ಮನಸ್ಸು ಮತ್ತು ಸಂತಸ
ಎಷ್ಟೊ ದಿನಗಳಿಂದ ಬರೀಬೇಕು ಅನ್ದ್ಕೋತಿದೀನಿ...
ಬರಿಯೋಕೆ ವಿಷಯ ಏನೋ ಬಹಳಷ್ಟಿದೆ..ಆದ್ರೆ ಬರಿಯೋದನ್ದ್ರೆ ಸುಲಭಾನ..!!
ತಾಳ್ಮೆ ಬೇಕಲ್ಲ..ಮನಸ್ಸಿನ ಯೊಚನೆಗ್ಳು ವ್ಯಕ್ತಪಡಿಸೋ ಉದ್ದೇಶ ಇದ್ದರೆ,ಮಾತಿನ ರೂಪದಲ್ಲೇನೊ ಸುಲಭವಾಗಿ ಹೊರಬರತ್ವೆ,
ಆದ್ರೆ ಬರಿಯೋದನ್ನೋದು ಆತ್ಮ ನಿವೇದನೆಯ ಪ್ರಾಮಣಿಕ ಮಾದ್ಯಮ ಆಗಿರೋದ್ರಿಂದ, ಈ ಮನಸ್ಸನ್ನು ಕೂಡ ಬರಿಯಕ್ಕೆ ಒಪ್ಪಿಸೋದು ತುಂಬಾನೇ ಕಷ್ಟ.
ಸೊ ಪ್ರತಿಯೊಂದು ಕ್ಷಣನೂ ತನ್ನ ಯೊಚನೆನ ಬದಲಯ್ಸಿಕೊಳ್ಳೊ,ಉತ್ತಮಗೊಳಿಸಿಕೊಳ್ಳೊ ಮನಸು ತನ್ನ ಭಾವನೆಗಳಿಗೆ ಸ್ಪಷ್ಟತೆ ಕೊಡೋಕೆ ಬಯಪಡತ್ತೆ..
ಆದ್ರೂ ಈ ಕ್ಷಣದ ನನ್ನ ಒಂದು ವಿಷಯದ ಕಡೆ ಇರೋ ಅನಿಸಿಕೆಗಳನ್ನ ಅಕ್ಷರಗಳಾಗಿಸ್ತಿದೀನಿ..
ವಿಷಯಕ್ಕೆ ಬರ್ತೀನಿ. ನಾನು ಯಾವಾಗ್ಲೂ ಯೋಚಿಸ್ತಿದ್ದೆ ಈ ಸಂತೋಷ ಅನ್ನೋದು ಯಾವುದ್ರಲ್ಲಿದೆ..?
ಜೀವನದಲ್ಲಿ ಪ್ರತಿಯೊಂದು ನಿಮಿಷನೂ ಖುಷಿಯಾಗಿ ಹೇಗಿರೋದು..???
ನಮ್ಮ ಹಳ್ಳಿಯಲ್ಲಿ ಆಗಾಗ ಹೇಳ್ತಿರ್ತಾರೆ..ಈ ಹಳ್ಳಿಯಲ್ಲೇನಿದೆ ನೀರಸ ಜೀವನ.
ಮಾತು ಅಂತೇನಾದ್ರೂ ಆಡಿದ್ರೆ,ಕೆಲಸಕ್ಕೆ ಬರುವವರ ಜೊತೆ..ಯಾವಾಗ್ಲೂ ಕಾಣಿಸೊ ಈ ಮಂಗಗಳ ಜೊತೆ
ಎಲ್ಲಾದ್ರೂ ಹೋಗೋದಿದ್ರೆ ಅದು ಈ ಸಣ್ಣ ಜಗತ್ನೊಳಗೆ, ಇದೂ ಒಂದು ಬದುಕಾ..??
ಸಿಟಿಯಲ್ಲಾದ್ರೆ ಎಷ್ಟು ಚನ್ನಾಗಿರತ್ತೆ,ಸುತ್ಲೂ ಎಷ್ಟೊಂದು ಜನರಿರ್ತಾರೆ,ಮಾಡಿರೋ ಕೆಲ್ಸಕ್ಕೆ ರಿಕೊಗ್ನಿಶನ್ ಇರತ್ತೆ,ಸರ್ಕಲ್ ವಿಶಾಲವಾಗಿರತ್ತೆ
ಒಟ್ಟಿನಲ್ಲಿ ಜೀವನ ರಸಮಯವಾಗಿರತ್ತೆ.
ಇದು ನಿಜಾನ....??? ನಂಗೇನೋ ಹಾಗನ್ಸಲ್ಲ,ಈ ಪಟ್ಟಣದಲ್ಲೂ ಎಷ್ಟು ಜನರ ಬದುಕು ರಸಮಯವಾಗಿದೆ ಹೇಳಿ....!!!
ಮೊನ್ನೆ ತಾನೆ ನಾನು ಒಂದು ಚಿತ್ರಗೀತೆ ಕೇಳಿದೆ..
