ಹಿಂದು ಧರ್ಮ ಸ್ವೀಕರಿಸಿದ ಜೂಲಿಯ ರಾಬರ್ಟ್ಸ್ ರನ್ನು ಯಾವ ಜಾತಿಗೆ ಸೇರಿಸಬೇಕು

ಹಿಂದು ಧರ್ಮ ಸ್ವೀಕರಿಸಿದ ಜೂಲಿಯ ರಾಬರ್ಟ್ಸ್ ರನ್ನು ಯಾವ ಜಾತಿಗೆ ಸೇರಿಸಬೇಕು

Comments

ಬರಹ

ಬೇರೆ ಧರ್ಮಗಳಿಂದ ಹಿಂದು ಧರ್ಮಕ್ಕೆ ಧರ್ಮಾಂತರ ಗೂಂಡ ಹಾಲಿವುಡ್ ನಟಿ ಜೂಲಿಯ ರಾಬರ್ಟ್ಸ್ರ ರಂಥವರನ್ನು ಚಾತುರ್ವರ್ಣ್ಯ ವರ್ಣಾಶ್ರಮ ಪದ್ದತಿಯಲ್ಲಿ ಯಾವ ವರ್ಣಕ್ಕೆ ಸೇರಿಸಬೇಕು. ಚಾತುರ್ವರ್ಣ್ಯ ವರ್ಣಾಶ್ರಮ ಪದ್ದತಿಯಲ್ಲಿ ಶ್ರೇಷ್ಠವಾದ ವರ್ಣವಾಗಿರುವ ಬ್ರಾಹ್ಮಣ ವರ್ಣದಲ್ಲಿ ಸೇರಿಸಿಕೂಳ್ಳಲು ಸಾಧ್ಯವೇ?. ಏಕೆಂದರೆ ಬ್ರಾಹ್ಮಣ ವರ್ಣಕ್ಕಿಂತ ಕೆಳಗಿನ ವರ್ಗದಲ್ಲಿ ಸೇರಿಸಿದೆ ಅಪಮಾನಿತರಾಗಿ ಮತ್ತೆ ಕ್ರೈಸ್ತ ಧರ್ಮಕ್ಕೆ ಮರಳುವ ಸಾಧ್ಯತೆಯಿದೆ.


 


ಈ ಪ್ರಶ್ನೆ ಯಾಕೆ ಕೇಳುತಿದ್ದೇನೆ ಎಂದರೆ, ಕೆಲವು ವರ್ಷಗಳ ಹಿಂದೆ ಬಳ್ಳರಿಯಲ್ಲಿ ನಡೆಯುತ್ತಿದ್ದ ವಿಶ್ವ ಹಿಂದು ಪರಿಷತ ಸಭೆ ಯಲ್ಲಿ, ಕ್ರೈಸ್ತ ಧರ್ಮದಿಂದ ಹಿಂದು ಧರ್ಮಕ್ಕೆ ಮರಳಿ ಮತಾಂತರ ವಾಗುವ ಇಛ್ಚೆ ವ್ಯಕ್ತಪಡಿಸಿ ಇದೇ ತರಹದ ಒಂದು ಪ್ರಶ್ನೆ ಸಭಿಕರ ಮುಂದಿಟ್ಟಿದ್ದಳು. ಆವಳು ಕೇಳಿದ ಪ್ರಶ್ನೆ: ಹಿಂದು ಧರ್ಮದಲ್ಲಿ ನನ್ನನ್ನು ಯಾವ ಜಾತಿಗೆ ಸೇರಿಸಿಕೂಳ್ಲುತ್ತೀರಿ. ಮುಂದೆ ನನ್ನ ಮಕ್ಕಳಿಗೆ ಯಾವ ಜಾತಿಯವರು ಮದುವೆ ಮಾಡಿಕೂಳ್ಳಲು ಮುಂದೆ ಬರುತ್ತಾರೆ?. ಆಗ ಯಾರೂ ಮುಂದೆ ಬರಲಿಲ್ಲ. ಹೀಗಾದರೆ ಹಿಂದು ಧರ್ಮ ಬಿಟ್ಟು ಹೋದ ಜನರು ಮರಳಿ ಹಿಂದು ಧರ್ಮಕ್ಕೆ ಬರುವುದಾದರೂ ಹೇಗೆ?. ಬರದಿದ್ದರೆ ಮುಂದೊಂದು ದಿನ ಹಿಂದು ಧರ್ಮದ ಅವಸಾನ ಖಂಡಿತ.


 


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet