revital - ಇವರ ಜಾಹೀರಾತು ಕೇಳಿಯೇ ಕನ್ನಡಿಗ ಸುಸ್ತು

revital - ಇವರ ಜಾಹೀರಾತು ಕೇಳಿಯೇ ಕನ್ನಡಿಗ ಸುಸ್ತು

ranbaxy ಕಂಪೆನಿಯವರು ತಯಾರಿಸಿ ಮಾರ್ತಿರೋ ಗುಳಿಗೆಯೊಂದರೆ ಹೆಸರು revital. ಇದರ ಜಾಹೀರಾತು FM ಚಾನಲ್‍ನಲ್ಲಿ ಕೇಳಿಯೇ ಕನ್ನಡಿಗರು ಸುಸ್ತು ಹೊಡೀತಾರೆ !! ಯಾಕಂತೀರಾ?

 

ಕನ್ನಡಿಗರೇ ಹೆಚ್ಚಿರುವ ಬೆಂಗಳೂರಲ್ಲಿ, ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ FM ಚಾನಲ್‍ನಲ್ಲಿ ಇವರು ಹಿಂದೀಲಿ ಜಾಹೀರಾತು ನೀಡ್ತಾರೆ. ಕನ್ನಡದಲ್ಲಿ ಜಾಹೀರಾತು ಮಾಡೋ ಮೂಲಕ ಹೆಚ್ಚು ಜನರಿಗೆ ಉತ್ಪನ್ನದ ಬಗ್ಗೆ ತಿಳಿಸಬಹುದು ಎಂಬ ಕಾಮನ್ ಸೆನ್ಸ್ ಇವರಿಗೆ ಇಲ್ಲವಾಗದೇ ಹೋಯ್ತಲ್ಲಾ ಅಂತ ಯೋಚುಸ್ತಾ, ಕನ್ನಡಿಗರು ಸುಸ್ತು ಹೊಡೆದಿದಾರೆ.

 

ಬೆಂಗಳೂರಿನಲ್ಲಿ ಜನರನ್ನು ತಲುಪಬೇಕಾದರೆ ಕನ್ನಡ ಭಾಷೆಯೊಂದೇ ಸಹಾಯ ಮಾಡಬಲ್ಲದು ಅಂತ ಇವರಿಗೆ ತಿಳಿಸಬೇಕಾಗಿದೆ. ಬನ್ನಿ, ಇವರಿಗೆ ನಾವೆಲ್ಲಾ ಮಿಂಚೆ ಬರೆದು ತಮ್ಮ ಜಾಹೀರಾತುಗಳಲ್ಲಿ ಕನ್ನಡ ಬಳಸಲು ಹೇಳೋಣ. ಬೆಂಗಳೂರಲ್ಲಿ ಹಿಂದಿ ಜಾಹೀರಾತು ನೀಡೋದು ಸುಮ್ನೆ ದುಡ್ಡು ದಂಡ ಅಂತ ಹೇಳೋಣ

 

ಇಲ್ಲಿಗೆ ಬರೆಯಿರಿ  krishnan.ramalingam@ranbaxy.comranbir.bakshi@ranbaxy.com

Rating
No votes yet

Comments