"ಬೂಮಿಯೆ ಹಾಸಿಗೆ ಗಗನವೆ ಹೊದಿಕೆ ಕಣ್ತುಂಬ ನಿದ್ರೆ ಬಡವನಿಗೆ,ಮೆತ್ತನೆ ಹಾಸಿಗೆ ಸುಖದ ಸುಪ್ಪತ್ತಿಗೆ ಬಾರದು ನಿದ್ರೆ ಧನಿಕನಿಗೆ",
ಯೋಚಿಸ್ತಿದ್ದೆ ಇದು ಎಷ್ಟರಮಟ್ಟಿಗೆ ಸರೀಂತಾ..ಹಾಗಾದ್ರೆ ಈ ದುಡ್ದಿಲ್ದೆ ಇರೋದ್ರಲ್ಲಿ ನೆಮ್ಮದಿ ಖುಶಿ ಎಲ್ಲ ಇದೆಯಾ ಅಥ್ವ ದುಡ್ದಲ್ಲಿದೆಯಾ..!!!
ಏರಡ್ರಲ್ಲೂ ಇಲ್ಲ ಅನ್ಸತ್ತೆ.. ದುಡ್ದಿಲ್ದೇ ಇರೋರಿಗೆ ಸುಖನಿದ್ರೆ ಅನ್ನೋದು ಎಷ್ಟು ಸುಳ್ಳೊ..ದುಡ್ದಿರೋನಿಗೆ ನೆಮ್ಮದಿ ಇಲ್ಲ ಅನ್ನೋದು ಅಷ್ಟೇ ಸುಳ್ಳು.
ಎಲ್ರಿಗೂ ಅವರವರ ಚಿಂತೆ ಇರತ್ತೆ..ಅವರಲ್ಲಿರೋ ವ್ಯತ್ಯಾಸನಾದ್ರೂ ಏನು;ಒಬ್ರು ಬುದ್ದಿಶಕ್ತೀನ ದುಡಿಸಿಕೊಂಡ್ರೆ ಇನ್ನೊಬ್ರು ದೇಹಾನ..!!!
ಎರಡಕ್ಕೂ ಅದರ ಕಷ್ಟ ಇರೋಲ್ವಾ.? ಒಬ್ರಿಗೆ ದೊಡ್ಡ ದೊಡ್ದ ಕನಸುಗಳಲ್ಲಿ ಬದುಕಾದ್ರೆ ಇನ್ನೊಬ್ರು ವಾಸ್ತವದಲ್ಲಿ ಬದುಕ್ತಾರೆ..ಇದ್ರಲ್ಲಿ ಸಂತೊಷದ ಪ್ರಶ್ನೆ ಇದೆಯ..ಇದೊಂದು ಯಾಂತ್ರಿಕ ಜೀವನ ಅಷ್ಟೆ.
ಈ ಸಂತೋಶ ಸಕ್ಸಸ್ ಮತ್ತೆ ಖ್ಯಾತಿಯಲ್ಲೇನಾದ್ರೂ ಇದೆಯಾ..ಇದ್ದಿದ್ರೆ ಚನ್ನಾಗಿರೋದು..ಆದ್ರೆ ಅದು ನಮಗೆ ನೆಮ್ಮದಿ ಸಂತೋಶದ ಬದ್ಲು ಅದನ್ನು ಹೆಚ್ಚೆಚ್ಚು ಪಡೆಯೋ ಬಯಕೇನ ತರತ್ತೆ.ಇವತ್ತು ನಮ್ಮದಿರೋದು ನಾಳೆ ಪರರದ್ದಾಗತ್ತೆ,ನಾವು ಆಗಿಹೋದ ಮೇಲೆ ನಮಗೆ ಈ ಖ್ಯಾತಿಯಿಂದೇನಾಗಬೇಕಿದೆ....ಇಂದಿನ ಬದುಕು ಹೆಚ್ಚು ಪ್ರಾಮುಖ್ಯವಲ್ಲವೇ..?
ಹಾಗಾದ್ರೆ ಸನ್ಯಾಸಿಗಳು ಎಲ್ಲನೂ ತ್ಯಜಿಸಿದವ್ರು ನಿರ್ಲಿಪ್ತತೆಯ ಮೂರ್ತಿಗ್ಳು ಖುಶಿಯಾಗಿರ್ತಾರ..???
ಹಾಗಾದ್ರೆ ಅದನ್ನೇ ಹುಡುಕಿ ಅವರೇಕೆ ಪರಿತಪಿಸ್ತಾರೆ..!!!!
ಏಲ್ರೂ ಹೇಳ್ತಾರೆ ಮನಸ್ಸು ತುಂಬ ಚಂಚಲ ಅದರ ಮಾತನ್ನ ಖಂಡಿತ ಕೇಳಕೂಡದು..ಹಾಗೇ ಇರ್ಬೇಕ..?
