ನನ್ನ ನಂಜಿ

ನನ್ನ ನಂಜಿ

ಒಂದಿನ ಬಸ್ಸಿನಲ್ಲಿ ಕಂಡೆ ಚಕೋರಿ
ಕಂಡ ಕೂಡಲೇ ಆಯಿತು ಎದೆಯಲಿ ಮಾರಾಮಾರಿ
ಇಣುಕತೊಡಗಿದೆ ಮತ್ತೆ ಬಾರಿ ಬಾರಿ
ಅವ್ಳು ನೋಡ್ಲೇ ಇಲ್ಲ ಒಂದೇ ಒಂದು ಸಾರಿ

ದಿನವೂ ಶುರುವಾಯ್ತು ಒಂದೇ ಒಂದು ರೋಗ
ಅವ್ಳು ಬಂದಾಗ ಆಗುತ್ತೆ ಉದ್ವೇಗ
ಗೊತ್ತಾಗೋಲ್ವೆ ಅವ್ಳನ್ ಮಾತಾಡ್ಸೋದು ಹೇಗ
ಶುರುವಾಗೇ ಬಿಡ್ತಲ್ಲ ಈ ಪ್ರೇಮ ರೋಗ

ಅವಳೆನ್ನ ಪ್ರೀತಿಯ ನಂಜಿ
ಅವ್ಳನ್ನು ನೋಡುತ್ತಾ ನಾನಾದೆ ಗಂಜಿ
ಮುಳುಗಿಸಿದಳು ಪ್ರೀತಿಯಲಿ ನನ್ನ ನಂಜಿ
ಕೊಟ್ಟೆ ಪತ್ರವ ಹೃದಯವನು ಹಿಂಜಿ

ಢವಢವ ಬಡಿದುಕೊಳ್ಳಹತ್ತಿತ್ತು ಎನ್ನ ಹೃದಯ
ಅವ್ಳು ಕೇಳಿದಳೆನ್ನ ಸ್ವಲ್ಪ ಸಮಯ
ಒಪ್ಪಿದೆನಾದರೂ ಕಳೆದಿಲ್ಲ ಭಯ
ಮರುದಿನ ನನಗೆ ಪ್ರೇಮೋದಯ

ಸ್ವಲ್ಪ ದಿನ ನಾನಿರಲಿಲ್ಲ ಊರಿನಲ್ಲಿ
ಬಂದ ಮೇಲೆ ಬಡಿಯಿತು ಸುದ್ದಿ ಕಿವಿಯಲ್ಲಿ
ಪರಪುರುಷನ ತೋಳ ತೆಕ್ಕೆಯಲ್ಲಿ
ಓಡಿಹೋಗಿದ್ದಳು ನನ್ನ ನಂಜಿ ಏರೋಪ್ಲೇನಿನಲ್ಲಿ

ವಿಷಕಾರಿದಳಲ್ಲಾ ನನ್ನ ಚಕೋರಿ.. ಪೋರಿ.. ಚಿತ್ತ ಚೋರಿ
ಈಗಲೂ ಆಗುತ್ತಿದೆ ಎದೆಯಲಿ ಮಾರಾಮಾರಿ
ಅದಕ್ಕೇ ಹಿರಿಯರು ಹೇಳ್ತಾರೆ ಮಾರಾಯ್ರಿ
ಪ್ರೀತೀಲಿ ಸಿಲುಕಬೇಡ ಏನಂತೀರಿ..?

:)

Rating
No votes yet

Comments