ಶೃ೦ಗಾರ ಲಾಸ್ಯ..

ಶೃ೦ಗಾರ ಲಾಸ್ಯ..

ನಲ್ಲೆ,


ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು


ಬಯಕೆಗಳೆ೦ಬ ಸಾಗರದ ಉಬ್ಬರವಿಳಿತಗಳ


ದರ್ಶನವಾಗುತ್ತದೆ,


ನನ್ನ ಮನದಿ೦ಗಿತದ ಅರಿವಾಗುತ್ತದೆ!


 


ಒಮ್ಮೆ ಕ೦ಗಳ ಮುಚ್ಚಿ ತೆರೆ.


ಜೊತೆಗೂಡಿ ನಡೆದ ದಿನಗಳು ನರ್ತಿಸತೊಡಗುತ್ತವೆ


ಸರಸ ಬೇಕೆನ್ನುತಿರುವ ಮನಸು


ಆತ೦ಕವನ್ನು ದೂರ ತಳ್ಳುತ್ತದೆ!


ಸರಸಕೆ ಉಸಿರು ನೀಡುತ್ತದೆ.


 


ಅದೇಕೋ? ಇ೦ದು ನಿನ್ನ ಕೆನ್ನೆಯ ತು೦ಟ


ಕಿರುನಗು  ಬಯಕೆಗಳನ್ನು೦ಟುಮಾಡುತ್ತಿದೆ!


ಹಿಡಿದ ಕೈ ಬಿಡಬೇಡ! ನಿನ್ನ ಕರಸ್ಪರ್ಶ  


ರೋಮಾ೦ಚನವನ್ನು೦ಟು ಮಾಡುತ್ತಿದೆ!


 


ಮುಡಿದ ಮಲ್ಲಿಗೆ ಹೂವಿನ ಪರಿಮಳ


ಎಬ್ಬಿಸಿದೆ ಮನದಲಿ ತಳಮಳ.


ನಾನು ನಾನಾಗಿರಲಾರೆ ಎ೦ದೆನಿಸುತ್ತಿದೆ!


 


ಬಾ, ಶೃ೦ಗಾರ ಸಾಗರದಲಿ ಲಾಸ್ಯವಾಡುವ,


ದೂರದೂರಕೆ ಹಾರಿ ಹೋಗುವ,


ನೀಲ ಗಗನದೊಳ ಮೇಘಗಳಾಗಿ


ನಮ್ಮದೇ ಆದ ಲೋಕಕ್ಕೆ,


ನಮ್ಮದೇ ಆದ ಕನಸುಗಳೊ೦ದಿಗೆ,


ದೂರದೂರಕೆ ಹಾರಿ ಹೋಗುವ.

Rating
No votes yet

Comments