ಮಾನವನನ್ನು ಸ್ಕೂಲಿಗೆ ಕರೆದೊಯ್ಯುವ ಮಯೂರ
ಮನುಷ್ಯ ಕಲಿಯಬೇಕಾಗಿರುವುದು ಅಪಾರ. ಅದು ತನ್ನ ಸುತ್ತಮುತ್ತಲಿನ ಪರಿಸರದಿಂದಿರಬಹುದು ಅಥವಾ ಪ್ರ್ರಾಣಿ-ಪಕ್ಷಿಗಳಿಂದಿರಬಹುದು. ಭೂಮಿಯಿಂದ ಕ್ಷಮಾಗುಣ, ಗಿಡಮರಗಳಿಂದ ನಿಸ್ವಾರ್ಥತೆ, ನಾಯಿಯಿಂದ ಪ್ರಾಮಾಣಿಕತೆ, ಕಾಗೆಯಿಂದ ಹಂಚಿತಿನ್ನುವ ಬುದ್ಧಿ ಇತ್ಯಾದಿ. ಹಾಗೇ ಅನಕ್ಷರಸ್ಥ ಮಾನವನನ್ನ ಅಕ್ಷರಸ್ಥನನ್ನಾಗಿ ಮಾಡಲು, ಶಾಲೆಗೆ ಕರೆದೊಯ್ಯುವ / ಶ್ರಮಿಸುವ ಅಥವಾ ಪ್ರಯತ್ನಪಡುವ ನವಿಲಿನ ಬಗ್ಗೆ ಹೇಳಲು ನಾನು ಖಂಡಿತಾ ಹೊರಟಿಲ್ಲ. ನಮ್ಮ ಎದುರುಗಡೆ ಮನೆ ಹುಡುಗರು ಮಾನವ್ ಮತ್ತು ಮಯೂರ್. ಮಯೂರ ಈಗಷ್ಟೆ ಬಾಲವಾಡಿಗೆ ಹೋಗಲು ಆರಂಭಿಸಿದ್ದಾನೆ. ಸ್ಕೂಲು ಬೇಡವೆಂದು ಅಳುವ ಅವನನ್ನು ಪುಸಲಾಯಿಸಲು ಅವನ ತಾತ ಅಣ್ಣನನ್ನೂ ಜೊತೆಗೆ ಕರೆದುಕೊಂಡು ಹೋಗಲು ಹೇಳಿದ ಮಾತು “ ಮಯೂರ, ಮಾನವ್ ನೂ ಕರ್ಕೊಂಡು ಹೋಗ್ತೀಯಾ ಸ್ಕೂಲಿಗೆ? ಅಣ್ಣಾನೂ ಬರ್ತಾನೆ ನಿಂಜೊತೆ ಆಗ ಹೋಗ್ತೀಯಾ” ಅಂತ ಕೇಳ್ತಿದ್ರು. ಆ ಮಾತನ್ನ ನಿಮಗೆ ಹೇಳಿದೆ ಅಷ್ಟೆ! :-)
Rating
Comments
ಉ: ಮಾನವನನ್ನು ಸ್ಕೂಲಿಗೆ ಕರೆದೊಯ್ಯುವ ಮಯೂರ
In reply to ಉ: ಮಾನವನನ್ನು ಸ್ಕೂಲಿಗೆ ಕರೆದೊಯ್ಯುವ ಮಯೂರ by asuhegde
ಉ: ಮಾನವನನ್ನು ಸ್ಕೂಲಿಗೆ ಕರೆದೊಯ್ಯುವ ಮಯೂರ
ಉ: ಮಾನವನನ್ನು ಸ್ಕೂಲಿಗೆ ಕರೆದೊಯ್ಯುವ ಮಯೂರ
ಉ: ಮಾನವನನ್ನು ಸ್ಕೂಲಿಗೆ ಕರೆದೊಯ್ಯುವ ಮಯೂರ