ನಮಗೆ ಆತ್ಮ ಅಂತ ಇದ್ದರೆ ಅದು ನಮ್ಮ ಜೊತೆ ಸಂಭಾಷಿಸುವ ಮಾದ್ಯಮ ಯಾವ್ದು ಹೇಳಿ.....ಮನಸ್ಸೇ ತಾನೆ!!!
ಹಾಗಾದ್ರೆ ಯಾಕೆ ನಾವು ಅದನ್ನು ನಿಗ್ರಹಿಸ್ಬೇಕು, ಅದಕ್ಕೆ ಅದರ ಸ್ಥಾನಾನ ಕೊಡೋನಾ..ಅದು ಹೇಳೊ ತರಹ ಆ ಕ್ಷಣದಲ್ಲಿ ಇದ್ದು ನೋಡೋಣ, ನಾವೆಷ್ಟು ಖುಶಿಪಡ್ತೀವೀಂತಾ. ಹೇಗೆ ಹನಿ ಹನಿ ಸೇರಿ ಹಳ್ಳಾನೋ ಹಾಗೇನೆ ಕ್ಷಣಗಳು ಸೇರೇನೆ ಬದುಕು..ಒಂದು ಮಗು ಯಾವಾಗೂ ಖುಶಿಯಾಗಿ ಯಾಕಿರತ್ತೆ..ಅದು ಮನಸಿನ ಮಾತನ್ನೇ ಕೇಳೋದ್ರಿಂದ, ಹಾಗಾದ್ರೆ ಹುಟ್ಟಿನ ಜೊತೆ ಕಲಿತ ಪ್ರಕೃತಿ ಕಲಿಸಿದ ಪಾಠಾನ ಮುಂದೆ ಯಾಕೆ ಮರೀತೀವಿ.
ಇದರ ಜೊತೆ ಜೊತೆಗೆ ಅಂದುಕೊಂಡಿರೋದನ್ನ ಮಾಡ್ತಿರುವಾಗ ಸಿಗುವ ಖುಷಿಗೆ ಕೊಪ್ಪರಿಗೆ ದುಡ್ಡು ಬೆಟ್ಟದಶ್ಟು ಖ್ಯಾತಿ ಏನನ್ನೂ ಗಣನೆಗೇ ತೆಗೆದುಕೊಳ್ದೆ ಇರೋ ನಿರ್ಲಿಪ್ತತೆ ಏನೂ ಸಮನಲ್ಲ.ಹಾಗಾದ್ರೆ ಮನಸ್ಸಿಗೆ ಕಡಿವಾಣ ಯಾಕೆ ಹಾಕ್ತೀವಿ..ಅದನ್ನ ಹರಿಯಲು ಬಿಡೋಣ..ಹೊಸ ಹೊಸ ವಿಷಯಗಳಿಗೆ ತಲೆಹಾಕಬಿಡೋಣ..ರಿಸ್ಕ್ ತಗೋತ ಅದ್ರ ಖುಷೀನ ಸವಿಯೋಣ.
ಈ ಜಗತ್ತೆ ನಮ್ಮಲ್ಲಿರೋವಾಗ ಮನಸ್ಸಿಗೆ ತನ್ನ ಗುರಿ ಗೊತ್ತು. ನಾವೇ ಮಾಡಿಕೊಂಡಿರೋ ಸರಿ ತಪ್ಪಿನ ಪರಿಧಿ ಗೊತ್ತು..ಅದಕ್ಕೆ ಇಷ್ಟ ಇದ್ದರೆ ಪಾಲಿಸತ್ತೆ ಇಲ್ದೇ ಇದ್ರೇ ಸಮಾಜದ ಸರಿ ತಪ್ಪಿನ ಪರಿಕಲ್ಪನೇನೆ ಬದ್ಲಾಗಬಹುದು..ಆಗಾಧವಾದ ಮನಶ್ಶಕ್ತಿ ಇರೋವಾಗ ಕುರಿಗ್ಳಂತೆ ನಾವ್ಯಾಕೆ ಸಮಾಜದ ಪರಿಧೀಲಿ ಬದುಕ್ಬೇಕು..!!
ಅದನ್ನ ವಿಷ್ಲೇಶಿಸಿ ಬೇಕಿದ್ದಲ್ಲಿ ಹೊಸದನ್ನ ಸೃಷ್ಟಿಸೋ ಸಾಮರ್ಥ್ಯ ಪ್ರತಿಯೊಬ್ರಿಗೂ ಇದೆ ತಾನೆ!!!ಸೊ ಮನಸ್ಸೊಪ್ಪೊ ಕೆಲಸ ಮಾಡ್ತ, ಆ ಕೆಲ್ಸದಲ್ಲಿ ಪ್ರತಿ ಕ್ಷಣ ತೊಡಗಿಸಿಕೊಳ್ಳೋದ್ರಲ್ಲೇ ಸಂತೋಶ ಇದೆಯಲ್ವೆ...!!!
Comments
ಮನಸಿನೊಳಗಿರುವ "ಆಪಾದಕ"!