಂದು ಮಾದರಿಯಂತೆ ರೂಪುಗೊಂಡಿರುವುದನ್ನು ನಾನು ಗಮನಿಸಿದ್ದೇನೆ. ಸಾಹಿತ್ಯದ ಗಾಂಭೀರ್ಯತೆಗೆ ತಕ್ಕ ಹಾಗೆ, ಹಾಗೂ ತಂತ್ರಜ್ಞಾನವನ್ನು ಕನ್ನಡಕ್ಕೆ ತರಬೇಕಾದಾಗ ಇರಲೇಬೇಕಾದ ಪರಿಶ್ರಮ ಎಲ್ಲವೂ ಇದರ ಹಿಂದಿದೆ.

ಇಷ್ಟಾಗ್ಯೂ ಅದರ ಸ್ಥಿತಿ ಏನೇನೂ ಉತ್ತಮವಾಗಿಲ್ಲ. ಒಂದು ಪ್ರೊಫೆಷಲ್ ತಂಡವನ್ನು ಕಟ್ಟಲು ಇಲ್ಲಿವರೆಗೂ ಸಾಧ್ಯವಾಗಿಲ್ಲ. ಇದು ಬಹುಮುಖ್ಯವಾಗಿ ಕನ್ನಡದ ವಿಚಾರದಲ್ಲಿ ಆಗಲೇಬೇಕಾದದ್ದು. ನಮ್ಮಲ್ಲಿ ತಂತ್ರಜ್ಞರಿಗೇನೂ ಕೊರತೆಯಿಲ್ಲ. ಹೀಗ ಇದ್ದೂ ಇದರ ಪರಿಸ್ಥಿತಿ ಏನೇನೂ ತೃಪ್ತಿಕರವಾಗಿಲ್ಲ ಎಂದರೆ, ನನಗೆ ಬಹಳ ಬೇಸರವಾಗತ್ತೆ. ಬರಿಯ ಹರಟೆ ಕಟ್ಟೆಗಳೇ ಅಂತರ್ಜಾಲದಲ್ಲಿ ಕನ್ನಡದ ಪ್ರತಿನಿಧಿಗಳಾಗಬೇಕೇ?.....ಇಂತಹ ವಿಚಾರ ಈ ಬಾರಿಯ ಸಂಪಾದಕೀಯವನ್ನು ಓದಿದಾಗ ಅನ್ನಿಸಿದ್ದು.

ನಿಮಗೇನನಿಸುತ್ತೆ...ಇದರ ಬಗ್ಗೆ ಕ್ರಿಯಾತ್ಮಕ ಚರ್ಚೆ ಸಾಧ್ಯವೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet