ಆತ್ಮೀಯ ಸಂಪದಿಗರೇ ಹೆಸರಿಡಿ ಈ ಕವಿತೆಗೆ .........? ಗತಿ

ಆತ್ಮೀಯ ಸಂಪದಿಗರೇ ಹೆಸರಿಡಿ ಈ ಕವಿತೆಗೆ .........? ಗತಿ

 

ದಾರಿಯೇ

ಸದಾ
 ಬಾ
ನನ್ನ

ಕ್ರಮಿಸು
ಎನ್ನುತ್ತಿರುವ,
ಈ ಪಯಣದ
ನಿರಂತರತೆಯ

ಕೊಂಡಿಯ
ನಡುವೆ

ಏರಲು ಇಳಿಯಲು
ಯಾವ ನಿಲ್ದಾಣವೂ
ಇಲ್ಲ
ಏನನ್ನೂ ಕ್ರಮಿಸದೇ  
ಎಲ್ಲವ ತಲುಪುವ
ಗುಣ
ಹಳತಾಗದ
ನಿರಂತರತೆಯ
ಹಿಂದಿನಿಂದ ಇಂದಿನ
ಮುಂದಕ್ಕೋ
ಮುಂದಿನ
ಹಿಂದಕ್ಕೋ
ವಿಧಿಯಿಲ್ಲದ
ಕ್ರಮದೆ
ಸರಿದಾಟ

ಸಂಪದಿಗರೇ


ನನ್ನ ನಲ್ಮೆಯ ಧನ್ಯವಾದಗಳು.


ನಿಮ್ಮೆಲ್ಲರ ಆಸಕ್ತಿಯುತ ಪ್ರೋತ್ಸಾಹಭರಿತ ಪ್ರತಿಕ್ರಿಯೆಗೆ ನನ್ನ ನಮನಗಳು


ಜೀವನ ಯಾನ , ನಿರಂತರ, "ಅಶಾಶ್ವತ , ಮುಗಿಯದ ಪಯಣ, ಯಾನ' ಪರಂಪರೆ',ಗಮ್ಯ

,ಕಾಲ",ಬದುಕು,'`ಗತಿ.


ನೀವು ಕೊಟ್ಟಿದ್ದು ಈ ಮೇಲಿನ  ಹೆಸರುಗಳು, "


ನಿಜವಾಗಿಯೂ ಇದು ಮನಸ್ಸಿನ ಯೋಚನಾ ಗತಿಯ ಭ್ರಮಣದ ರೀತಿ ಅಥವಾ ದಾರಿ


ನನ್ನ ಎಣಿಕೆ ಇದಾಗಿತ್ತು   


 "ಭ್ರಮಣ"

 

Rating
No votes yet

Comments