ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
ಬೆಳಗ್ಗೆನೇ ಖಾದಿ ಪ್ಯಾಂಟು, ಹಳೇ ಜುಬ್ಬ, ಕನ್ನಡಕ, ಹರಿದು ಹೋಗಿರೋ ಚೀಲಾನ ಸೈಡಿಗೆ ಹಾಕಿಕೊಂಡು ಸುಬ್ಬ ಹೋಗ್ತಿದ್ದ. ಯಾಕಲಾ ಸುಬ್ಬ ಹೆಂಗಿದ್ದನೂ ಹೆಂಗೆ ಆಗ್ಬಿಟ್ಟಿಯಲ್ಲೋ ಅಂದೆ. ನೋಡಲಾ ನಾನು ರವಿ ಬೆಳಗೆರೆ ತರಾ ತನಿಖಾ ವರದಿಗಾರ ಆಗ್ಬೇಕು ಅಂತಾ ಇದೀನಿ. ಅದಕ್ಕೆ ಇವೆಲ್ಲಾ ಡ್ರೆಸ್ಸ್ ಅಂದ. ನಾನು ಎಡಕ್ಕೆ ಇದ್ದರೆ ಅವನು ಬಲಕ್ಕೆ ನೋಡಿ ಮಾತಾಡೋನು. ಮಗಾ ಅವರ ಅಪ್ಪನ ಕನ್ನಡಕ ಹಾಕಿಕೊಂಡು ಬಂದಿದ್ದ. ಅಲ್ಲಿ ಅವರಪ್ಪ ಕೆರೆತಾವ ಹೋಗ್ಬೇಕು ಅಂತಾ ಕನ್ನಡಕ ಹುಡುಕ್ತಾ ಇದ್ನಂತೆ. ಲೇ ಸುಬ್ಬ ನಿನ್ನ ಮುಖಕ್ಕೆ ನಿಂಗನ ಅಂಗಡಿ ಟೀ ಚಲ್ಟ ಹುಯ್ಯಾ. ಮಗನೇ ತನಿಖಾ ವರದಿ ಅಂದ್ರೆ ಸುಲಭ ಏನಲಾ, ಸಾನೇ ಬುದ್ದಿ ಬೇಕು ಅಂಗೇ ಧೈರ್ಯ ಬೇಕು ಕಲಾ. ಸುಬ್ಬನ್ನ ಕಡೆಗೆ ದಿವಂಗತ ಸುಬ್ಬ ಆಗಿ ನೋಡ್ ಬೇಕಾಗುತ್ತೆ ಕಲಾ ಅಂದೆ. ಮತ್ತೆ ರವಿ ಬೆಳೆಗೆರೆ. ಲೇ ಅದನ್ನು ಬೇರೆಯವರು ಬರೀತಾರೆ. ಇವನು ಹಾಕ್ತಾನೆ ಅಟೆಯಾ. ಅದ್ರಾಗೆ ಬರೀ ಸುಳ್ಳೆ ಕಲಾ ಅಂದೆ. ಹಂಗಾರೆ ನಾನು ಅದಕ್ಕೆ ವರದಿಗಾರ ಆಯ್ತೀನಿ ಅಂತಾ. ಬೆಳಗೆರೆ ಭೇಟಿಯಾಗಿ, ಮಗಾ ಹಾಯ್ ಬೆಂಗಳೂರು ವರದಿಗಾರ ಅಂತಾ ಬರಸ್ಕಂಡು ಬಂದಿದ್ದ.
