ಕವನ ಹುಟ್ಟಬೇಕಾದರೆ....

ಕವನ ಹುಟ್ಟಬೇಕಾದರೆ....

ಭಾವಾತಿರೇಕದಲ್ಲಿ ಹುಟ್ಟುವುದೇ ಕವನ?


ಮಾಡಬೇಕು ಏನೆಲ್ಲ ಹೋಮ ಹವನ


ಓದಿಕೊಂಡಿರಬೇಕು ಬಾಳಿನ ಸಾಹಿತ್ಯವನ್ನ


ಕವ್ಯಲಕ್ಷ್ಮಿಯ ತಿಜೋರಿಗೆ ಹಾಕಬೇಕು ಕನ್ನ


ಸದಾಕಾಲ ತೆರೆದಿಟ್ಟು  ಮನ - ಮುಖದ ಕಣ್ಣ


ಮೀಸಲಿಡಬೇಕು ದಿನದ ಒಂದೆರೆಡು ಪ್ರಶಾಂತ ಗಂಟೆಗಳನ್ನ


ಮತ್ತು  ಹೊಟ್ಟೆಗಿರಬೇಕು ಒಂದಿಷ್ಟು ಅನ್ನ!

Rating
No votes yet

Comments