ಊರ್ನಾಗೆ ಯಾವುದೇ ಕಾರ್ಯಕ್ರಮ ಆದರೂ ಸುಬ್ಬನೇ ಮುಖ್ಯ ಅತಿಥಿ. ಗೌಡಪ್ಪ ನಮ್ಮನ್ಯಾಗೆ ನಡಿಯೋ ಸತ್ಯನಾರಾಯಣ ಪೂಜೆ, ತಿಥಿ ನ್ಯೂಸ್ ಕಳಿಸು ಅಂತಾ ಸುಬ್ಬಂಗೆ ನೂರು ರೂಪಾಯಿ ಕೊಟ್ಟು ಪೋಟೋನೂ ಕೊಟ್ಟಿದ್ದ. ಒಂದು ವಾರ ಆದ್ ಮ್ಯಾಕೆ ಆ ಕಡೆಯಿಂದ ಪತ್ರ ಬಂತು. ನಾವು ನಡೆಸುತ್ತಿರುವುದು ಹಾಯ್ ಬೆಂಗಳೂರ್ ಅಂತಾ, ಬಡ್ಡೆ ಐದ್ನೆ ಇಂತಹ ನ್ಯೂಸ್ ಮತ್ತೆ ಕಳಿಸಿದರೆ ಹುಡುಕಿಕೊಂಡು ಬಂದು ಹೊಡೆದು ಹೋಗುತ್ತೇವೆ. ಎಚ್ಚರ ಎಂದು. ನೋಡಲಾ ಕೋಮಲ್ ಒಂದು ತನಿಖಾ ವರದಿ ಕಳಿಸಿದೀನಿ. ಹೆಂಗೆ ಪೇಮಸ್ ಆಗ್ತೀನಿ ನೋಡು ಅಂದ. ಮಗಾ ನಿಂಗ ಚಾಗೆ ಸುಗರ್ ಹಾಕದೇ 2ರೂಪಾಯಿ ತಗೊಂತಾನೆ, ಇದು ಚಾ ಮಾಫಿಯಾ ಅಂತಾ ಕಳ್ಸಿದ್ದ. ಹೆದರಿಸಿ ದಿನಾ ಪುಕ್ಕಟೆ ಚಾ ಕುಡಿಯೋನು, ಅಂಗೇ ಕಟ್ಟಿಗೆ ಒಡಿಯೋ ಕಿಸ್ನ, ಗಾಡಿಗೆ 200ರೂಪಾಯಿ ತಗೊಂತಾನೆ, ಟಿಂಬರ್ ಮಾಫಿಯಾ ಅಂತಾ, ಮನೆ ಕಟ್ಟಿಗೆ ಒಡಿಸೋನು. ತಂತಿ ಪಕಡು ಸೀತು ಪುರೋಹಿತಕ್ಕೆ ಸಾನೇ ದುಡ್ಡು ಕೇಳ್ತಾನೆ. ಅಂಗೇ ಸತ್ಯನಾರಾಯಣ ಪ್ರಸಾದಕ್ಕೆ ಡಾಲ್ಡ ಹಾಕ್ತಾನೆ. ಇದರಿಂದ ಫುಡ್ ಪಾಯಿಸನ್ ಆಗುತ್ತೆ. ಪುರೋಹಿತ ಮಾಫಿಯಾಕ್ಕೆ ಕಡಿವಾಣ ಇಲ್ಲವೆ ಅಂತಾ ಪ್ರಶ್ನೆ ಮಡಗಿ ಕಳ್ಸಿದ್ದ. ಇದನ್ನ ಹೇಳಿ ಸೀತು ಇಂದ ಹಫ್ತಾ ವಸೂಲಿ ಮಾಡ್ತಿದ್ದ. ದಿನಕ್ಕೆ ಎರಡು ಕಟ್ಟು ಬೀಡಿ.
ಬೆಳಗ್ಗೆನೇ ಒಂದು ವ್ಯಾನ್ ತುಂಬಾ ಜನ ಬಂದು ಸುಬ್ಬಂಗೆ ನಾಯಿ ಹೊಡದಂಗೆ ಹೊಡೆದು ಹೋಗಿದ್ರು. ಆ ಮ್ಯಾಕೆ ಗೊತ್ತಾಗಿದ್ದು ಅವರೆಲ್ಲಾ ರವಿ ಬೆಳಗೆರೆ ಕಡೆಯವರು ಅಂತಾ. ಇದನ್ನೆಲ್ಲಾ ಓದೋ ಬದಲು ಆ ಸಮಯದಲ್ಲಿ ಒಂದು ನಾಕು ಹಿಂದಿ, ಇಂಗ್ಲೀಸ್, ಅರೆಬಿಕ್, ಇಸ್ರೇಲ್, ಅಮೆರಿಕನ್, ಪುಸ್ತಕ ಅನುವಾದ ಮಾಡ್ ಬೋದಿತ್ತಲ್ಲಾ ಅಂತಾ ರವಿ ಒಂದು ಫುಲ್ ಬಾಟಲ್ ಸುಕ್ಕಾ ಎಣ್ಣೆ, ಅಂಗೇ ಹತ್ತು ಪ್ಯಾಕ್ ಸಿಗರೇಟ್ ಹೊಡೆದಿದ್ನಂತೆ.
ಇಲ್ಲಾ ಕಲಾ ಈ ಬಾರಿ ತನಿಖಾ ವರದಿ ಕಳಸೇ ಕಳಿಸ್ತೀನಿ ಅಂತಾ ಗೌಡಪ್ಪನ ಹಿಂಬಾಲಿಸುವುದಕ್ಕೆ ಸುರು ಹಚ್ಕಂಡ. ಗೌಡಪ್ಪ ಎಲ್ಲಿ ಹೋಯ್ತಾನೋ ಇವನು ಅಲ್ಲೇ ಹೋಯ್ತಾ ಇದ್ದ. ಗೌಡಪ್ಪನ ಜೊತೆ ಯಾವಾಗಲೂ ಒಂದು ಹೆಣ್ಣು ಓಡಾಡುತ್ತೆ ಅಂತಾ ಅನುಮಾನ ಬಂದು ಪೋಟೋ ಬೇರೆ ತೆಗೆದಿದ್ದ. ಒಂದು ನಾಲ್ಕು ಪುಟ ವರದಿ, ಒಂದು ಹತ್ತು ಪೋಟೋ ಕಳಿಸಿದ. ಮುಂದಿನ ವಾರ ಬಂದೇ ಬಿಡ್ತು. ಊರಿನ ಗೌಡಪ್ಪ ಹೆಣ್ಣು ಮಕ್ಕಳೊಂದಿಗೆ ಚಕ್ಕಂದ - ವರದಿ ಸುಬ್ಬ. ಗೌಡಪ್ಪನ ನಾವು ತುಂಬಾ ಒಳ್ಳೇನು ಅಂದ್ಕಂಡಿದ್ವಿ. ಮಗಾ ದರ್ಬೇಸಿ ಕೆಲಸ ಮಾಡವ್ನೆ ಅಂತಾ ಎಲ್ಲಾರೂ ಉಗಿಯೋದೆಯಾ.
ಸುಬ್ಬ ಹೆಂಗಲಾ ಎಫೆಕ್ಟ್ ಅಂತಿದ್ದ. ನಿಂಗನ ಚಾ ಅಂಗಡೀಲಿ ಎಲ್ಲಾ ಕುಂತಿದ್ವಿ. ಗೌಡಪ್ಪ ಬಂದು ಸುಬ್ಬಂಗೆ ದಬಾ ದಬಾ ಅಂತ ಹೊಡೆದ. ಯಾಕ್ರೀ ಗೌಡರೆ, ಲೇ ನನ್ನ ಹೆಂಡರು ಅವ್ವಂಗೆ ಓಡಾಡಕ್ಕೆ ಬರಕ್ಕಿಲಾ ಕಲಾ. ಅದಕ್ಕೆ ಬೆಳಗ್ಗೆ ಕೆರೆತಾವ ಕರೆದುಕೊಂಡು ಹೋಗ್ತಾ ಇದ್ದರೆ ಮಗಾ ಹೆಂಗೆ ಬರೆದವ್ನೆ ನೋಡಲಾ ಅನ್ನೋನು ಒದಿಯೋನು. ಯಾಕಲಾ ಸುಬ್ಬ. ಗೌಡರೆ ಮತ್ತೆ ಆ ಯಮ್ಮ ದಪ್ಪಗೆ ಇತ್ತು. ಲೇ ಚಳಿ ಆಗ್ ಬಾರದು ಅಂತಾ ರಗ್ಗು ಹೊದಿಸಿದ್ದೆ ಕಲಾ ಅಂದ. 10ಲಕ್ಷಕ್ಕೆ ಮಾನನಷ್ಟ ಮೊಕದ್ದಮೆ ಹಾಕಿ ಗೌಡಪ್ಪ ಗೆದ್ದಿದಾನೆ. ಈಗ ದಿನಾ ಬೆಳಗ್ಗೆ ಗೌಡಪ್ಪನ ಮನ್ಯಾಗೆ ಇರೋ ಮುದುಕೀನ ಸುಬ್ಬನೇ ಕೆರೆತಾವ ಕರೆದುಕೊಂಡು ಹೋಗೋದು. ಎಡಗೈನಾಗೆ ಚೊಂಬು, ಬಲಗೈನಾಗೆ ಆ ಮುದುಕಿ ಕೈ, ತನಿಖಾ ವರದಿ ಅಂದ್ರೆ ಸಾಕು ಯಾರಲಾ ಅಂತ ಕಲ್ಲು ತಗೊಂಡು ಹುಡುಕ್ತಾನೆ,
Comments
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
In reply to ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ by prasannasp
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
In reply to ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ by komal kumar1231
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
In reply to ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ by komal kumar1231
ಉ: ಹಾಯ್ ಬೆಂಗಳೂರು - "ಭರ್ಜರಿ ಒದೆಗಳು"!
In reply to ಉ: ಹಾಯ್ ಬೆಂಗಳೂರು - "ಭರ್ಜರಿ ಒದೆಗಳು"! by manju787
ಉ: ಹಾಯ್ ಬೆಂಗಳೂರು - "ಭರ್ಜರಿ ಒದೆಗಳು"!
In reply to ಉ: ಹಾಯ್ ಬೆಂಗಳೂರು - "ಭರ್ಜರಿ ಒದೆಗಳು"! by komal kumar1231
ಉ: ಹಾಯ್ ಬೆಂಗಳೂರು - "ಭರ್ಜರಿ ಒದೆಗಳು"!
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
In reply to ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ by vsangur
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
In reply to ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ by gopinatha
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
In reply to ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ by komal kumar1231
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ
In reply to ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ by sudhichadaga
ಉ: ಹಾಯ್ ಬೆಂಗಳೂರು - ಪ್ರಸಿದ್ದ ತನಿಖಾ ವರದಿಗಾರ